ಯು.ಕೆಯಿಂದ ಯುಗಾದಿ ಹಬ್ಬದ ಕರೆಯೋಲೆ
ಮತ್ತೆ ಕನ್ನಡ ಬಾಂಧವರೆಲ್ಲ ಸೇರಿ ನಕ್ಕು, ನಲಿಸಿ ಮತ್ತು ನಲಿಯುವ ಕ್ಷಣಗಳು ಸಮೀಪಿಸಿದೆ. "ಸರ್ವಧಾರಿ" ಸಂವತ್ಸರದ ಆಗಮನವನ್ನು ನಾವೆಲ್ಲರೂ ಕೂಡಿ ಆನಂದದಿಂದ ಸ್ವಾಗತಿಸೋಣ. ಇದೇ ಏಪ್ರಿಲ್ 19 ರಂದು ಲೀಟನ್ ಪಾರ್ಕ್ ಸ್ಕೂಲಿನಲ್ಲಿ ಕನ್ನಡಿಗರು ಯು.ಕೆ ನಿಮ್ಮೊಂದಿಗೆ ಯುಗಾದಿ ಹಬ್ಬವನ್ನು ಆಚರಿಸು ಸಿದ್ಧವಾಗಿದೆ. ನೀವು, ನಿಮ್ಮ ಪರಿವಾರ ಮತ್ತು ಗೆಳೆಯರ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಕನ್ನಡ ಸಂಸ್ಕೃತಿಯನ್ನು ಈ ಆಂಗ್ಲ ನಾಡಿನಲ್ಲಿ ಭದ್ರವಾಗಿ ತಳವೂರಲು ಸಹಾಯ ಮಾಡಬೇಕೆಂದು ಕೋರುತ್ತೇವೆ.
ಕನ್ನಡಿಗರು ಯು.ಕೆ ಯ ಯುಗಾದಿಗೆ ವಿಷೇಶತೆ ಏನಿದೆ? 2007 ರ ಯುಗಾದಿ ನೊಡಿದ್ರೆ ನೆನಪು ಮಾಡ್ಕೊಳ್ಳಿ. ಸುಮಾರು 300 ಕನ್ನಡಿಗರು ಒಂದೇ ಸೂರಿನಲ್ಲಿ ಸೇರಿದ್ದೆವಲ್ಲವೆ? ಅನು ಸೋನು ಡಾನ್ಸ್, ವಿಜು ಅಂಡ್ ಶ್ರೀದೇವಿ ಹಾಡುಗಳು, ಕಡೆಗೆ ಹುಚ್ಚೆದ್ದು ಕುಣಿದಿದ್ದು....ಮತ್ತೆ ಸೂಪರ್ ಮಂಡಿಗೆ ಊಟ. ಸೊ, ಸ್ಪೆಷಲ್ ಇದ್ದೇ ಇದೆ.
ಈ ಕಾರ್ಯಕ್ರಮದ ಗುಣಮಟ್ಟವನ್ನು ಕಾಯ್ದುಕೊಂಡು ಮತ್ತೆ ಅದನ್ನು ಇನ್ನೂ ಹೆಚ್ಚಿನ ಮತ್ತಕ್ಕೆ ಒಯ್ಯುವುದು ಹೇಗೆಂದು ಸಮಿತಿಯವರೆಲ್ಲ ಕೂತು, ತಲೆ ಕೆಡಿಸಿಕೊಂಡು ಚುರುಕಾಗಿ ಕೆಲಸ ಮಾಡ್ತಾ ಇದಾರೆ. "ಯಾವ ರೀತಿ ಮಾಡಿದ್ರೆ ಎಲ್ಲರಿಗೂ ಖುಷಿ ಕೊಡುತ್ತೆ" ಆಂತ ಯದ್ವಾ ತದ್ವಾ ತಲೆ ಬಿಸಿ ಮಾಡಿಕೊಂಡು ಓಡಾಡ್ತ ಇದಾರೆ. ಕೆಲವು ಸರ್ತೀ, ಈ ಪರಿ ಟೆಂಷನ್ ಹುಡುಗ್ರಲ್ಲಿ ನೋಡಕ್ಕೆ ಚೆನ್ನ.
ಈ ಬಾರಿ ಯುಗಾದಿ ಹಬ್ಬದ ಪೂಜೆ, ಬೇವು ಬೆಲ್ಲ, ಮಕ್ಕಳ ಮತ್ತು ದೊಡ್ಡವರ ನೃತ್ಯ ಗಾಯನ ಮತ್ತೆ ಇದಕ್ಕೆಲ್ಲ ಕಿರೀಟವಿಟ್ಟಂತೆ ಆದರ್ಶ ದಂಪತಿಗಳು ಸ್ಪರ್ಧೆ ಮತ್ತು ಸಾಮೂಹಿಕ ಅಂತ್ಯಾಕ್ಷರಿ ಆಟಗಳನ್ನು ಯೋಜಿಸಲಾಗಿದೆ.
ಇವೆಲ್ಲ ಆ ದಿನದ ಕಾರ್ಯಕ್ರಮಗಳಾದರೆ, ಅದಕ್ಕೆ ಮುಂಚೆ ಈ ಯುಗಾದಿಗೆ ನಾವೊಂದು ಸ್ಪರ್ಧೆ ಇಡೋಣ ಅಂತ ಅಂದ್ಕೊಂಡೀವಿ. ಅದೇನಂದ್ರೆ ನೀವು "ಯುಗಾದಿ" ಯನ್ನು ಒಂದು ಚಿತ್ರಣ (ಅಂದ್ರೆ "ಥೀಮ್") ಆಗಿ ಇಟ್ಕೊಂಡು ಒಂದು ಕವನ, ಕಥೆ, ಲೇಖನ ಅಥವಾ ಅನುಭವದ ಲೇಖನ ಇವುಗಳಲ್ಲಿ ಯಾವುದನ್ನಾದರು ನಮಗೆ ಬರೆದು ಕಳಿಸಿ. ಹಾಸ್ಯ ಇದ್ದರು ಸರಿ ಅಥವಾ ಸೀರಿಯಸ್ ಆಗಿದ್ರೂ ಪರವಾಗಿಲ್ಲ. ಒಟ್ಟಿನಲ್ಲಿ ನೀವು ಬರೆದರೆ ಸಾಕು. ಅದನ್ನು ನಮ್ಮ ಈ-ಮೈಲ್, ಅಥವಾ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮಾಡಿಬಿಡಿ :
ಪವನ್ ಮೈಸೂರ್,52, Bywood, Bracknell, Berkshire RG12 7RF
ಹೇಗೊ, ನಿಮ್ಮ ಕಯ್ಯಲ್ಲಿ ಬರೆಸ ಬೇಕೆಂಬ ಅಪೇಕ್ಷೆ ಅಷ್ಟೆ. ಇಲ್ಲಿ ಎಲ್ಲರ ಜತೆ ಚಾಲ್ಲೆಂಜ್ ಮಾಡಿದಿನಿ, "ನಮ್ಮ ಕನ್ನಡಿಗರು ಸುಮ್ನೆ ಅಲ್ಲ ನೋಡ್ತಾ ಇರಿ ಸಖತ್ ಬರೆದು ಕಳಿಸ್ತಾರೆ" ಅಂತ. ಬರೆದದ್ದು ವ್ಯರ್ಥ ಆಗಲ್ಲ. ಇದ್ದಿದ್ದರಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿ (ಆಯ್ಕೆಗಾರರು ಸದ್ಯಕ್ಕೆ ಸೀಕ್ರೇಟ್, ಆಮೇಲೆ ಹೇಳ್ತೀನಿ) ಅದನ್ನು ವೇದಿಕೆ ಮೇಲೆ ಓದಿಸ್ತೇವೆ. ಮತ್ತು, ಬರೆದ ಎಲ್ಲರಿಗೂ ಎನಾದರೂ ಬಹುಮಾನ ಇದ್ದೇ ಇದೆ. ಬರೆಯುವುದು ಮುಖ್ಯ ಅಲ್ವೇ?
ಹಾಂ... ಮರೆತಿದ್ದೆ... ನಿಮ್ಮ ಲೇಖನ ಕನ್ನಡದಲ್ಲಿ ಇದ್ದರೆ ತುಂಬ ಒಳ್ಳೆದು. "ಇಲ್ಲ ನನಗೆ ಕನ್ನಡ ಬರೆಯಲು ಬರಲ್ಲ" ಅಂದ್ರೆ, ಇಂಗ್ಲಿಷ್ ನಲ್ಲಿ ಬರೆದು ಕಳಿಸಿ. ಆದೂ ಕೂಡಾ ನಮ್ಮ ಭಾಷೆನೇ.. ಏನಂತೀರ ?ನನ್ನ ಚಾಲೆಂಜ್ ನಿಮ್ಮ ಪ್ರತಿಭೆಯ ಅಭಿವ್ಯಕ್ತಿ ಈಗ ನಿಮ್ಮ ಪೆನ್ ಮತ್ತು ಪೇಪರಿನಲ್ಲ್ಲಿ ಇದೆ. ಹಾಗೆಯೆ ನಿಮ್ಮ ಯಾವುದೆ ಪ್ರತಿಭೆಗಳನ್ನು ಬೆಳಕಿಗೆ ತರುವುದು ಕನ್ನಡಿಗರು ಯು.ಕೆ ಯ ಉದ್ದೇಶ. ನೀವು ನಿಮ್ಮ ಚಿತ್ರ ಕಲೆ, ಲಲಿತ ಕಲೆ ಅಥವಾ ಮತ್ಯಾವುದಾದರೂ ಕಲೆಯ ಪ್ರದರ್ಶನವ್ನ್ನು ಈ ಯುಗಾದಿ (ಏಪ್ರಿಲ್ 19ರಂದು) ಮಾಡಬಹುದಾಗಿದೆ. ವಿವರಗಳಿಗಾಗಿ
ನಮ್ಮ ಈ-ಮೈಲ್ ಗೆಗೆ ಎರಡಕ್ಷರ ಬರೆದುಬಿಡಿ.
ನೀವೆಲ್ಲರೂ ಬರ್ತೀರ ಅಂತ ಕಾದು ಕೂತಿದೀವಿ. ದಯಮಾಡಿ ನೀವು, ನಿಮ್ಮ ಪರಿವಾರ ಮತ್ತು ಸ್ನೇಹಿತರು ಆಗಮಿಸಬೇಕೆಂದು ಕೋರುತ್ತೇವೆ. ನೀವಿಲ್ಲದೆ ಯುಗಾದಿ ಹಬ್ಬಕ್ಕೆ ಕಳೆ ಕಟ್ಟುವುದಾದರೂ ಎಂತು?
ದಿನಾಂಕ, ಸ್ಥಳ ಮತ್ತು ವೇಳೆ :ಶನಿವಾರ, ಏಪ್ರಿಲ್ 19 ನೆಯ ತಾರೀಕು 11 ಘಂಟೆಯಿಂದ ಸಂಜೆ 6ರ ವರೆಗೆ, ಲೀಟನ್ ಪಾರ್ಕ್ ಸ್ಕೂಲ್
ಶಿನ್ ಫೀಲ್ಡ್ ರೋಡ್ (ರೆಡಿಂಗ್ ಯುನಿವರ್ಸಿಟಿ ಹತ್ತಿರ)ರೆಡಿಂಗ್ RG2 7DE
ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಆನ್-ಲೈನ್ ರಿಜಿಸ್ಟರ್ ಮಾಡಿ,
ನೊಂದಣಿ http://www.kannadigaruuk.com/calendar/Register.htm
ಮುಂದಿನ ವಿವರಗಳಿಗೆ ಕ್ಲಿಕ್ಕಿಸಿ ಕನ್ನಡಿಗರು. ಯು.ಕೆ
ಕನ್ನಡಿಗರು ಯು.ಕೆ ಯುಗಾದಿ ಸಮಿತಿಯ ಪರವಾಗಿ,
ಪವನ್ ಮೈಸೂರ್, ಕನ್ನಡಿಗರು.ಯು.ಕೆ












Click it and Unblock the Notifications