• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಡಿಲಿನ ಮರಿ ಭಗತ್‌ ಸಿಂಗ್‌ ಮತ್ತು ನಮ್ಮ ಹುಡುಗರು!

By Staff
|

ಭಗತ್‌ ಸಿಂಗ್‌ ಬದುಕಿದ್ದು, ಕೇವಲ 23ವರ್ಷ! ಆದರೆ ಸಾಧನೆ? ಅದು ಅಪರಿಮಿತ! ಮಾ.23 ಭಗತ್‌ ಸಿಂಗ್‌ ದೇಶಕ್ಕೆ ಪ್ರಾಣ ಅರ್ಪಿಸಿದ ಮಹತ್ವದ ದಿನ. ಜನ್ಮಭೂಮಿಯ ಸ್ವಾತಂತ್ರ್ಯಕ್ಕಾಗಿ ಸಿಡಿದೆದ್ದ ಭಗತ್‌ ಸಿಂಗ್‌ರ 75ನೇ ಪುಣ್ಯತಿಥಿ ಆಚರಣೆಗೆ, ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲೊಂದು ಅಕ್ಷರ ನಮಸ್ಕಾರ.

ಶರತ್‌ ಯೆಳಂದೂರು,ಬ್ಲೂಮಿಂಗ್ಟನ್‌ - ಇಲಿನಾಯ್‌

Bhagat Singhs familyಮಾರ್ಚ್‌ 23ನೇ ತಾರೀಖು ಬರುತ್ತಿದ್ದಂತೆ ನನಗೆ ಒಂದು ರೀತಿಯ ತಳಮಳ, ಹೊಟ್ಟೆಯಲ್ಲಿ ಸಂಕಟ, ಎದೆಯಲ್ಲಿ ಅದೇನೋ ಒಂದು ರೀತಿಯ ನೋವು. ಕಾರಣ ಮಾರ್ಚ್‌ 23 ಭಗತ್‌ ಸಿಂಗ್‌, ಸುಖದೇವ್‌ ಹಾಗು ರಾಜ್‌ಗುರು ಎಂಬ ಮೂವರು ವೀರ ಯುವಕರು ದೇಶಕ್ಕಾಗಿ ಮರಣವನ್ನಪ್ಪಿದ ದಿನ.

1931 ಮಾರ್ಚ್‌ 23ರಂದು ಬ್ರಿಟೀಷರು 23 ವರ್ಷದ ಈ ಮೂರು ಯುವಕರನ್ನು ಗಲ್ಲಿಗೇರಿಸಿದ ದಿನ. ಆ ಮೂರು ಯುವಕರು ಬದುಕಿದ್ದು ಕೇವಲ 23 ವರ್ಷ. ಆದರೆ ಸಾಧಿಸಿದ್ದು ಮಾತ್ರ ಬೆಲೆ ಕಟ್ಟಲಾಗದಷ್ಟು.

ಆಧುನಿಕ ಭಾರತದ 23 ವರ್ಷದ ಇಂದಿನ ಯುವಕರನ್ನು ಮಾತನಾಡಿಸಿ ನೋಡಿ. ನನಗೆ ಅಮೆರಿಕಾಗೆ ಹೋಗಿ ಹಣ ಸಂಪಾದಿಸಬೇಕು, ಅದೇ ಕಂಪೆನಿಯಲ್ಲಿ ಕೆಲಸ ಹಿಡಿದು ಲೈಫ್‌ನಲ್ಲಿ ಮಜವಾಗಿರಬೇಕು, ಆ ಹುಡುಗಿಯನ್ನು ಹೇಗಾದರು ಮಾಡಿ ಪ್ರೀತಿಸಿ ಒಲಿಸಿ ಕೊಳ್ಳಬೇಕು....

ಹೀಗೆ ಸ್ವಹಿತಾಸಕ್ತಿಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ದೇಶಕ್ಕಾಗಿ, ನಮ್ಮ ಜನರಿಗಾಗಿ ಏನಾದರು ಮಾಡಬೇಕೆಂಬ ತುಡಿತವಿರುವ ಯುವಕರು ಸಿಕ್ಕುವುದು ಬಹು ವಿರಳ. ಇನ್ನು ಜನ ಸೇವೆ ಮಾಡುವ ನೆಪದಲ್ಲಿ ಅಧಿಕಾರ ಹಿಡಿಯುವ ರಾಜಕಾರಣಿಗಳ ನಾನು ಏನನ್ನೂ ಬರೆಯುವುದಿಲ್ಲ !

ಈ ವರ್ಷ ತುಂಬ ವಿಶೇಷವಾದ ವರ್ಷ. ಏಕೆಂದರೆ ಮಾರ್ಚ್‌ 23 -ಭಗತ್‌ ಸಿಂಗನ 75ನೇ ಪುಣ್ಯ ತಿಥಿ ಹಾಗು ಇದೇ ವರ್ಷದ ಸೆಪ್ಟೆಂಬರ್‌ 28 ಭಗತ್‌ನ ಜನ್ಮ ಶತಮಾನೋತ್ಸವದ ಪ್ರಾರಂಭದ ದಿನ (ಹುಟ್ಟಿದ್ದು ಸೆಪ್ಟೆಂಬರ್‌ 28 1907)

ಸಿಡಿಲಿನ ಮರಿ ಭಗತ್‌ರ ಬಾಲ್ಯ ಹೇಗಿತ್ತು? :

1907 ಸೆಪ್ಟೆಂಬರ್‌ 28ರಂದು ಸಿಕ್‌ ಪರಿವಾರವಾದ ಕಿಷನ್‌ ಸಿಂಗ್‌ ಸಂದು ಹಾಗು ವಿದ್ಯಾವತಿಯವರಿಗೆ ಹುಟ್ಟಿದವರು ಭಗತ್‌ ಸಿಂಗ್‌. ಹುಟ್ಟಿದೂರು, ಇಂದಿನ ಪಾಕಿಸ್ತಾನ್‌ ಪ್ರಾಂತ್ಯಕ್ಕೆ ಸೇರಿರುವ ಪಂಜಾಬಿನ ಲೈಲಾಪುರ ಜಿಲ್ಲೆಯ ಕಾತ್ಕರ್‌ ಕಲನ್‌ (ಕಾತ್ಕರ್‌ ಕಲ ಎಂದೂ ಕರೆಯುತ್ತಾರೆ) ಎಂಬ ಹಳ್ಳಿಯಲ್ಲಿ.

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ 1919ರಲ್ಲಿ ನಡೆದಾಗ ಬಾಲಕ ಭಗತನಿಗೆ ಕೇವಲ ಹನ್ನೆರಡು ವರ್ಷ. ಆದರೆ ಆ ಘಟನೆ ಬಾಲಕನ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತು. ಎಂತಹ ಭಾರತೀಯನಿಗೂ ಮನ ಕಲಕುವ ಘಟನೆ ಅದು.

ಕಣ್ಣಲ್ಲಿ ಸ್ವಾತಂತ್ರ್ಯದ ಕಿಚ್ಚು :

ಮುಂದೆ ಮಹಾತ್ಮಾ ಗಾಂಧೀಜಿಯವರು 1920ರಲ್ಲಿ ಬ್ರಿಟೀಷರ ವಿರುದ್ಧ ಅಸಹಕಾರ ಚಳುವಳಿ ನಡೆಸಿದಾಗ ಭಗತ್‌ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ. ಹದಿಮೂರು ವರ್ಷದ ಬಾಲಕನಿಗೆ ಆಗಲೆ ಅಪರಿಮಿತ ವಿಶ್ವಾಸ ಇನ್ನೇನು ದೇಶಕ್ಕೆ ಸ್ವಾತಂತ್ರ್ಯ ಬಂದೇ ಬಿಟ್ಟಿತು ಎಂಬಂತೆ, ಆದರೆ ಮುಂದೆ 1922ರಲ್ಲಿ ಚೌರಾ-ಚೌರಿ ಪ್ರಕರಣದಿಂದಾಗಿ ಗಾಂಧೀಜಿಯವರು ತಮ್ಮ ಅಸಹಕಾರ ಚಳುವಳಿಯನ್ನು ಹಿಂದಕ್ಕೆ ಪಡೆದಾಗ ಭಗತನಿಗೆ ಬಹಳ ನಿರಾಸೆ.

ನಂತರ ವಿದ್ಯಾಭ್ಯಾಸಕ್ಕಾಗಿ ಲಾಹೋರಿನ ಕಾಲೇಜಿಗೆ ಸೇರುತ್ತಾನೆ. ಅದೇ ಸಮಯದಲ್ಲಿ ಮನೆಯವರಿಂದ ಮದುವೆಗೆ ಒತ್ತಾಯ ಬರುತ್ತದೆ. ಸ್ವಾತಂತ್ರದ ಜಪವನ್ನೇ ಸದಾ ಕನಸು-ಮನಸ್ಸಿನಲ್ಲಿ ಜಪಿಸುತ್ತಿದ್ದ ಭಗತ್‌ ವಿದ್ಯಾಭ್ಯಾಸ, ಮದುವೆ ಎಲ್ಲವನ್ನು ತೊರೆದು ದೇಶ ಸೇವೆಗಾಗಿ ಜೀವನ ಮುಡಿಪಾಗಿಡಲು ಮನೆಯಲ್ಲಿ ಯಾರಿಗು ತಿಳಿಸದೆ ಓಡಿಬಂದು ಹಿಂದುಸ್ತಾನ್‌ ರಿಪಬ್ಲಿಕನ್‌ ಆಸೋಸಿಯೇಷನ್‌್‌ (HRA : Hindustan Republican Association)ಸೇರುತ್ತಾನೆ.

ಸ್ವಲ್ಪವೇ ಕಾಲದಲ್ಲಿ ಅನೇಕ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಾ ಎಲ್ಲಾ ಕ್ರಾಂತಿಕಾರಿಗಳ ಮೆಚ್ಚುಗೆ ಪಡೆಯುತ್ತಾನೆ. ಮುಂದೆ HRAಯನ್ನು ಹಿಂದುಸ್ತಾನ್‌ ಸೋಷಿಯಲಿಸ್ಟ್‌ ರಿಪಬ್ಲಿಕನ್‌ ಆಸೋಸಿಯೇಷನ್‌ (HSRA : Hindustan Socialist Republican Association) ಆಗಿ ಪರಿವರ್ತಿಸುವಲ್ಲಿ ಭಗತನ ಪಾತ್ರ ಹಿರಿದಾದುದು.

HSRA ಮುಖ್ಯಸ್ಥ ಚಂದ್ರಶೇಖರ ಆಜಾದ್‌ರಿಗೆ ಭಗತನ ಬಗ್ಗೆ ವಿಶೇಷ ಒಲವು. ಆವನ ವಿಚಾರಧಾರೆಗಳಿಗೆ ಎಲ್ಲರೂ ತಲೆ ದೂಗುವವರೆ. HSRA ಗುರಿ ಕೇವಲ ದೇಶಕ್ಕೆ ಸ್ವಾತಂತ್ರ್ಯ ತರುವುದಷ್ಟೇ ಆಗದೆ ಸ್ವಾತಂತ್ರ್ಯ ಬಂದ ನಂತರದ ಪರಿಸ್ಥಿತಿಗಳ ಬಗ್ಗೆ ಹಾಗು ಅವನ್ನು ನಿಭಾಯಿಸುವ ಬಗ್ಗೆ ಅವನು ತಳೆದಿದ್ದ ವಿಚಾರಧಾರೆಗಳಿಗೆ ಎಂತಹವರೂ ತಲೆದೂಗಲೇ ಬೇಕು. ಇದಕ್ಕೆ ಸ್ಪಷ್ಟ ಉದಾಹರಣೆ 'ಪೂರ್ಣ ಸ್ವರಾಜ್‌" ಮಂತ್ರ ಅಂದರೆ ಸಂಪೂರ್ಣ ಸ್ವಾತಂತ್ರ್ಯ.

ಕಾಂಗ್ರೆಸ್‌ ಕೂಡ ಒಂದು ಸಮಯದಲ್ಲಿ ಅರ್ಧ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿತ್ತು. ಅಂದರೆ ಹುಕುಮತ್‌ ಮಾಡುವವರು ಬ್ರಿಟೀಷರು ನಮ್ಮವರು ಹೆಸರಿಗೆ ಅಧಿಕಾರಸ್ಥರು !! ಆದರೆ ಯಾವಾಗ ಭಗತ್‌ ಸಿಂಗ್‌ ದೇಶದಲ್ಲೆಲ್ಲಾ ಪೂರ್ಣ ಸ್ವರಾಜ್‌ ಮಂತ್ರ ಮೊಳಗಿಸ ತೊಡಗಿದನೋ ಕಾಂಗ್ರೆಸ್‌ ಕೂಡ ತನ್ನ ವಿಚಾರಧಾರೆಯನ್ನು ಬದಲಿಸಿಕೊಳ್ಳಬೇಕಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X