ಟಿಪ್ಸ್ : ರೇಷ್ಮೆ ಸೀರೆ ಬಣ್ಣ ಹಾಗೂ ಜರಿ
- ಪಾವನಿ
ಸೀರೆ ಬಣ್ಣಗುಂದುವುದು ಯಾವಾಗ ? - ಪ್ರಿಂಟೆಡ್ ಸೀರೆಯನ್ನು ಬಿಸಿ ನೀರಿನಲ್ಲಿ ತೋಯಿಸಿದಾಗ.
- ಬಹಳ ದೀರ್ಘ ಕಾಲ ನೀರಿನಲ್ಲಿ ನೆನೆಯಲು ಬಿಟ್ಟಲ್ಲಿ, ಅಥವಾ ಸುಡು ಬಿಸಿಲಿನಲ್ಲಿ ಬಹು ಕಾಲ ಒಣಗಲು ಬಿಟ್ಟಾಗ, ಅಥವಾ ಸೀರೆಯಲ್ಲಿ ಹೆಚ್ಚು ನೀರನ್ನು ಉಳಿಸಿದ್ದಲ್ಲಿ.
- ಕೀಳು ಮಟ್ಟದ ಸಾಬೂನನ್ನು ಬಳಸಿದಾಗ ಅಥವಾ ಸೀರೆಯ ಮೇಲೆ ಒರಟು ಸಾಬೂನಿನಿಂದ ತಿಕ್ಕಿದಾಗ.
- ಬಿಸಿಲಲ್ಲಿ ಒಣಗಿಸಿದಲ್ಲಿ ಅಥವಾ ವಿಪರೀತ ಬಿಸಿಯಾಗಿರುವ ಇಸ್ತ್ರಿ ಪೆಟ್ಟಿಗೆ ಬಳಸಿ ಇಸ್ತ್ರಿ ಮಾಡಿದಲ್ಲಿ.
- ಎಣ್ಣೆ, ಸೆಂಟ್, ಟೀ ಪಾನೀಯಗಳು, ಬೆವರು ಇತ್ಯಾದಿ ಸೀರೆಗೆ ಅಂಟಿಕೊಂಡಲ್ಲಿ.
- ಚಿನ್ನ ಅಥವಾ ಬೆಳ್ಳಿಯ ಜರಿಯುಳ್ಳ ಸೀರೆಯನ್ನು ಬಹಳ ಕಾಲ ಪೆಟ್ಟಿಗೆಯಲ್ಲಿ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದಲ್ಲಿ ಅಥವಾ ನ್ಯಾಫ್ತಲೀನ್ ಗುಳಿಗಳನ್ನು ಹಾಕಿ ದೀರ್ಘ ಕಾಲ ಇಟ್ಟಲ್ಲಿ .
- ಎಣ್ಣೆ, ಸೆಂಟ್, ಟೀ ಪಾನೀಯಗಳು ಬೆವರು ಇತ್ಯಾದಿ ದ್ರವಗಳು ಜರಿಗೆ ಅಂಟಿದಲ್ಲಿ .
- ಜರಿ ಮೇಲ್ಭಾಗದಲ್ಲಿ ನೇರವಾಗಿ ಸಾಬೂನಿನಿಂದ ಉಜ್ಜಿದಲ್ಲಿ .
- ಬಿಸಿಯಾದ ಇಸ್ತ್ರಿ ಪೆಟ್ಟಿಗೆಯನ್ನು ಜರಿ ಮೇಲ್ಭಾಗದಲ್ಲಿ ಉಜ್ಜಿದಲ್ಲಿ .
ಮುಖಪುಟ / ಎನ್‌ಆರ್‌ಐ












Click it and Unblock the Notifications