Get Updates
Get notified of breaking news, exclusive insights, and must-see stories!

ಕಾರ್ಯಕಾರಿಸಮಿತಿ ಆಯ್ಕೆಗೆ ಡಿ.14ರಂದು ‘ಕಾವೇರಿ’ಸಭೆ

ಹೊಸ ವರ್ಷ ಹೊಸಿತಿಲಲ್ಲಿರುವಂತೆಯೇ ಕನ್ನಡ ಸಂಘಗಳಲ್ಲಿ ವರ್ಷಾಂತ್ಯದ ವಿಧಿ ವಿಧಾನಗಳ ಚಟುವಟಿಕೆ ಜೋರಾಗಿದೆ. ಹಳೆಯ ಕಾರ್ಯಕಾರಿ ಸಮಿತಿಗೆ ವಿದಾಯ, ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆ- ಇದೆಲ್ಲಾ ವರ್ಷಂಪ್ರತಿ ಆಗಲೇಬೇಕು. ಕನ್ನಡ ಚಟುವಟಿಕೆಗಳು ನಿರಂತರವಾಗಿರಬೇಕು.

ಅಮೆರಿಕೆಯ ಬಹು ಮುಖ್ಯ ಕನ್ನಡ ಸಂಘಗಳಲ್ಲೊಂದಾದ ವಾಷಿಂಗ್ಟನ್‌ ಡಿ.ಸಿ.ಯ ‘ಕಾವೇರಿ ಕನ್ನಡ ಸಂಘ’ ಕೂಡ ಹೊಸ ಕಾರ್ಯಕಾರಿ ಸಮಿತಿಯ ಆಯ್ಕೆಗೆ ಸಜ್ಜಾಗಿದೆ. ಬರುವ ಡಿಸೆಂಬರ್‌ 14 ರ ಶನಿವಾರ ಕಾವೇರಿ ಕನ್ನಡ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದೆ. 2002 ನೇ ಸಾಲಿನ ಕಾರ್ಯಕಾರಿ ಸಮಿತಿಯ ಸಾಧನೆಗಳ ಸಮೀಕ್ಷೆ, ವರ್ಷದ ವಿತ್ತ ವರದಿಯ ಮಂಡನೆ ಹಾಗೂ 2003 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ- ಸರ್ವ ಸದಸ್ಯರ ಸಭೆಯ ಉದ್ದೇಶ.

ಡಿ.14, ಶನಿವಾರದ ಕಾರ್ಯಕ್ರಮದಲ್ಲಿ ಸ್ವಾದಿಷ್ಟ ಊಟವೂ ಒಂದಂಗವಾಗಿದೆ. ಕಾವೇರಿ ಸ್ವಯಂಸೇವಕರು ಈ ರಸಪಾಕವನ್ನು ಸಿದ್ಧಗೊಳಿಸುವರು.

ಶ್ರೀ ಶಿವ ವಿಷ್ಣು ದೇಗುಲದ ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ, ಸಂಜೆ 5 ರಿಂದ ರಾತ್ರಿ 8 ರವರೆಗೆ. ಪ್ರವೇಶ ಶುಲ್ಕವಿಲ್ಲ.

(ಕಾವೇರಿ ವಾರ್ತೆ)

ಡಿ.8 ರಂದು ಭೂಮಿಕಾ ವಾರ್ಷಿಕ ಮಂಥನ :

‘ಭೂಮಿಕಾ’ ಬಳಗದ ವರ್ಷಾಂತ್ಯದ ಕೊನೆಯ ಕಾರ್ಯಕ್ರಮ ಡಿಸೆಂಬರ್‌ 8 ರ ಭಾನುವಾರ Bauer Community Center ನಲ್ಲಿ ನಡೆಯಲಿದೆ. ಮಧ್ಯಾಹ್ನ 2 ಕ್ಕೆ ಕಾರ್ಯಕ್ರಮ ಪ್ರಾರಂಭ. ಈ ವಾರ್ಷಿಕ ಮಂಥನ ಕಾರ್ಯಕ್ರಮದಲ್ಲಿ ಮುಕ್ತ ಸಲಹೆ-ಸೂಚನೆಗಳಿಗೆ ಸ್ವಾಗತ. ಇದೇ ಸಂದರ್ಭದಲ್ಲಿ ‘ಕರ್ನಾಟಕದ ಮೂಲಗಳು’ (Roots of Karnatakas) ವಿಷಯದ ಕುರಿತು ಡಾ.ನರೇಂದ್ರ ಕುಮಾರ್‌ ಉಪನ್ಯಾಸ ನೀಡುವರು.

(ಭೂಮಿಕಾ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+