LPG Good News: ಬೆಂಗಳೂರು ಹೋಟೆಲ್‌ಗಳಿಗೆ 17,5000 ಸಿಲಿಂಡರ್ ವಿತರಣೆ: ಕೆಎಚ್ ಮುನಿಯಪ್ಪ
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ನಾಗರಿಕರು, ಹೋಟೆಲ್ ಉದ್ಯಮಿಗಳು ಸಂಕಷ್ಟ ಎದುರಿಸುವಂತಾಗಿದೆ. ಇದೀಗ ಬೆಂಗಳೂರು ಹೋಟೆಲ್ ಮಾಲೀಕರಿಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಗುಡ್ ನ್ಯೂಸ್ ನೀಡಿದ್ದಾರೆ. ನಾಳೆ ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, 10,000 ಕ್ಕೆ ಬದಲಾಗಿ ಹೆಚ್ಚುವರಿಯಾಗಿ 17,500 ವಾಣಿಜ್ಯ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಕ್ರಿಯೆಗೆ ಕೊಂಚ ಸಮಯ ಹಿಡಿಯಬಹುದು ಎಲ್ಲರು ಸಹಿಕರಿಸುವಂತೆ ಅವರು ತಿಳಿಸಿದ್ದಾರೆ. ನಾಳೆಯಿಂದ ಸಮಸ್ಯೆ ಬಗೆಹರಿಯಲಿದೆ. ದೇಶಿಯ ಸಿಲಿಂಡರ್ ವಿತರಣೆಯಲ್ಲೂ ಸಮಸ್ಯೆ ಆಗುತ್ತಿದ್ದು, ಗ್ರಾಹಕರು ಡಿಸ್ಟ್ರಿಬ್ಯೂಟರ್‍ಗಳ ಕಚೇರಿ, ಏಜೆನ್ಸಿಗಳ ಮುಂದೆ ಹೋಗದಂತೆ ಸಚಿವರು ಮನವಿ ಮಾಡಿಕೊಂಡಿದ್ದಾರೆ.

ಸದ್ಯ ವಾಣಿಜ್ಯ ಸಿಲಿಂಡರ್ ಇಲ್ಲದೇ ಪರತಪಿಸುತ್ತಿದ್ದ ಬೆಂಗಳೂರು ಹೋಟೆಲ್ ಉದ್ಯಮಿಗಳು ಅಗತ್ಯ ಸಿಲಿಂಡರ್ ಪಡೆಯಲಿದ್ದಾರೆ. ಇಷ್ಟು ಸಿಲಿಂಡರ್ ಒಂದೇ ದಿನದಲ್ಲಿ ಪೂರೈಕೆ ಮಾಡಲು ಆಗುವುದಿಲ್ಲ. ಕ್ರಮೇಣ ಪೂರೈಕೆ ಆಗಲಿದೆ. ಇದರಿಂದ ಊಟ-ತಿಂಡಿ ಬಿಲ್‌ಗಳಲ್ಲಿ ಸೇರಿಸಲಾಗಿದ್ದ ಗ್ಯಾಸ್ ಬಿಲ್ ಕೈಬಿಡುವ ಸಾಧ್ಯತೆ ಇದೆ. ಇದು ಗ್ರಾಹಕರಿಗೆ ಗುಡ್‌ನ್ಯೂಸ್ ಕೊಟ್ಟಂತಾಗಿದೆ.
ನಗರ ಪ್ರದೇಶಗಳಲ್ಲಿ ಮನೆ ಬಳಕೆ ಗ್ಯಾಸ್ ಸಿಲಿಂಡರ್ ಬುಕ್ ಆದ ನಂತರದ 25 ದಿನಕ್ಕೆ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ಈ ಅವಧಿ ಸಿಮೀತಗೊಳಿಸಲಾಗಿದೆ. ಒಂದು ವೇಳೆ ಮನೆ ಬಳಿಕ ಸಿಲಿಂಡರ್ ಅನ್ನು ವಾಣಿಜ್ಯ ಬಳಕೆಗೆ ಬಳಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.
ಸೌದೆ, ಸ್ಟೌ ಬಳಸಲು ಸಚಿವರ ಮನವಿ
ಯುದ್ಧದ ಪರಿಸ್ಥಿತಿ ಇದ್ದು, ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದೆ. ಹಿಗಾಗಿ ನರದ ಜನರು ಎಲೆಕ್ಟ್ರಿಕ್ ಸ್ಟೌ ಉಪಯೋಗಿಸಬೇಕು. ಹಳ್ಳಿ ಭಾಗದ ಜನರು ಇನ್ನಷ್ಟು ದಿನ ಸೌದೆ ಬಳಸುವಂತೆ ಸಚಿವರು ಮನವಿ ಮಾಡಿದ್ದಾರೆ. ಸದ್ಯ ತೈಲ ಹಡಗುಗಳು ಭಾರತಕ್ಕೆ ಬರುತ್ತಿವೆ. ಆದಷ್ಟು ಶೀಘ್ರವೇ ಈ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ನೀಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.












Click it and Unblock the Notifications