Chicken Leg Piece: ಚಿಕನ್‌ ಲೆಗ್‌ ಪೀಸ್‌ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ

ಉತ್ತರ ಪ್ರದೇಶ: ಮದುವೆ ಅಂದಮೇಲೆ ಅಲ್ಲಿ ತಮಾಷೆ, ಸಡಗರ ಇರುವುದು ಸಹಜ. ಆದರೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಒಂದು ಮದುವೆ ಸಮಾರಂಭ ಮಾತ್ರ ಅಕ್ಷರಶಃ ಕುಸ್ತಿ ಅಖಾಡವಾಗಿ ಬದಲಾಗಿದೆ. ಇದಕ್ಕೆ ಕಾರಣವಾದದ್ದು ಮಾತ್ರ ಅತಿ ವಿಚಿತ್ರ, ಅದು ಬಿರಿಯಾನಿಯಲ್ಲಿನ 'ಚಿಕನ್ ಲೆಗ್ ಪೀಸ್' (Chicken Leg Piece)!. ಹೌದು, ಲೆಗ್‌ಪೀಸ್‌ಗಾಗಿ ಮದುವೆ ಸಮಾರಂಭ ರಣರಂಗವಾಗಿದೆ.

ಲೆಗ್ ಪೀಸ್ ಇಲ್ಲದ್ದಕ್ಕೆ ಶುರುವಾಯ್ತು ಗಲಾಟೆ

ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ಧೂರಿಯಾಗಿ ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಅತಿಥಿಗಳು ಊಟಕ್ಕೆ ಕುಳಿತಾಗ ಬಿರಿಯಾನಿ ಬಡಿಸಲಾಯಿತು. ಆದರೆ, ಕೆಲವು ಅತಿಥಿಗಳಿಗೆ ಬಡಿಸಿದ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್‌ಗಳು ಇರಲಿಲ್ಲ. ಈ ಸಣ್ಣ ವಿಷಯವೇ ದೊಡ್ಡ ವಿವಾದಕ್ಕೆ ಕಾರಣವಾಯಿತು. ಮೊದಲು ಬಡಿಸುವವರೊಂದಿಗೆ ಆರಂಭವಾದ ಮಾತಿನ ಚಕಮಕಿ, ಕ್ಷಣಾರ್ಧದಲ್ಲಿ ವರ ಮತ್ತು ವಧುವಿನ ಕಡೆಯವರ ನಡುವಿನ ದೊಡ್ಡ ಜಗಳಕ್ಕೆ ಕಾರಣವಾಗಿದೆ.

Chicken Leg Piece Fight

ಪ್ಲೇಟ್‌ಗಳು ಮತ್ತು ಚೇರ್‌ಗಳ ಹಾರಾಟ

ಒಂದು ಲೆಗ್ ಪೀಸ್‌ಗಾಗಿ ಶುರುವಾದ ಈ ಕಿರಿಕ್, ಮಂಟಪದಲ್ಲಿ ದೊಡ್ಡ ಯುದ್ಧವನ್ನೇ ಸೃಷ್ಟಿಸಿತು. ಅತಿಥಿಗಳು ಪರಸ್ಪರ ಪ್ಲೇಟ್‌ಗಳನ್ನು ಎಸೆಯಲು ಆರಂಭಿಸಿದರು. ಅಷ್ಟೇ ಅಲ್ಲದೆ, ಹಾಲಿನಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಬಿರಿಯಾನಿ ತಿನ್ನಬೇಕಿದ್ದ ಜಾಗದಲ್ಲಿ ಕಾಳಗ ಮತ್ತು ಕಿರುಚಾಟಗಳು ಕೇಳಿಬಂದವು.

ವಿಡಿಯೋ ವೈರಲ್: ನೆಟ್ಟಿಗರ ಫನ್ನಿ ಕಾಮೆಂಟ್ಸ್

ಈ ಇಡೀ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಂದರವಾಗಿ ಸಿಂಗರಿಸಲ್ಪಟ್ಟಿದ್ದ ಮಂಟಪವು ಕ್ಷಣಮಾತ್ರದಲ್ಲಿ ಚಲ್ಲಾಪಿಲ್ಲಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡ ನೆಟ್ಟಿಗರು, "ಒಂದು ಲೆಗ್ ಪೀಸ್‌ಗಾಗಿ ಇಷ್ಟೊಂದು ಸಾಹಸವೇ?" ಎಂದು ತಮಾಷೆ ಮಾಡುತ್ತಿದ್ದಾರೆ. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಅತಿಥಿಗಳ ಹೊಟ್ಟೆ ತುಂಬುವ ಮೊದಲೇ ಮಂಟಪದ ಶಾಂತಿ ಮಾತ್ರ ಹಾರಿಹೋಗಿತ್ತು.

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ತಮಗೆ ಬೇಕಾದ್ದು ಸಿಗಲೇಬೇಕು ಎನ್ನುವ ಮನಸ್ಥಿತಿಯು ಅತಿರೇಕಕ್ಕೆ ಹೋಗುತ್ತಿದೆ. ಊಟದ ಮೇಲಿನ ಹಕ್ಕಿಗಾಗಿ ಬೇರೆಯವರ ಜೀವನದ ಅತಿ ದೊಡ್ಡ ದಿನವನ್ನೇ ಹಾಳು ಮಾಡುವುದು ಈ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ. "ಸಂಭ್ರಮವನ್ನು ಗೌರವದಿಂದ ಆಚರಿಸಿ, ಅಹಂಕಾರದಿಂದಲ್ಲ ಎಂದು ವಿಡಿಯೋ ನೋಡಿ ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಊಟಕ್ಕಾಗಿ ಈ ಮಟ್ಟಕ್ಕೆ ಇಳಿಯುವ ಜನರ ಸಂಸ್ಕಾರದ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಅಂತಿಮವಾಗಿ ಈ ಘಟನೆಯಿಂದ ವರ ಮತ್ತು ವಧುವಿನ ಕುಟುಂಬದವರ ನೆಮ್ಮದಿ ಹಾಳಾಗಿದ್ದು, ಒಂದು ಸುಂದರ ನೆನಪಾಗಬೇಕಿದ್ದ ಮದುವೆ ದಿನವು ಕಹಿಯ ನೆನಪಾಗಿ ಉಳಿಯುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+