IPL 2026: ಸಂಜು ಸ್ಯಾಮ್ಸನ್ 'ಓಪನಿಂಗ್ ಮ್ಯಾಚ್' 'ಮ್ಯಾಜಿಕ್' ದಾಖಲೆಗೆ ಬಿತ್ತು ಬ್ರೇಕ್
Sanju Samson: ಗುವಾಹಟಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಆವೃತ್ತಿಯ 3ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಸಿಎಸ್‌ಕೆ ಪರ ಆರಂಭಿಕರಾಗಿ ಬ್ಯಾಟಿಂಗ್‌ಗಿಳಿದ ಸಂಜು ಸ್ಯಾಮ್ಸನ್ 7 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟ್ ಆಗುವ ಮೂಲಕ ಅಭಿಮಾನಿಗಳು ಇಟ್ಟಿದ್ದ ಭರವಸೆಯನ್ನು ಸುಳ್ಳು ಮಾಡಿದರು.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 127 ರನ್‌ಗಳನ್ನು ಮಾತ್ರ ಕಲೆಹಾಕಿ ಆರ್‌ಆರ್ ತಂಡಕ್ಕೆ ಸಾಧರಣ ಗುರಿ ನೀಡಿತು. ಅಭಿಮಾನಿಗಳು ಸಂಜು ಸ್ಯಾಮ್ಸನ್ ಅವರು ಅದ್ಭತವಾಗಿ ಆಡಲಿದ್ದಾರೆ ಎಂದು ಇಟ್ಟಿದ್ದ ನಂಬಿಕೆ ಹುಸಿಯಾಯಿತು.

ಕ್ಲೀನ್ ಬೌಲ್ಡ್ ಆದ ಸಂಜು
ಪಂದ್ಯದ ಎರಡನೇ ಓವರ್‌ನಲ್ಲಿ ನಾಂದ್ರೆ ಬರ್ಗರ್ ಎಸೆದ ಬಾಲ್‌ಗೆ ಸಂಜು ಸ್ಯಾಮ್ಸನ್ ಕ್ಲೀನ್ ಬೌಲ್ಡ್ ಆದರು. ಈ ವಿಕೆಟ್ ಪತನವು ಸಿಎಸ್‌ಕೆ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ನೀಡಿತು. ಅಲ್ಲದೆ, ತಂಡದ ಆರಂಭಿಕ ಪತನಕ್ಕೂ ಕಾರಣವಾಯಿತು. ಅಷ್ಟೇ ಅಲ್ಲದೆ, ಈ ವೈಫಲ್ಯದೊಂದಿಗೆ ಪ್ರತಿ ಐಪಿಎಲ್ ಸೀಸನ್‌ನ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತೋರುತ್ತಿದ್ದ "ಮ್ಯಾಜಿಕಲ್" ಫಾರ್ಮ್ ಹಾಗೂ ಅವರ ಅದ್ಭುತ ದಾಖಲೆಗೂ ಬ್ರೇಕ್ ಬಿದ್ದಿದೆ.
ಸಂಜು ಸ್ಯಾಮ್ಸನ್ ದಾಖಲೆಗೆ ಬ್ರೇಕ್
ಕಳೆದ ಆರು ಸೀಸನ್‌ಗಳಲ್ಲಿ (ಐಪಿಎಲ್ 2020ರಿಂದ 2025ರವರೆಗೆ) ಸಂಜು ಸ್ಯಾಮ್ಸನ್ ಪ್ರತಿ ಬಾರಿಯೂ ತಮ್ಮ ಮೊದಲ ಪಂದ್ಯದಲ್ಲೇ 50ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಒಂದು ಅದ್ಭುತ ದಾಖಲೆ ಬರೆದಿದ್ದರು. ಆದರೆ, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಚೊಚ್ಚಲ ಪಂದ್ಯದಲ್ಲಿ ಈ ಸುದೀರ್ಘ ಸಾಧನೆಗೆ ತೆರೆಬಿದ್ದಿದೆ.
ವಿಶೇಷ ಅಂದ್ರೆ, 2021ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅವರು ಸಿಡಿಸಿದ 119 ರನ್ ಈ ಆರೂ ಸೀಸನ್‌ಗಳಲ್ಲೇ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇನ್ನು ಕಳೆದ 2025ರ ಸೀಸನ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 37 ಎಸೆತಗಳಲ್ಲಿ 66 ರನ್‌ಗಳನ್ನು ಕಲೆಹಾಕಿ ಸಾಧನೆ ಮಾಡಿದ್ದರು.
ಆದರೆ ಈ ಬಾರಿ ಸಿಎಸ್‌ಕೆ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಕೇವಲ 6 ರನ್‌ಗಳಿಗೆ ಔಟ್ ಆಗುವ ಮೂಲಕ ಅವರ ಈ 'ಓಪನಿಂಗ್ ಮ್ಯಾಚ್' ಮ್ಯಾಜಿಕ್ ಅಂತ್ಯಗೊಂಡಿದೆ. ಈ ಹಿಂದೆ ಅವರು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ್ದರು. ಇಂದು ತಮ್ಮ ಹಳೆಯ ತಂಡದ ವಿರುದ್ಧವೇ ಕಣಕ್ಕಿಳಿದ ಸಂಜು ಸ್ಯಾಮ್ಸನ್, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸದರು.
ಮೊದಲ ಪಂದ್ಯದಲ್ಲೇ ಸಂಜು ಮಾಡಿದ ಸಾಧನೆಗಳು
* 2020: 74 (32 ಎಸೆತ) - ಸಿಎಸ್‌ಕೆ ವಿರುದ್ಧ
* 2021: 119 (63 ಎಸೆತ) - ಪಂಜಾಬ್ ಕಿಂಗ್ಸ್ ವಿರುದ್ಧ
* 2022: 55 (27 ಎಸೆತ) - ಎಸ್‌ಆರ್‌ಎಚ್ ವಿರುದ್ಧ
* 2023: 55 (32 ಎಸೆತ) - ಎಸ್‌ಆರ್‌ಎಚ್ ವಿರುದ್ಧ
* 2024: 82* (52 ಎಸೆತ) - ಎಲ್‌ಎಸ್‌ಜಿ ವಿರುದ್ಧ
* 2025: 66 (37 ಎಸೆತ) - ಎಸ್‌ಆರ್‌ಎಚ್ ವಿರುದ್ಧ
* 2026: 6 (7 ಎಸೆತ) - ರಾಜಸ್ಥಾನ್ ರಾಯಲ್ಸ್ ವಿರುದ್ಧ
ಸಿಎಸ್‌ಕೆಯ ಮೊದಲ ನಾಲ್ಕು ಬ್ಯಾಟರ್‌ಗಳ ಪೈಕಿ ಯಾರೊಬ್ಬರೂ 6 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಯುವ ಆಟಗಾರ ಆಯುಷ್ ಮ್ಹಾತ್ರೆ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಇಲ್ಲದಿರುವುದು ಸಿಎಸ್‌ಕೆ ಬ್ಯಾಟಿಂಗ್ ಲೈನ್‌ಅಪ್‌ನ ಶಕ್ತಿಯನ್ನು ಕುಗ್ಗಿಸಿದಂತೆ ಕಾಣುತ್ತಿದೆ. ತಂಡದ ಪರ ಜೇಮೀ ಓವರ್ಟನ್ ಮಾತ್ರ ಅತೀ ಹೆಚ್ಚು ರನ್ ಸಿಡಿಸಿದರು. ಅವರು 43 ರನ್‌ಗಳನ್ನ ಕಲೆಹಾಕಿ ತಂಡದ ಮೊತ್ತ 120ರ ಗಡಿ ದಾಟಲು ಪ್ರಮುಖ ಕಾರಣರಾದರು.












Click it and Unblock the Notifications