• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಸಿಎ ಅಧ್ಯಕ್ಷ ಗಾದಿಯ ವಿಶ್ವೇಶ್ವರ್‌ ದೀಕ್ಷಿತ್‌ ಜಾಗಕ್ಕೆ ಬಿ.ಎನ್‌.ನಾಗರಾಜ್‌

By Super
|

ಹಳೆನೀರು ಹೋಗುತ್ತದೆ. ಹೊಸನೀರು ಬರುತ್ತದೆ. ಹಸಿರಿಗೆ ಉಸಿರು ತುಂಬಿ ಬೀಗಿದ ಸಾರ್ಥಕ್ಯ ಹಳೆನೀರಿಗೆ. ಹಳೆನೀರನ್ನೂ ಮೀರಿಸಿ ಹಸಿರಿಗೆ ಜೀವಕಳೆ ತುಂಬುವೆನೆಂಬ ಅದಮ್ಯ ಉತ್ಸಾಹ ಹೊಸನೀರಿಗೆ. ಸಾಧನೆಯ ಹಾದಿಯಲ್ಲಿ ಹೊಸ- ಹಳೆ ನೀರಿನ ಹರಿವು ಬಹು ಮುಖ್ಯ. ದಕ್ಷಿಣ ಕ್ಯಾಲಿಫೋರ್ನಿಯಾದ ಕೆಸಿಎಗೂ ಈಗ ಹೊಸನೀರು ಬಂದಿದೆ. ಅರ್ಥಾತ್‌ ಹೊಸ ಆಫೀಸ್‌ ಬೇರರ್‌ಗಳ ದಂಡು ಜವಾಬ್ದಾರಿ ಹೊತ್ತು ನಿಂತಿದೆ; ಇನ್ನೆರಡು ವರ್ಷ (2002-04) ಕೈಂಕರ್ಯಕ್ಕೆ ಟೊಂಕ ಕಟ್ಟಿ.

ಏಪ್ರಿಲ್‌ 27ರಂದು ಚುನಾಯಿತರಾಗಿರುವ ಕೆಸಿಎ ಆಫೀಸ್‌ ಬೇರರ್‌ಗಳಿವರು. ಇವರಿಗೆ ದಟ್ಸ್‌ಕನ್ನಡ ಡಾಟ್‌ ಕಾಂನ ಶುಭಾಶಯಗಳು-

ಬಿ.ಎನ್‌.ನಾಗರಾಜ್‌- ಅಧ್ಯಕ್ಷ (ಫೋನ್‌ : (714) 441-1420

ವಿಜಯಾ ಕೊಟ್ರಪ್ಪ- ಉಪಾಧ್ಯಕ್ಷ (ಫೋನ್‌ : (909) 392-1454

ಲಕ್ಷ್ಮೀ ಕೃಷ್ಣಮೂರ್ತಿ- ಖಜಾಂಚಿ (ಫೋನ್‌ : (909) 899-4273)

ನಾಗನ ಗೌಡ- ಕಾಯದರ್ಶಿ (ಫೋನ್‌ : (310) 541-9293

ನಿರ್ದೇಶಕರು

ಜಯಂತಿ ರವಿಕುಮಾರ್‌ (ಫೋನ್‌ : (714) 838-8505

ಸೋಮಶೇಖರ್‌ ಹೊಸಕೆರೆ (ಫೋನ್‌ : (714) 964-0123

ಹರೀಶ್‌ ಕುಮಾರ್‌ (ಫೋನ್‌ : (714) 523-3463

ಜಗನ್ನಾಥ್‌ ಶಂಖಂ (ಫೋನ್‌ : (714) 832-2757

ರಮೇಶ್‌ ಬಸವಾಪಟ್ಣ (ಫೋನ್‌ : (562) 924-0406

ಹೊಸದಾಗಿ ಅಧ್ಯಕ್ಷ ಗಾದಿ ಏರಿರುವ ಬಿ.ಎನ್‌.ನಾಗರಾಜ್‌ ಅವರಲ್ಲಿ ತುಂಬು ಉತ್ಸಾಹ. ಕೆಸಿಎ ಸದಸ್ಯರ ಸಂಖ್ಯೆಯನ್ನು ಸಾಕಷ್ಟು ಏರಿಸುವ ಉಮೇದಿ ನಾಗರಾಜ್‌ ಅವರಿಗೆ.

ಅಧ್ಯಕ್ಷ ಗಾದಿಗೇರಿದ ನಾಗರಾಜ್‌ ಹೇಳುವುದೇನೆಂದರೆ....

ನಮಸ್ಕಾರ,

ಕೆಸಿಎ ಅಧ್ಯಕ್ಷ ಸ್ಥಾನವನ್ನು ನಾನು ತುಂಬು ವಿನಯದಿಂದ ಸ್ವೀಕರಿಸಿದ್ದೇನೆ. ಇದು ನನಗೆ ಸಿಕ್ಕಿರುವ ದೊಡ್ಡ ಗೌರವ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ನಮ್ಮ ಕನ್ನಡ ಸಮೂಹಕ್ಕೆ ಅಳಿಲು ಸೇವೆ ಸಲ್ಲಿಸಲು ದೊರೆತಿರುವ ವಿಶೇಷ ಅವಕಾಶ. ಏನೇ ಮಾಡಬೇಕಿದ್ದರೂ ನಿಮ್ಮ ಸಹಾಯ ಬೇಕು ಎಂದು ಬೇರೆಯಾಗಿ ಹೇಳಬೇಕಿಲ್ಲ.

ಕೆಸಿಎಯ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ನೀವೆಲ್ಲಾ ಭಾಗವಹಿಸಬೇಕು. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಹಾಗೂ ಚುರುಕುಮತಿಯ ನಿರ್ದೇಶಕರಿದ್ದಾರೆ. ಕನ್ನಡಿಗರಿಗೆ ಸೇವೆ ಸಲ್ಲಿಸಲು ನಾವು ಶತಾಯಗತಾಯ ಯತ್ನಿಸುತ್ತೇವೆ.

ಯುವಕರು, ಹಿರೀಕರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿಸಿ, ಕೆಸಿಎ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುವುದು ನನ್ನ ಬಹು ದಿನಗಳ ತುಡಿತ. ಈ ಗುರಿಯನ್ನು ನಾವು ಮುಟ್ಟಿಯೇ ತೀರುತ್ತೇವೆಂಬ ಅಚಲ ನಂಬಿಕೆ ನನ್ನದು.

ನಾವು ಇನ್ನಷ್ಟು ಮುಂದುವರೆಯಲು ನೆರವಾಗಬಲ್ಲ ನಿಮ್ಮ ಸಲಹೆಗಳಿಗೆ ಸುಸ್ವಾಗತ. ಯಾರ್ಯಾರು ಸಂಘದ ಸದಸ್ಯರಾಗಿಲ್ಲವೋ ಅಥವಾ ಆಜೀವ ಸದಸ್ಯರಾಗಿಲ್ಲವೋ, ಅಂಥವರು ಕೆಸಿಎ ಸದಸ್ಯತ್ವ ಪಡೆಯಿರಿ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ. ಸದಸ್ಯತ್ವದ ಶುಲ್ಕ- ಪ್ರತಿ ಕುಟುಂಬಕ್ಕೆ ವಾರ್ಷಿಕ 50 ಡಾಲರ್‌ಗಳು, ಆಜೀವ ಸದಸ್ಯತ್ವಕ್ಕೆ 500 ಡಾಲರ್‌ಗಳು.

ಕೆಸಿಎ ತನ್ನ ಚಟುವಟಿಕೆಗಳನ್ನು ಒಂದು ಪಿಕ್‌ನಿಕ್‌ ಮೂಲಕ ಪ್ರಾರಂಭಿಸಲಿದೆ. ಜುಲೈ 27ರ ಶನಿವಾರ ಎಲ್ಲ ಸೇರಿ ಪಿಕ್‌ನಿಕ್‌ ಹೋಗುವ ಕಾರ್ಯಕ್ರಮವಿದೆ. ವಿವರಗಳನ್ನು ಸದ್ಯದಲ್ಲೇ ಪ್ರತಿ ಸದಸ್ಯನಿಗೂ ಮುಟ್ಟಿಸಲಾಗುವುದು. ದಯವಿಟ್ಟು ಎಲ್ಲರೂ ಪಿಕ್‌ನಿಕ್‌ಗೆ ಬನ್ನಿ.

ಕೊನೆಯದಾಗಿ, ಈವರೆಗೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ದೀಕ್ಷಿತ್‌ ಅವರಿಗೆ ನನ್ನ ಧನ್ಯವಾದಗಳು. ದೀಕ್ಷಿತ್‌ ಹಾಗೂ ಅವರ ತಂಡ ಕೆಸಿಎಗೆ ಸುಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಂಡದ ಕೆಲಸ ಶ್ಲಾಘನಾರ್ಹ.

ಮತ್ತೊಮ್ಮೆ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಲು ನಾನು ತೀವ್ರ ಉತ್ಸುಕನಾಗಿದ್ದೇನೆ.

ಬಿ.ಎನ್‌.ನಾಗರಾಜ್‌

901, ಆ್ಯಷ್‌ಟನ್‌ ಪ್ಲೇಸ್‌

ಫುಲ್ಲರ್‌ಟನ್‌, ಸಿಎ 92833-1401

ಟೆಲಿ ಫೋನ್‌ ಸಂಖ್ಯೆ- (714)441-1420

ಫ್ಯಾಕ್ಸ್‌ : (714)441-2716

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
B. N. agaraj elected president of KCA-SC 2002-04. Adieu Vishweshwar Dixit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more