• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸೈಲ್ ಇಲ್ಲ, ಬಾಂಬ್ ತೋರಿಸಲೇ ಇಲ್ಲ! ಬದಲಾಗುತ್ತಿದೆಯಾ ಉ.ಕೊರಿಯಾ?

|
Google Oneindia Kannada News

ಉತ್ತರ ಕೊರಿಯಾ ಹೆಸರು ನೆನಪಾಗುತ್ತಿದ್ದಂತೆ ಕ್ಷಿಪಣಿಗಳು ಕಣ್ಣಮುಂದೆ ಬರುತ್ತವೆ. ಅಮೆರಿಕ ಜೊತೆಗಿನ ಗಾಢ ದ್ವೇಷ ಹಾಗೂ ತಿಕ್ಕಾಟ ಉತ್ತರ ಕೊರಿಯಾ ದೇಶವನ್ನ ಹೊಸ ಶಸ್ತ್ರಾಸ್ತ್ರ ಕಂಡುಹಿಡಿಯಲು ಪ್ರೋತ್ಸಾಹಿಸುತ್ತಿದೆ. ಈ ಕಾರಣಕ್ಕೆ ಉತ್ತರ ಕೊರಿಯಾ ತನ್ನಲ್ಲಿರುವ ಭಯಾನಕ ಅಸ್ತ್ರಗಳನ್ನ ಹೊರ ತೆಗೆದು ಅಮೆರಿಕಗೆ ವಾರ್ನಿಂಗ್ ಕೊಡುತ್ತಲೇ ಬಂದಿದೆ. ಆದ್ರೆ ಈ ಬಾರಿ ಎಲ್ಲಾ ಉಲ್ಟಾ ಆಗೋಗಿದೆ..!

ಉತ್ತರ ಕೊರಿಯಾ 73ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದಲ್ಲಿ ಮಿಲಿಟರಿ ಪರೇಡ್ ನಡೆಸಿರುವ ಕಿಮ್ ಜಾಂಗ್ ಉನ್ ಪಡೆ, ವಿನಾಶಕಾರಿ ಕ್ಷಿಪಣಿ ಹಾಗೂ ಅಸ್ತ್ರಗಳನ್ನು ಹೊರಗೆ ತೆಗೆದಿಲ್ಲ. ಪ್ರತಿಬಾರಿ ವೆಪನ್ಸ್ ಜಾತ್ರೆ ನಡೆಸುತ್ತಿದ್ದ ಕಿಮ್ ಪಟಾಲಂ ಅದ್ಯಾಕೋ ಈಗ ಸೈಲೆಂಟ್ ಆದಂತೆ ಕಾಣುತ್ತಿದೆ. ಅಂತಾರಾಷ್ಟ್ರೀಯ ಒತ್ತಡ ಆರ್ಥಿಕ ಮುಗ್ಗಟ್ಟು ಈ ಬದಲಾವಣೆಗೆ ಕಾರಣ ಎನ್ನುತ್ತಿದ್ದಾರೆ ತಜ್ಞರು.

ಇತ್ತೀಚೆಗಷ್ಟೇ ಉ.ಕೊರಿಯಾ ಕುರಿತಾಗಿ ವಿಶ್ವಸಂಸ್ಥೆ ಭಯಾನಕ ಸಂಗತಿ ಹೊರಹಾಕಿತ್ತು. ಅದೇನೆಂದರೆ ಹಲವು ವರ್ಷಗಳ ಕಾಲ ಸೈಲೆಂಟ್ ಆಗಿದ್ದ ಯೊಂಗ್‌ಬಿಯಾನ್ ಪರಮಾಣು ಸ್ಥಾವರವನ್ನ ಮತ್ತೆ ಪ್ರಾರಂಭಿಸಲಾಗಿದೆ ಎನ್ನಲಾಗಿತ್ತು. ಈ ವರದಿ ಆತಂಕ ಮೂಡಿಸಿರುವ ಬೆನ್ನಲ್ಲೇ ಉತ್ತರ ಕೊರಿಯಾ ತನ್ನ 73ನೇ ಸಂಸ್ಥಾಪನಾ ದಿನಾಚರಣೆ ಪರೇಡ್‌ನಲ್ಲಿ ಕ್ಷಿಪಣಿ ಪ್ರದರ್ಶಿಸುವ ಧೈರ್ಯ ತೋರಿಸಿಲ್ಲ. ಇದು ಅಮೆರಿಕ ಹಾಗೂ ಉತ್ತರ ಕೊರಿಯಾದ ಶತ್ರು ದೇಶಗಳಿಗೆ ಬಿಗ್ ರಿಲೀಫ್ ನೀಡಿದಂತಾಗಿದೆ.

ಮಕ್ಕಳ ಜೊತೆ ಕಿಮ್ ಎಂಟ್ರಿ

ಮಕ್ಕಳ ಜೊತೆ ಕಿಮ್ ಎಂಟ್ರಿ

ಈ ಬಾರಿಯ ಉತ್ತರ ಕೊರಿಯಾ ಸಂಸ್ಥಾಪನಾ ದಿನಾಚರಣೆ ವಿಶೇಷತೆ ಏನೆಂದರೆ ಕಿಮ್ ಜಾಂಗ್ ಉನ್ ತನ್ನ ಇಬ್ಬರು ಮಕ್ಕಳ ಜೊತೆ ಕಾಣಿಸಿಕೊಂಡಿದ್ದು. ಅಪ್ಪನ ಕೈಹಿಡಿದು ಬಂದ ಕಿಮ್ ಮಕ್ಕಳು, ಸ್ಟೇಜ್ ಹತ್ತುತ್ತಿದ್ದಂತೆ ಉ.ಕೊರಿಯಾ ಪ್ರಜೆಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಹೀಗೆ ಆರಂಭವಾದ ಸಮಾರಂಭದಲ್ಲಿ ಉತ್ತರ ಕೊರಿಯಾ ಸೇನೆಯ ಪ್ರತಿಯೊಂದು ವಿಭಾಗಗಳೂ ಅಧ್ಯಕ್ಷನಿಗೆ ಗೌರವ ಸಲ್ಲಿಸಿದವು. ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಉತ್ತರ ಕೊರಿಯಾದಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.

ಕೊರೊನಾ ಬಗ್ಗೆ ಕೇರ್ ಇಲ್ಲ..!

ಕೊರೊನಾ ಬಗ್ಗೆ ಕೇರ್ ಇಲ್ಲ..!

ಕಿಮ್ ಅಂದ್ರೆ ಅಲ್ಲಿ ವಿಜ್ಞಾನಕ್ಕೆ ಬೆಲೆಯೇ ಇರೋದಿಲ್ಲ. ಅದರಲ್ಲೂ ಕೊರೊನಾ ವಿಚಾರದಲ್ಲಿ ಕಿಮ್ ವರ್ತನೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಈಗಲೂ ಕಿಮ್ ಜಾಂಗ್ ಉನ್ ಇಂತಹದ್ದೇ ವರ್ತನೆ ತೋರಿದ್ದು, ಉತ್ತರ ಕೊರಿಯಾದ ಸಂಸ್ಥಾಪನಾ ದಿನಾಚರಣೆಯಲ್ಲಿ ಲಕ್ಷ ಲಕ್ಷ ಜನರನ್ನು ಒಂದೇ ಕಡೆ ಸೇರಿಸಲಾಗಿತ್ತು. ದೈಹಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಹಾಕದೆ ಜನರು ಒಟ್ಟಿಗೆ ಸೇರಿದ್ದರು. ಈವರೆಗೂ ಉತ್ತರ ಕೊರಿಯಾ ಒಂದೇ ಒಂದು ಕೊರೊನಾ ಕೇಸ್ ಅನ್ನೂ ಕನ್ಫರ್ಮ್ ಮಾಡಿಲ್ಲ, ಅದರಲ್ಲೂ ಲಸಿಕೆ ಬಗ್ಗೆ ಉತ್ತರ ಕೊರಿಯಾದಲ್ಲಿ ಉಸಿರು ಎತ್ತುವ ಹಾಗಿಲ್ಲ.

ಬಾಂಬ್ ಪರೇಡ್‌ ನಡೆಸಿದ್ದರು

ಬಾಂಬ್ ಪರೇಡ್‌ ನಡೆಸಿದ್ದರು

ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್‌ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್‌ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್‌ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಅಮೆರಿಕ ಮೊದಲ ಟಾರ್ಗೆಟ್..?

ಅಮೆರಿಕ ಮೊದಲ ಟಾರ್ಗೆಟ್..?

ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನು ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್‌ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.


English summary
North Korea ended 73rd anniversary parade without showing the missiles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X