ಯಾದಗಿರಿ: ಪ್ರೀತಿಸಿ ಕೈಕೊಟ್ಟ ಯುವಕ, ಮನನೊಂದು ಪ್ರಾಣ ಬಿಟ್ಟ ಯುವತಿ

Posted By:
Subscribe to Oneindia Kannada

ಯಾದಗಿರಿ, ಡಿಸೆಂಬರ್ 19: ಯುವಕನೊಬ್ಬ ಪ್ರೀತಿಯ ನಾಟಕವಾಡಿ ಕೈಕೊಟ್ಟಿದ್ದರಿಂದ ಮನನೊಂದ ಅಪ್ರಾಪ್ತೆ ಪ್ರಿಯತಮೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಭಾಗಮ್ಮ (15) ಆತ್ಮಹತ್ಯೆಗೆ ಶರಣಾದ ಯುವತಿ. ಹಾಲಗೇರಾ ಗ್ರಾಮದ ನಾಗರಾಜ ಎಂಬ ಯುವಕ ಭಾಗಮ್ಮಳನ್ನು ಪ್ರೀತಿಸಿ ಬಳಿಕ ಕೈ ಮೋಸ ಮಾಡಿದ್ದಾನೆ. ಇದರಿಂದ ಮನನೊಂದು ಭಾಗಮ್ಮ ವಿಷ ಸೇವಿಸಿದ್ದಾಳೆ.

15 year old girl commits suicide after boyfriend love acting in Yadagiri

ವಿಷ ಸೇವಿಸಿರುವುದನ್ನು ಕಂಡ ಪೋಷಕರು ಕೂಡಲೇ ಭಾಗಮ್ಮಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ ಬಾಗಮ್ಮ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಪ್ರೀತಿ ನಾಟಕವಾಡಿದ ಯುವಕ ನಾಗರಾಜ ವಿರುದ್ಧ ದೂರು ಭಾಗಮ್ಮ ಪೋಷಕರು ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 15 year old girl commited suicide by consuming poison after boyfriend love acting in Haalageri, Shapura taluk Yadagiri district on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ