ಕರ್ನಾಟಕದ ಕಾಶ್ಮೀರದಲ್ಲಿ ದ್ರಾಕ್ಷಾರಸ ಉತ್ಸವ ; ಸಜ್ಜುಗೊಂಡಿದೆ ಕಾರವಾರ

By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ನವೆಂಬರ್ 23: ಜಿಲ್ಲಾ ತೋಟಗಾರಿಕೆ ಇಲಾಖೆ, ದ್ರಾಕ್ಷಾರಸ ಮಂಡಳಿ ಹಾಗೂ ಕಾಳೀ ರಿವರ್ ಗಾರ್ಡನ್ ಸಹಯೋಗದಲ್ಲಿ ಶುಕ್ರವಾರದಿಂದ (ನ.24) ಮೂರು ದಿನಗಳ ಕಾಲ ದ್ರಾಕ್ಷಾರಸ ಉತ್ಸವಕ್ಕೆ ಕರ್ನಾಟಕದ ಕಾಶ್ಮೀರ ಕಾರವಾರ ಸಜ್ಜುಗೊಂಡಿದೆ.

ನಗರದ ಕೋಡಿಬಾಗ ಕಾಳಿ ರಿವರ್ ಗಾರ್ಡನ್‍ನಲ್ಲಿ ವೇದಿಕೆ ಮತ್ತು ಆಸನಗಳ ಜೋಡಣೆ ಭರದಿಂದ ಸಾಗುತ್ತಿದ್ದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಗುರುವಾರ ಸಿದ್ಧತೆಗಳನ್ನು ಪರಿಶೀಲಿಸಿದರು.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾದ್ಯಮದವರೊಂದಿಗೆ ಮಾತನಾಡಿ ದ್ರಾಕ್ಷಾರಸ ಉತ್ಸವವನ್ನು ಪ್ರಥಮ ಬಾರಿಗೆ ಕಾರವಾರ ನಗರದಲ್ಲಿ ಆಯೋಜಿಸಲಾಗುತ್ತಿದ್ದು ನಗರದ ನಾಗರಿಕರಿಗೆ ಹೊಸ ಅನುಭವ ನೀಡಲಿದೆ. ಉತ್ಸವದಲ್ಲಿ ವೈವಿದ್ಯ ವೈನರಿಗಳು ದೊರೆಯಲಿವೆ. ಕೆಂಪು ದ್ರಾಕ್ಷಾರಸವು ಹೃದಯಕ್ಕೆ ಆರೋಗ್ಯಕರವಾಗಿದ್ದು ವಯಸ್ಕರರು ಸೇವಿಸಬಹುದಾಗಿದೆ ಎಂದು ಹೇಳಿದರು.

Wine Festival in Karwar from Friday.

ನವೆಂಬರ್ 24 ರಿಂದ 26 ರವರೆಗೆ ಮೂರುದಿನಗಳ ಕಾಲ ಕಾಳಿ ರಿವರ್ ಗಾರ್ಡನ್‍ನಲ್ಲಿ ದ್ರಾಕ್ಷಿ ಬೆಳೆಯುವ ರೈತರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ವೈನ್ ಮೇಳ ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹೇಳಿದರು.

ಗುರುವಾರ ಸದಾಶಿವಗಡ ಯಾತ್ರಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ವೈನ ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಸುಮಾರು 8 ರಿಂದ 10 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚು ಬ್ರಾಂಡಗಳನ್ನು ಪ್ರದರ್ಶಿಸಲಾಗುವುದು.

ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!

ಹಳೆಯ ವೈನ ಪ್ರದೇಶಗಳಾದ ಯುರೋಪ ಖಂಡ ಮತ್ತು ಹೊಸ ವೈನ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲ್ಲಿ ಮತ್ತು ಅಮೇರಿಕಾ ಹಾಗೂ ಇತರೆ ದೇಶಗಳ ವೈನ್ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಿಕರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು ಮತ್ತು ರಾಜ್ಯದಲ್ಲಿ ಆರೋಗ್ಯಕರ ವೈನ್ ಬಳಕೆ ಹೆಚ್ಚಿಸಲು ಅನುವು ಮಾಡಿಕೊಡುವ ಸಲುವಾಗಿ ಕಾರವಾರ ದ್ರಾಕ್ಷಾರಸ ಉತ್ಸವ-17 ಆಯೋಜಿಸಲಾಗಿದ್ದು ಎಲ್ಲಾ ವೈನ್ ಬ್ರಾಂಡ ಮಾರಾಟಗಳ ಮೇಲೆ ಶೇ. 10 ರಷ್ಟು ರಿಯಾಯಿತಿಯನ್ನು ವೈನ್ ಮೇಳದಲ್ಲಿ ನೀಡಲಾಗುತ್ತಿದೆ.

ವೈನ್ ಬಳಕೆಯನ್ನು ಉತ್ತೇಜಿಸುವ ದಿಸೆಯಲ್ಲಿ ವೈನ್ ದ್ರಾಕ್ಷಿ ಬೆಳೆಯುವ ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ವೈನ್ ತಯಾರಿಕರ ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ವಿಚಾರ ವಿನಿಮಯ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ವೈನ್ ಸ್ವಾದಿಸುವಾಗ ಬಳಸುವ ಸೂಕ್ತ ಆಹಾರಗಳ, ತಿನಿಸುಗಳ ಮಳಿಗೆಗಳು ಪಾಲ್ಗೊಳ್ಳಲಿದ್ದು ಸಂಗೀತ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ನ.24 ರಂದು ಶಿವಮೊಗ್ಗದ ಸಮನ್ವಯ ತಂಡದಿಂದ, 25 ರಂದು ಜಾಯ್ಸ್ ತಂಡ ಮತ್ತು 26 ರಂದು ಝೇಹನ್ ತಂಡದಿಂದ ಆಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
District administration of north canara, horticulture department and wine board, kali river garden have organised three days karwar wine festival from november 24th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ