• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವ್ಯಾಪಾರಿಯ ಮುಖದ ಬಳಿ ಕೆಮ್ಮಿದ ಮಹಿಳೆಗೆ 30 ದಿನ ಜೈಲು ಶಿಕ್ಷೆ

|

ಫ್ಲೋರಿಡಾ, ಏಪ್ರಿಲ್ 10: ವ್ಯಾಪಾರಿ ಮುಖದ ಬಳಿ ಮಹಿಳೆ ಕೆಮ್ಮಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

53 ವರ್ಷದ ಡೆಬ್ರಾ ಹಂಟರ್, ಶಿಕ್ಷೆಗೊಳಗಾದ ಮಹಿಳೆಯಾಗಿದ್ದಾಳೆ, ಆಕೆ ವ್ಯಾಪರಿಯ ಮುಖದ ಬಳಿ ಉದ್ದೇಶ ಪೂರ್ವಕವಾಗಿಯೇ ಕೆಮ್ಮಿದ್ದಾಳೆ ಎನ್ನುವ ಆರೋಪವಿದೆ.

ರಾಮನಗರ ಜಿಲ್ಲಾ ಕಾರಾಗೃಹದ ಕೈದಿಗಳಿಂದ ನಿಷೇಧಿತ ಮಾದಕ ವಸ್ತು, ಮೊಬೈಲ್ ವಶರಾಮನಗರ ಜಿಲ್ಲಾ ಕಾರಾಗೃಹದ ಕೈದಿಗಳಿಂದ ನಿಷೇಧಿತ ಮಾದಕ ವಸ್ತು, ಮೊಬೈಲ್ ವಶ

10 ತಿಂಗಳ ಹಿಂದೆ ಮೆದುಳಿನ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ, ಈಗಲೂ ಚಿಕಿತ್ಸೆ ಮುಂದುವರೆದಿದೆ, ದುರ್ಬಲವಾಗಿರುವ ನನ್ನ ಮೇಲೆ ದಾಳಿ ನಡೆದಿದೆ ಎಂದು ವ್ಯಾಪಾರಿ ಸ್ಟ್ರಾಗ್ ಹೇಳಿದ್ದಾರೆ.

ಹಂಟರ್ ಅವರು ತಮ್ಮ ವಸ್ತುವೊಂದನ್ನು ಹಿಂದಿರುಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಂಗಡಿಯವರ ಜತೆ ವಾದಕ್ಕೆ ನಿಂತಿದ್ದರು, ಈ ವಿಡಿಯೋವನ್ನು ಚಿತ್ರೀಕರಿಸಿದ್ದಕ್ಕಾಗಿ ನನ್ನ ಮೇಲೆ ಈ ರೀತಿಯ ವರ್ತನೆ ತೋರಿದ್ದಾರೆ ಎಂದು ವ್ಯಾಪಾರಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನನ್ನ ಬಳಿ ಬಂದು ಮುಖದ ಬಳಿ ಕೆಮ್ಮಿದ್ದಾರೆ, ಇದು ನನ್ನನ್ನು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುವಂತೆ ಮಾಡಿದೆ ಎಂದಿದ್ದಾರೆ.

ನನ್ನ ಮುಖದ ಮೇಲೆ ಕೆಮ್ಮುತ್ತೇನೆ, ಆಗ ಹೇಗಿರುತ್ತೆ ನೋಡು ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಬಳಿಕ ರೆಕಾರ್ಡ್ ಮಾಡಿರುವ ಮೊಬೈಲ್‌ನ್ನು ಕೊಡುವಂತೆ ಕೇಳಿದ್ದಾಳೆ. ಅದನ್ನು ನಿರಾಕರಿಸಿದಾಗ ಮುಖದ ಬಳಿ ಕೆಮ್ಮಿದ್ದಾಳೆ ಎಂದು ಆರೋಪಿಸಲಾಗಿದೆ.

English summary
A Florida woman who was seen in a widely watched video intentionally coughing on a shopper at a Pier 1 home-goods store last summer, as fears about the pandemic raged, was sentenced on Thursday to 30 days in jail, court records show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X