Get Updates
Get notified of breaking news, exclusive insights, and must-see stories!

ಕ್ಯಾಲಿಫೋರ್ನಿಯಾವನ್ನು ಸುಡುತ್ತಿದೆ ಬೆಂಕಿ: ಅಗ್ನಿ ಜ್ವಾಲೆಗೆ 9 ಮಂದಿ ದಹನ

ಪ್ಯಾರಡೈಸ್, ನವೆಂಬರ್ 10: ಅಮೆರಿಕದಲ್ಲಿ ಮತ್ತೆ ಕಾಳ್ಗಿಚ್ಚಿನ ಭೀತಿ ಆವರಿಸಿದೆ. ಕ್ಯಾಲಿಫೋರ್ನಿಯಾದ ಪಶ್ಚಿಮ ಭಾಗದುದ್ದಕ್ಕೂ ಭಾರಿ ಪ್ರಮಾಣದಲ್ಲಿ ಹರಡುತ್ತಿದ್ದು, ಒಂಬತ್ತು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಸಾವಿರಾರು ಸಂಖ್ಯೆಯ ಜನರನ್ನು ಸ್ಥಳಾಂತರಿಸಲಾಗಿದೆ. ಹತ್ತಾರು ಜನರು ಕಣ್ಮರೆಯಾಗಿದ್ದಾರೆ.

ಬೆಂಕಿಯ ಬೃಹತ್ ಜ್ವಾಲೆಗಳು ಎಲ್ಲೆಡೆ ಆವರಿಸುತ್ತಿದ್ದು, ಅನಾಹುತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕ್ಯಾಲಿಫೋರ್ನಿಯಾದ ರಾಜಧಾನಿ ಸಾಕ್ರಮೆಂಟೊದಿಂದ ಉತ್ತರ ಭಾಗದಲ್ಲಿರುವ ಪ್ಯಾರಡೈಸ್ ಪಟ್ಟಣದಲ್ಲಿ ಈ ಎಲ್ಲ ಒಂಬತ್ತು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಪಟ್ಟಣದ ಸಂಪೂರ್ಣ 26 ಸಾವಿರ ಜನರನ್ನೂ ಅಲ್ಲಿಂದ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ.

'ಕ್ಯಾಂಪ್ ಫೈರ್' ಎಂದು ಕರೆಯಲಾಗುವ ಈ ಬೆಂಕಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಗುರುವಾರ ಬೆಳಿಗ್ಗೆ ಕಾಣಿಸಿಕೊಂಡ ಕಾಳ್ಗಿಚ್ಚು, ಗಾಳಿಯ ರಭಸಕ್ಕೆ ಮುನ್ನುಗ್ಗುತ್ತಿದ್ದು, ಈಗಾಗಲೇ 76,000 ಎಕರೆ (28,300) ಹೆಕ್ಟೇರ್ ಪ್ರದೇಶವನ್ನು ಸುಟ್ಟುಹಾಕಿದೆ.

wildfires killed nine in california tens of thousands evacuated

ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿ ಇನ್ನೂ ಎರಡು ಕಡೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಥೌಸ್ಯಾಂಡ್ಸ್ ಓಕ್ಸ್ ಸಮೀಪದ ವೆಂಟುರಾ ಕೌಂಟಿಯಲ್ಲಿ ತೀವ್ರತೆ ಹೆಚ್ಚಾಗಿದೆ.

ಏಕಾಏಕಿ ಆವರಿಸಿದ ಬೆಂಕಯ ಜ್ವಾಲೆಗಳಿಂದ ಪ್ಯಾರಡೈಸ್ ಪಟ್ಟಣದ ಜನತೆ ಕಂಗಾಲಾಗಿದ್ದಾರೆ. ವೇಗವಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿಯ ಕಿಡಿಗಳು ಅನೇಕ ಮನೆಗಳಿಗೆ ತಗುಲಿ ಅವುಗಳನ್ನು ಸುಟ್ಟುಹಾಕಿವೆ. ದಗದಗಿಸುವ ಬೆಂಕಿಗೆ ಒಂದು ಆಸ್ಪತ್ರೆ, ಪೆಟ್ರೋಲ್ ಬಂಕ್, ಅನೇಕ ಹೋಟೆಲ್‌ಗಳು ಮತ್ತು ಲೆಕ್ಕವಿಲ್ಲದಷ್ಟು ವಾಹನಗಳು ಭಸ್ಮವಾಗಿವೆ.

wildfires killed nine in california tens of thousands evacuated

ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸಿಯೇರಾ ನವಾಡಾ ಪರ್ವತ ಪ್ರದೇಶದ ಸಮೀಪದ 52 ಸಾವಿರ ಮಂದಿ, ಪ್ಯಾರಡೈಸ್ ಸಮೀಪದ 93,000 ಜನಸಂಖ್ಯೆ ಇರುವ ಚಿಕೊ ಪ್ರದೇಶದ ಕೆಲವು ನಿವಾಸಿಗಳ ಕಡ್ಡಾಯ ಸ್ಥಳಾಂತರಕ್ಕೆ ಆದೇಶಿಸಲಾಗಿದೆ.

2,200ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್‌ಗಳು, ಟ್ಯಾಂಕರ್‌ಗಳ ನೆರವಿನಿಂದ ಅಗ್ನಿ ನಿಯಂತ್ರಣ ಪ್ರಯತ್ನ ಸಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+