ಟ್ರಂಪ್ ಸೋತರೂ ಎರಡನೇ ಅವಧಿ ಸೇವೆಗೆ ಶ್ವೇತಭವನ ತಯಾರಿ
ವಾಷಿಂಗ್ಟನ್, ನವೆಂಬರ್ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮರು ಆಯ್ಕೆಯ ಪ್ರಯತ್ನದಲ್ಲಿ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಎರಡನೆಯ ಅವಧಿಗೂ ಟ್ರಂಪ್ ಅವರಿಗೆ ಸೇವೆ ಸಲ್ಲಿಸಲು ಶ್ವೇತಭವನ ತಯಾರಿ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಅವಧಿಯಲ್ಲಿಯೂ ಇರಲಿದ್ದರೆ ಎಂಬ ಕಲ್ಪನೆಯೊಂದಿಗೆ ನಾವು ಶ್ವೇತಭವನದಲ್ಲಿ ಚಟುವಟಿಕೆಗಳನ್ನು ನಡೆಸುವುದನ್ನು ಮುಂದುವರಿಸುತ್ತಿದ್ದೇವೆ' ಎಂದು ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರ್ರೋ ಅವರು ಫಾಕ್ಸ್ ಬ್ಯುಸಿನೆಸ್ ನೆಟ್ವರ್ಕ್‌ಗೆ ತಿಳಿಸಿದ್ದಾರೆ.
ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲೆಕ್ಟೊರಲ್ ಮತಗಳಲ್ಲಿಯೂ ಸ್ಪಷ್ಟ ಸೋಲು ಅನುಭವಿಸಿದರೂ, ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರಿನ ಸೋಲನ್ನು ಇದುವರೆಗೂ ಒಪ್ಪಿಕೊಂಡಿಲ್ಲ. ಚುನಾವಣೆ ಬಳಿಕ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಟ್ರಂಪ್, ವಿವಿಧ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದ ವಿರುದ್ಧ ಕಾನೂನು ಸಮರ ಆರಂಭಿಸಿದ್ದಾರೆ. ಜತೆಗೆ ಚುನಾವಣಾ ವಂಚನೆಯ ಆರೋಪ ಮಾಡಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ.

'ನಾವು ಸರಿಯಾದ ಮತಪತ್ರಗಳು, ಪ್ರಮಾಣೀಕೃತ ಮತಪತ್ರಗಳ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳು ಸಹಿ ಮಾಡಿರುವ ಅಫಿಡವಿಟ್‌ಗಳ ಆಧಾರದಲ್ಲಿ ನಾವು ಈ ಆರೋಪಗಳನ್ನು ಮಾಡುತ್ತಿದ್ದೇವೆ' ಎಂದು ನವಾರ್ರೋ ತಿಳಿಸಿದ್ದಾರೆ.
-
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
ಭಾರತದಲ್ಲಿ ಬಗೆಹರಿಯಲಿದೆ ಎಲ್ಪಿಜಿ ಸಮಸ್ಯೆ, ನೀವು ನಮ್ಮ ಗೆಳೆಯ ಎಂದು ಕರೆದ ಇರಾನ್... Donald Trump -
ತೈವಾನ್ ಕರಾವಳಿಗೆ ನುಗ್ಗಿದ ಚೀನಾ ಹಡಗುಗಳು, ವಿಚಿತ್ರ ವರ್ತನೆ ಕಂಡು ಬೆಚ್ಚಿಬಿದ್ದ ಜಗತ್ತು | China Boats -
ಇರಾನ್ ವಿರುದ್ಧ ಮತ್ತಷ್ಟು ದಾಳಿಗೆ ಸಿದ್ಧವಾದ ಇಸ್ರೇಲ್, ಹೊಸ ತಂತ್ರದ ಮೊರೆ | Operation Roaring Lion -
ಎಲ್ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್... Cooking Oil -
ಇರಾನ್ ವಿರುದ್ಧ ಎಲ್ಲಾ ದೇಶಗಳು ನೌಕೆಗಳನ್ನ ಕಳುಹಿಸಲಿವೆ ಎಂಬ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷರು | Donald Trump -
ಉತ್ತರ ಕೊರಿಯಾ ಸರ್ವಾಧಿಕಾರಿ ವರ್ತನೆಗೆ ಬೆಚ್ಚಿಬಿದ್ದ ಜಪಾನ್ ಮತ್ತು ದಕ್ಷಿಣ ಕೊರಿಯಾ | Kim Jong Un -
ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ | Donald Trump -
ಇರಾನ್ ವಿರುದ್ಧ ಇನ್ನಷ್ಟು ಭೀಕರ ಕಾರ್ಯಾಚರಣೆಗೆ ಅಮೆರಿಕ ಸಿದ್ಧತೆ, ಮತ್ತಷ್ಟು ಅಸ್ತ್ರಗಳು ರವಾನೆ ಸಾಧ್ಯತೆ | Donald Trump -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ












Click it and Unblock the Notifications