• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ಹಠದ ನಡುವೆಯೂ ಸ್ಥಿತ್ಯಂತರ ಆರಂಭ: ಜೋ ಬೈಡನ್

|

ವಾಷಿಂಗ್ಟನ್, ನವೆಂಬರ್ 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧದ ನಡುವೆಯೂ ದೇಶದಲ್ಲಿ ಸ್ಥಿತ್ಯಂತರ ಆರಂಭವಾಗಿದೆ ಎಂದು ಭಾವಿ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಹಾಲಿ ಅಧ್ಯಕ್ಷ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದಿರಬಹುದು, ಇದರಿಂದ ನಮ್ಮ ಮುಂದಿನ ಯೋಜನೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ, ಎಲ್ಲವೂ ಅಂದುಕೊಂಡಂತೆ ಆಗಲಿದೆ. ವ್ಯವಸ್ಥೆಯನ್ನು ಧಿಕ್ಕರಿಸಲು ಸಾಧ್ಯವಿಲ್ಲ.

ರಕ್ಷಣಾ ಇಲಾಖೆಗೆ ತನ್ನ ಆಪ್ತರನ್ನು ನೇಮಿಸಿದ ಡೊನಾಲ್ಡ್ ಟ್ರಂಪ್

ದೇಶದ ಮತದಾರರ ನಿರ್ಣಯವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಹಾಗೆಯೇ ಜನವರಿ ಒಳಗೆ ಬದಲಾವಣೆಯ ಹೆಜ್ಜೆಗಳು ಕಾಣಿಸಲಿವೆ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಜೋ ಬೈಡನ್ ಐತಿಹಾಸಿಕ ಗೆಲುವು ಸಾಧಿಸಿರುವುದು ಸ್ಪಷ್ಟವಾಗಿದೆ.

ಆದರೆ ಎಲ್ಲವೂ ಮುಗಿದಿಲ್ಲ ಇದು ಅಂತಿಮ ಫಲಿತಾಂಶವಲ್ಲ, ಹಾಗೂ ಕೆಲವು ರಾಜ್ಯಗಳ ಫಲಿತಾಂಶದ ಕುರಿತು ಕಾನೂನು ಸಮರ ಆರಂಭಿಸಿದ್ದಾರೆ, ಹೀಗಾಗಿ ಅಮೆರಿಕ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸುಲಭವಾಗಿಲ್ಲ ಎನ್ನುವುದು ಖಾತ್ರಿಯಾಗಿದೆ.

ಅಮೆರಿಕದಲ್ಲಿ ಮೊದಲ ಬಾರಿಗೆ ಇಂಥಾ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನವರಿಯಲ್ಲಿ ಟ್ರಂಪ್ ಹೇಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎನ್ನುವ ಕುತೂಹಲ ಹಾಗೂ ಆತಂಕ ಅಮೆರಿಕನ್ನರಲ್ಲಿ ಮನೆ ಮಾಡಿದೆ. ಹಾಗೆಯೇ ಇಡೀ ವಿಶ್ವವೂ ಅಚ್ಚರಿಯಿಂದ ನೋಡುತ್ತಿದೆ.

English summary
US President-elect Joe Biden on Tuesday said that despite Trump's refusal to concede defeat in the US Presidential elections, he is ready to begin the transition to assume the presidency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X