• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆ: ಅಮೆರಿಕ ಆರೋಪ

|
Google Oneindia Kannada News

ವಾಷಿಂಗ್ಟನ್,ಫೆಬ್ರವರಿ 06: ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಹಾಂಗ್‌ಕಾಂಗ್,ಟಿಬೆಟ್ ಹಾಗೂ ತನ್ನದೇ ಪ್ರಾಂತ್ಯವಾದ ಷಿನ್‌ಜಿಯಾಂಗ್‌ನಲ್ಲಿ ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ

ಮಾನವ ಹಕ್ಕುಗಳ ರಕ್ಷಣೆ ಪರ ಅಮೆರಿಕ ಯಾವಾಗಲೂ ಧ್ವನಿ ಎತ್ತುವುದು, ಮ್ಯಾನ್ಮಾರ್ ನಲ್ಲಿ ನಡೆದ ಮಿಲಿಟರಿದಂಗೆಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ದಂಗೆಯನ್ನು ಚೀನಾ ಖಂಡಿಸಬೇಕು ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಯಾಂಗ್ ಹೇಳಿದ್ದಾರೆ.

ಷಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಉಯಿಘರ್ ಮುಸ್ಲಿಮರು ಹಾಗೂ ಇತರೆ ಅಲ್ಪಸಂಖ್ಯಾತರನ್ನು ಸಾಮೂಹಿಕವಾಗಿ ಕೂಡಿ ಹಾಕಿರುವ ಚೀನಾದ ನಡೆಗೆ ಇತ್ತೀಚೆಗೆ ಅನೇಕ ರಾಷ್ಟ್ರಗಳಿಂದ ಟೀಕೆಗಳು ವ್ಯಕ್ತವಾಗಿವೆ.

ಮಾನವ ಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಜಾರಿಯಲ್ಲಿರುವ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ಚೀನಾ ನಡೆದುಕೊಳ್ಳುತ್ತಿಲ್ಲ.

ಈ ನಡೆಗೆ ಚೀನಾವನ್ನೇ ನೇರ ಹೊಣೆ ಮಾಡಲಾಗುವುದು ಎಂದರು. ಚೀನಾದ ವಿದೇಶಾಂಗ ಕಾರ್ಯದರ್ಶಿ ಯಾಂಗ್ ಜಿಯೆಚಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಬ್ಲಿಂಕೆನ್ ಈ ವಿಷಯ ಪ್ರಸ್ತಾಪಿಸಿದ್ದಾರೆ.

English summary
accountable for its abuses of the international system, US Secretary of State Antony Blinken has said as he spoke to his Chinese counterpart Yang Jiechi and raised with him the issue of human rights violations in Xinjiang, Tibet and Hong Kong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X