ಇರಾನ್ನಿಗೆ ಪ್ರತೀಕಾರದ ಎಚ್ಚರಿಕೆ ಸಂದೇಶ ಕಳಿಸಿದ ಟ್ರಂಪ್

ವಾಷಿಂಗ್ಟನ್, ಜನವರಿ 5: ಪ್ರಭಾವಿ ಸೇನಾಧಿಕಾರಿ, ಎಲೈಟ್ ಕ್ಯೂಡ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮಾನಿ ಹತ್ಯೆ ಬಳಿಕ, ಅಮೆರಿಕ ಪ್ರಜೆಗಳ ಮೇಲೆ ದಾಳಿ ನಡೆಯುವ ಶಂಕೆ ವ್ಯಕ್ತವಾಗಿದೆ. ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್‌ಗೆ ಟ್ರಂಪ್ ಅವರು ಸರಣಿ ಟ್ವೀಟ್‌ಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.

"ಅಮೆರಿಕದ ಪ್ರಜೆಗಳ ಮೇಲೆ ಅಥವಾ ಆಸ್ತಿ-ಪಾಸ್ತಿಗಳ ಮೇಲೆ ಇರಾನ್ ಪ್ರತಿ ದಾಳಿ ನಡೆಸಿದರೆ ಅಮೆರಿಕವು ತಕ್ಷಣವೇ ಪ್ರತೀಕಾರ ತೆಗೆದುಕೊಳ್ಳಲಾಗುವುದು. ಇರಾನ್‌ನ 52 ಸ್ಥಳ ಮೇಲೆ ಗುರಿ ಇಡಲಾಗಿದ್ದು, ಅತ್ಯಂತ ವೇಗ ಹಾಗೂ ಪ್ರಭಾವಿ ಪ್ರತಿ ದಾಳಿ ನಡೆಸುತ್ತೇವೆ" ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

 US will hit 52 sites if Americans are attacked: Donald Trump warns Iran

ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ಖಾಸಿಮ್ ಸೊಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿ ಇರಾಕ್, ಸಿರಿಯಾ, ಯೆಮನ್ ಸೇರಿದಂತೆ ಹಲವು ದೇಶಗಳಲ್ಲಿಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ ಖಾಸಿಂ ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ವಾಯು ದಾಳಿಯಲ್ಲಿ ಕೊಂದಿರುವ ತನ್ನ ದೇಶದ ಕ್ರಮವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದರು.

ಅಮೆರಿಕದ ವಿರುದ್ಧ ಸಂಚು ರೂಪಿಸುತ್ತಿರುವ ಇರಾನ್‌ಗೆ ಸರಣಿ ಟ್ವೀಟ್‌ಗಳ ಮೂಲಕ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಮೇಲೆ ದಾಳಿ ನಡೆದರೆ ಇರಾನ್‌ನ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ಪ್ರಮುಖ ಸ್ಥಳಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗುವುದು. ಇರಾನ್ ಸೇರಿದಂತೆ 52 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಅಮೆರಿಕ ಇನ್ನಷ್ಟು ಬೆದರಿಕೆಯನ್ನು ಬಯಸುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

''ಇರಾನ್‌ನ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ಪ್ರಮುಖ ಸ್ಥಳಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗುವುದು. ಇರಾನ್ ಸೇರಿದಂತೆ 52 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಅಮೆರಿಕ ಇನ್ನಷ್ಟು ಬೆದರಿಕೆಯನ್ನು ಬಯಸುವುದಿಲ್ಲ" ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

READ IN ENGLISH

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+