ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಆರ್ಥಿಕ ನೆರವು ಸ್ಥಗಿತ: WHO ಮೇಲಾಗುವ ಪರಿಣಾಮವೇನು?

|
Google Oneindia Kannada News

ವಾಷಿಂಗ್ಟನ್,ಏಪ್ರಿಲ್ 16: ವಿಶ್ವ ಆರೋಗ್ಯ ಸಂಸ್ಥೆ ಕುರಿತು ಅಮೆರಿಕ ತೆಗೆದುಕೊಂಡ ನಿರ್ಧಾರದಿಂದ ಭಾರಿ ದುಷ್ಪರಿಣಾಮ ಉಂಟಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ಸ್ಥಗಿತಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಪ್ರಮುಖ ಸಂಸ್ಥೆಯಾಗಿದೆ. ವಿಶ್ವದಲ್ಲಿ ಇದುವರೆಗೆ ಕೊರೊನಾ ವೈರಸ್‌ನಿಂದ 1,28,000ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರದಿಂದ ವಿಶ್ವ ಆರೋಗ್ಯ ಸಂಸ್ಥೆಯ ಸಾಕಷ್ಟು ಯೋಜನೆಗಳನ್ನು ಬದಿಗಿಡುವ ಸಮಸ್ಯೆ ಎದುರಾಗಿದೆ.
ಹಾಗೆಯೇ ಇದು ಕಿತ್ತಾಡುವ ಸಮಯವಲ್ಲ, ಇಡೀ ವಿಶ್ವಕ್ಕೆ ಬಂದಿರುವ ಮಹಾಮಾರಿಯನ್ನು ಎಲ್ಲರೂ ಒಗ್ಗೂಡಿ ತೊಲಗಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

WHOಗೆ ಅರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆ WHOಗೆ ಅರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆ

ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಆರ್ಟಿಕಲ್ ಒಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪದೇ ಪದೇ ಕೊರೊನಾ ಮಹಾಮಾರಿ ಬಗ್ಗೆ ಎಚ್ಚರಕೆ ನೀಡುತ್ತಿದ್ದರೂ ಕೂಡ ಟ್ರಂಪ್ ಅದನ್ನು ತಳ್ಳಿ ಹಾಕಿದ್ದರು. ಇದರಿಂದಲೇ ಅಮೆರಿಕಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಬರೆಯಲಾಗಿದೆ.

ಕೊರೊನಾ ತಡೆ ಯೋಜನೆಗೂ ಪೆಟ್ಟು

ಕೊರೊನಾ ತಡೆ ಯೋಜನೆಗೂ ಪೆಟ್ಟು

ಡೊನಾಲ್ಡ್ ಟ್ರಂಪ್ ಮಂಗಳವಾರ ತೆಗೆದುಕೊಂಡ ನಿರ್ಧಾರದಿಂದ ಕೊರೊನಾ ವೈರಸ್ ತಡೆಗಟ್ಟುವಿಕೆ ಸೇರಿ ವಿಶ್ವ ಆರೋಗ್ಯ ಸಂಸ್ಥೆಯ ಸಾಕಷ್ಟು ಯೋಜನೆಗಳಿಗೆ ಬ್ರೇಕ್ ಬೀಳಲಿದೆ. ನೂರಾರು ಮಿಲಿಯನ್ ಪ್ರಾಜೆಕ್ಟ್‌ಗಳು ನೆಲಕಚ್ಚಲಿವೆ. ಈಗ ಡಬ್ಲ್ಯೂಎಚ್‌ಓಗೆ ಆತಂಕ ಶುರುವಾಗಿದೆ. ಡಬ್ಲ್ಯೂಎಚ್‌ಓ 2020-21ರ ಯೋಜನೆಗೆ 4.8 ಬಿಲಿಯನ್ ಡಾಲರ್ ಮೊತ್ತದ ಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಮಲೇರಿಯಾ, ಪೊಲೀಯೋ ಕುರಿತ ಯೋಜನೆಗಳು ಕೂಡ ಇದ್ದವು. ಆದರೆ ಅದ್ಯಾವ ಯೋಜನೆಯೂ ಕೈಗೂಡುವುದಿಲ್ಲ.

ಅಮೆರಿಕವು ಕೂಡ 2019ರಿಂದ ಮಾರ್ಚ್‌ವರೆಗೆ ಸುಮಾರು 90 ಮಿಲಿಯನ್ ಡಾಲರ್‌ನಷ್ಟು ನೆರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದೆ.
ಡಬ್ಲ್ಯೂಎಚ್‌ಓ ಬಜೆಟ್‌ನಲ್ಲಿ ಶೇ.15ರಷ್ಟು ಅಮೆರಿಕದ್ದು

ಡಬ್ಲ್ಯೂಎಚ್‌ಓ ಬಜೆಟ್‌ನಲ್ಲಿ ಶೇ.15ರಷ್ಟು ಅಮೆರಿಕದ್ದು

ಅಮೆರಿಕವು 2018-19ನೇ ಸಾಲಿನ ವಿಶ್ವ ಆರೋಗ್ಯ ಸಂಸ್ಥೆ ಬಜೆಟ್‌ನಲ್ಲಿ ಶೇ.15ರಷ್ಟನ್ನು ಅಮೆರಿಕ ನೀಡಿತ್ತು. ಸುಮಾರು 4.4 ಬಿಲಿಯನ್ ಡಾಲರ್ ಬಜೆಟ್ ಅದಾಗಿತ್ತು. ಕೇವಲ ಒಂದೇ ಒಂದು ದೇಶ ಶೇ.15ರಷ್ಟು ಹಣವನ್ನು ಡಬ್ಲ್ಯೂಎಚ್‌ಓಗೆ ನೀಡಿತ್ತು.

ಟ್ರಂಪ್ ವಾದವೇನು?

ಟ್ರಂಪ್ ವಾದವೇನು?

ಮೊದಲೇ ಕೊವಿಡ್ 19 ಸಾಂಕ್ರಾಮಿಕ ರೋಗವೆಂದು ತಿಳಿದಿದ್ದರೂ, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ ಎಂದು ಆರೋಗ್ಯ ಸಂಸ್ಥೆ ಸುಳ್ಳು ಹೇಳಿತ್ತು. ಹಾಗೆಯೇ ವೈರಸ್ ಹುಟ್ಟಿಗೆ ಕಾರಣವಾಗಿರುವ ಚೀನಾದ ಮೇಲೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿದ್ದ ನೆರವನ್ನು ತಡೆಹಿಡಿದಿದ್ದಾರೆ.

ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಸಮಯ

ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಸಮಯ

ಟ್ರಂಪ್ ನಿರ್ಧಾರವನ್ನು ದೂಷಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಇದು ಕೋಪ ಮಾಡಿಕೊಳ್ಳುವ ಸಮಯವಲ್ಲ, ಎಲ್ಲರೂ ಒಗ್ಗಟ್ಟಿನಿಂದ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಬೇಕು. ಅಮೆರಿಕವು ಸಾಕಷ್ಟು ವರ್ಷಗಳಿಂದ ಡಬ್ಲ್ಯೂಎಚ್‌ಓಗೆ ಸ್ನೇಹಿತನಂತಿದೆ. ಮುಂದೆಯೂ ಸ್ನೇಹ ಹೀಗೆಯೇ ಮುಂದುವರೆಯಲಿದೆ ಎನ್ನುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.

English summary
With Trump's decision on Tuesday, several WHO programmes, including emergency mitigation of the coronavirus, are now in danger of being set aside, as hundreds of millions of dollars in funding dry up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X