ಬೇಸಿಗೆಯಲ್ಲಿ ಎಳನೀರಿಗೆ ಈ ಪದಾರ್ಥಗಳ ಸೇರಿಸಿ ಕುಡಿಯಿರಿ: ದೇಹ ದಿನವಿಡಿ ತಂಪಾಗಿರುತ್ತದೆ
ಬೇಸಿಗೆಯ ಬಿಸಿಲಿನಲ್ಲಿ ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಸಮಯದಲ್ಲಿ ಎಳನೀರು ದೇಹವನ್ನು ತಂಪಾಗಿಡುವ ಅತ್ಯುತ್ತಮವಾದ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದೆ. ಎಳನೀರಿನಲ್ಲಿ ಪೊಟ್ಯಾಸಿಯಂ, ಮೆಗ್ನೀಷಿಯಂ ಸೇರಿದಂತೆ ಹಲವು ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಇದು ದೇಹದ ನೀರಿನ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಎಳನೀರಿಗೆ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸಿ ಕುಡಿದರೆ ಆರೋಗ್ಯ ಮೇಲೆ ಪ್ರಯೋಜನ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನಿಂಬೆ ರಸ
ಎಳನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಯ ಜೊತೆಗೆ ಆರೋಗ್ಯ ಲಾಭವೂ ಹೆಚ್ಚುತ್ತದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ. ನಿಂಬೆ ರಸದೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ದೇಹದ ನಿರ್ಜಲೀಕರಣ ಮಾಯವಾಗಲು ಸಹಾಯ ಮಾಡುತ್ತದೆ.

ಸೌತೆಕಾಯಿ
ಸೌತೆಕಾಯಿ ದೇಹವನ್ನು ತಂಪಾಗಿಡಲು ಸಹಾಯ ಮಾಡುವುದರ ಜೊತೆಗೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರವಾದ ತರಕಾರಿಯಾಗಿದೆ. ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ತಂಪು ನೀಡಲು ಸೌತೆಕಾಯಿ ಒಂದು ಅತ್ಯುತ್ತಮವಾದ ಆಯ್ಕೆಯಾಗಿದೆ. ಸೌತೆಕಾಯಿ ಹೆಚ್ಚಿ ಅದರ ತುಂಡುಗಳನ್ನು ಎಳನೀರಿನಲ್ಲಿ ಬೆರೆಸಿ ಸೇವಿಸಿದರೆ ದೇಹದಲ್ಲಿ ನೀರಿನಾಂಶವನ್ನು ಕಾಪಾಡಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದೆ.
ಜೇನುತುಪ್ಪ
ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು ಎಳನೀರಿಗೆ ಸೇರಿಸುವುದರಿಂದ ನೈಸರ್ಗಿಕ ಸಿಹಿತನ ಸಿಗುತ್ತದೆ. ಜೊತೆಗೆ ದೇಹಕ್ಕೆ ತ್ವರಿತವಾಗಿ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಬೆಳಗಿನ ಸಮಯದಲ್ಲಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ.
ಪುದೀನಾ ಎಲೆಗಳು
ಪುದೀನಾ ಎಲೆಗಳು ಅತ್ಯಂತ ಪರಿಮಳಯುಕ್ತ ಮತ್ತು ಔಷಧಿಯ ಗುಣಗಳನ್ನು ಹೊಂದಿರುವ ಒಂದು ಜನಪ್ರಿಯವಾದ ಗಿಡಮೂಲಿಕೆ ಆಗಿದೆ. ತಾಜಾ ಪುದೀನಾ ಎಲೆಗಳನ್ನು ಎಳನೀರಿನಲ್ಲಿ ಸೇರಿಸಿದರೆ ಪಾನೀಯದ ರುಚಿ ಮತ್ತಷ್ಟು ಹೆಚ್ಚುತ್ತದೆ. ಪುದೀನಾ ಹೊಟ್ಟೆಯನ್ನು ತಂಪಾಗಿಡಲು ಹಾಗೂ ಉಬ್ಬರದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗುತ್ತದೆ. ಬೇಸಿಗೆಯಲ್ಲಿ ಇದು ದೇಹಕ್ಕೆ ಹೆಚ್ಚಿನ ತಂಪು ನೀಡುತ್ತದೆ.
ಶುಂಠಿ
ಶುಂಠಿಯು ಔಷಧೀಯ ಗುಣಗಳನ್ನು ಮತ್ತು ವಿಟಮಿನ್ ಗಳಿಂದ ಸಮೃದ್ದವಾಗಿರುವ ಅತ್ಯುತ್ತಮವಾದ ಆಹಾರವಾಗಿದೆ. ಸ್ವಲ್ಪ ತುರಿದ ಶುಂಠಿಯನ್ನು ಎಳನೀರಿನಲ್ಲಿ ಸೇರಿಸಿದರೆ ವಿಶೇಷ ರುಚಿ ಸಿಗುತ್ತದೆ. ಶುಂಠಿ ಜೀರ್ಣಕ್ರಿಯೆ ಸುಧಾರಿಸಲು ಹಾಗೂ ಹೊಟ್ಟೆಯ ಉರಿಯೂತ ಕಡಿಮೆ ಮಾಡಲು ಸಹಕಾರಿ. ಬೆಳಿಗ್ಗೆ ಈ ಪಾನೀಯ ಸೇವಿಸಿದರೆ ದೇಹ ಚುರುಕಾಗಿರುತ್ತದೆ.
ಸೂಚನೆ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ, ಅಲರ್ಜಿ ಅಥವಾ ವೈದ್ಯಕೀಯ ಪರಿಸ್ಥಿತಿ ಇದ್ದರೆ ವೈದ್ಯರ ಸಲಹೆ ಪಡೆದು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.














Click it and Unblock the Notifications