Copra: ಬೆಂಗಳೂರಿನಲ್ಲಿ ಗಗನಕ್ಕೇರಿದ ಕೊಬ್ಬರಿ ದರ, ಕ್ವಿಂಟಾಲ್‌ಗೆ 43,000 ರೂ; ಇಂದಿನ ಮಾರುಕಟ್ಟೆ ಬೆಲೆಪಟ್ಟಿ

Copra Price Today Updates: ಕಲ್ಪತರು ನಾಡು ತುಮಕೂರು ವ್ಯಾಪ್ತಿಯಲ್ಲಿ ಹಚ್ಚಾಗಿ ಬೆಳೆಯುವ ತೆಂಗಿನಕಾಯಿಗೆ, ಕೊಬ್ಬರಿಗೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಇಲ್ಲಿನ ತಿಪಟೂರು ಉಂಡೆ ಕೊಬ್ಬರಿಯು ಪ್ರತಿ ಕ್ವಿಂಟಾಲ್‌ಗೆ 38000 ರೂ.ಗೆ ಏರಿಕೆ ಕಂಡು ಐತಿಹಾಸಿಕ ದಾಖಲೆ ಬರೆದಿತ್ತು. ಇದೀಗ ಅದರ ಬೆಲೆ ಇಳಿಮುಖವಾಗಿದೆ. ಇನ್ನೊಂದೆಡೆ ಬೆಂಗಳೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಗುರುವಾರ (ಮೇ 21) ತಿಪಟೂರು ಕೊಬ್ಬರಿ ದರಕ್ಕಿಂತ ಅತ್ಯಧಿಕ ಬೆಲೆ ದಾಖಲಾಗಿದ್ದು, ಇದು ಸಾರ್ವತ್ರಿಕ ದಾಖಲೆ ಎನ್ನಲಾಗಿದೆ. ಇಂದು ಬೆಂಗಳೂರು, ತುಮಕೂರು ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳ ಕೊಬ್ಬರಿ ದರದ ಅಪ್ಡೇಟ್ ಇಲ್ಲಿದೆ.

ತೆಂಗು ಕೃಷಿಯನ್ನೇ ನೆಚ್ಚಿಕೊಂಡು ಬದುಕುವ ಕುಟುಂಬಗಳು ಅಪಾರ. ಇಂತಹ ಕುಟುಂಬ ಮತ್ತು ತೆಂಗು ಬೆಳೆ ಹೆಚ್ಚಾಗಿ ತುಮಕೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ. ತಿಪಟೂರು, ಕಡೂರು, ಅರಸೀಕೆರೆ, ತುಮಕೂರು ಭಾಗದ ತೆಂಗಿನ ಕಾಯಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಗುಣಮಟ್ಟದ ಕೊಬ್ಬರಿ ಇದಾಗಿದ್ದರಿಂದ ಬೆಂಗಳೂರು, ಕರ್ನಾಟಕದ ಇತರ ಭಾಗಗಳು ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

Copra Prices

ಬೆಂಗಳೂರಿನಲ್ಲಿ 43,000 ರೂ, ಗಗನಕ್ಕೇರಿದ ಕೊಬ್ಬರಿ ದರ

ಉತ್ಪಾದನೆ ಕೊಂಚ ತಗ್ಗಿದ್ದು, ಅಧಿಕ ಬೇಡಿಕೆ ಸೃಷ್ಟಿಯಾಗಿದ್ದ ಕಾರಣ ಕೊಬ್ಬರಿ ದರ ಏಪ್ರಿಲ್ ಮೊಲದ ವಾರ 38,000 ರೂ. ಇತ್ತು ಆಗ ಬೆಂಗಳೂರಿನಲ್ಲಿ ಇದರ ಬೆಲೆ ಅಷ್ಟಾಗಿ ಇರಲಿಲ್ಲ. ಇಂದು ಒಂದೇ ದಿನಕ್ಕೆ ಬೆಂಗಳೂರು ನರ ಎಪಿಎಂಸಿಯಲ್ಲಿ ಕೊಬ್ಬರಿ ಪ್ರತಿ ಕ್ವಿಂಟಾಲ್ ಬೆಲೆಯು ಬರೋಬ್ಬರಿ 43,000 ರೂ. ಇದೆ. ಕನಿಷ್ಠ ದರ 40,000 ರೂಪಾಯಿ ದಾಖಲಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

Copra: ದಾಖಲೆಯ ಏರಿಕೆಯ ಬಳಿಕ ಕೊಬ್ಬರಿ ದರ ಕುಸಿತ: ಇಂದಿನ ಮಾರುಕಟ್ಟೆ ದರ ಹೀಗಿದೆ
Copra: ದಾಖಲೆಯ ಏರಿಕೆಯ ಬಳಿಕ ಕೊಬ್ಬರಿ ದರ ಕುಸಿತ: ಇಂದಿನ ಮಾರುಕಟ್ಟೆ ದರ ಹೀಗಿದೆ

ಬೆಂಗಳೂರಿಗೂ ಹೆಚ್ಚಾಗಿ ತುಮಕೂರು, ತಿಪಟೂರು ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಬೆಲೆ ಏರಿಕೆ ಆಗುತ್ತದೆ. ಬಳಕೆ ಹೆಚ್ಚಳ ಹಾಗೂ ಇನ್ನಿತರ ಕಾರಣಗಳಿಂದ ಬೆಂಗಳೂರಿನಲ್ಲಿ ಕೊಬ್ಬರಿ ದರ ಗಗನಕ್ಕೇರಿದೆ. ಇದು ರೈತರು ಹಾಗೂ ಮಧ್ಯವರ್ತಿಗಳಿಗೆ ಭಾರಿ ಆದಾಯ ತಂದು ಕೊಟ್ಟಿದೆ.

ತಿಪಟೂರಿನಲ್ಲಿ ಕೊಬ್ಬರಿ ದರ ಎಷ್ಟಿದೆ?

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಏಪ್ರಿಲ್ ಮೊದಲ ವಾರದಿಂದ (38000 ರೂ.) ಗಗನಕ್ಕೇರಿದ್ದ ದರ ನಮರ ಏ.23ಕ್ಕೆ ಇಳಿಕೆ 34,000 ರೂ.ಗೆ ಕುಸಿದಿದ್ದು, ಬಳಿಕ ಮೇ ಮೊದಲ ವಾರ ಮತ್ತೆ ಕ್ವಿಂಟಾಲ್ ಕೊಬ್ಬರಿಗೆ 38000 ರೂ. ಏರಿಕೆ ಆಗಿತ್ತು. ಇಂದು ತಿಪಟೂರಿನ ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್ ಬೆಲೆಯು ಕನಿಷ್ಠ 30,6000 ರೂ ಮತ್ತು ಗರಿಷ್ಠ 33,000 ರೂಪಾಯಿ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಹೆಚ್ಚಿನ ಎಣ್ಣೆ ಅಂಶ ಇರುವ, ದಪ್ಪ ಕೊಬ್ಬರಿ ಇದಾಗಿದ್ದು, ಗುಣಮಟ್ಟದಿಂದ ಕೂಡಿರುತ್ತದೆ. ಹೀಗಾಗಿಯೇ ಇಲ್ಲಿನ ಕೊಬ್ಬರಿಗೆ ಅಪಾರ ಬೇಡಿಕೆ. ಕೊಬ್ಬರಿ ಎಂದರೆ ತಿಪಟೂರಿನ ಕೊಬ್ಬರಿ ಎನ್ನುವಷ್ಟರ ಮಟ್ಟಿಗೆ ತೆಂಗು ಕೃಷಿ ಪ್ರಸಿದ್ಧಿ ಪಡೆದಿದೆ.

ಇಂದಿನ ವಿವಿಧ ಮಾರಕಟ್ಟೆಗಳ 1 ಕ್ವಿಂಟಾಲ್ ಕೊಬ್ಬರಿ ದರಪಟ್ಟಿ

ಬೆಂಗಳೂರು ಎಪಿಎಂಸಿ: ಕನಿಷ್ಠ 40,000 ರೂ ಮತ್ತು ಗರಿಷ್ಠ 43,000 ರೂಪಾಯಿ

ಅರಸೀಕೆರೆ ಎಪಿಎಂಸಿ: ಕನಿಷ್ಠ 32,000 ರೂ ಮತ್ತು ಗರಿಷ್ಠ 32,000 ರೂಪಾಯಿ

ಚಳ್ಳಕೆರೆ ಎಪಿಎಂಸಿ: ಕನಿಷ್ಠ 14,000 ರೂ ಮತ್ತು ಗರಿಷ್ಠ 14,000 ರೂಪಾಯಿ

ತಿಪಟೂರು ಮಾರುಕಟ್ಟೆ: ಕನಿಷ್ಠ 30,6000 ರೂ ಮತ್ತು ಗರಿಷ್ಠ 33,000 ರೂಪಾಯಿ

ಕಡೂರು ಎಪಿಎಂಸಿ: ಕನಿಷ್ಠ 16,000 ರೂ ಮತ್ತು ಗರಿಷ್ಠ 16,000 ರೂಪಾಯಿ

ತುಮಕೂರು: ಕನಿಷ್ಠ 18,600 ರೂ. ಹಾಗೂ ಗರಿಷ್ಠ 19,800 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+