ದ್ವಿತೀಯ PUC ಪರೀಕ್ಷೆ-2 ಫಲಿತಾಂಶ ಬಿಡುಗಡೆ: ಒಟ್ಟಾರೆ ರಿಸಲ್ಟ್‌ ಶೇ. 92.25ಕ್ಕೆ ಏರಿಕೆ: ಮಧು ಬಂಗಾರಪ್ಪ

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2 (ಪೂರಕ ಪರೀಕ್ಷೆ) ಪಲಿತಾಂಶ ಇಂದು ಮಧ್ಯಾಹ್ನ 1 ಗಂಟೆಗೆ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ karresults.nic.in ಲಿಂಕ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಮಾತ್ರವಲ್ಲದೇ ಡಿಜಿಲಾಕರ್ ಮತ್ತು ಉಮಾಂಗ್ ಆಪ್‌ನಲ್ಲೂ ನಿಮ್ಮ ಫಲಿತಾಂಶ ನೋಡಬಹುದು ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕಳೆದ ಏಪ್ರಿಲ್ 30ರಿಂದ ಆರಂಭವಾಗಿದ್ದು ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 13ರಂದು ಕೊನೆಗೊಂಡಿತ್ತು. ಒಟ್ಟು ಸುಮಾರು 1.72ಲಕ್ಷ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಎದುರಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಅವರಿಗೆ ಇಂದು ಶಿಕ್ಷಣ ಇಲಾಖೆ ಇಂದು ಫಲಿತಾಂಶ ಬಿಡುಗಡೆ ಮೂಲಕ ಸಿಹಿ ಸುದ್ದಿ ಕೊಟ್ಟಿದೆ.

Karnataka

ಒಟ್ಟಾರೆ ಪಿಯು ಫಲಿತಾಂಶವು ಶೇ. 92.25ಕ್ಕೆ ಏರಿಕೆ

ಪಿಯುಸಿ ಪರೀಕ್ಷೆ-1ರಲ್ಲೇ ರಾಜ್ಯವು ಸಾರ್ವಕಾಲಿಕ ದಾಖಲೆಯ ಫಲಿತಾಂಶ ಸಾಧಿಸಿತ್ತು. ಪರೀಕ್ಷೆ-2ರ ನಂತರ, ಆ ದಾಖಲೆಯನ್ನು ಮತ್ತೊಮ್ಮೆ ಸುಧಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಸರ್ಕಾರ ಹಲವು ವಿದ್ಯಾರ್ಥಿ ಸ್ನೇಹಿ ಕ್ರಮಗಳ ಮೂಲಕ ರಾಜ್ಯದ ಒಟ್ಟು ಕ್ರೋಢೀಕೃತ ಫಲಿತಾಂಶವು ಶೇ. 92.25ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಶೇ. 85.19 ಫಲಿತಾಂಶಕ್ಕೆ ಹೋಲಿಸಿದರೆ, ಇದು ಶೇ. 7.06 ರಷ್ಟು ಮಹತ್ವದ ಏರಿಕೆಯಾಗಿದೆ. ಇದು ಕರ್ನಾಟದ ಇತಿಹಾಸದಲ್ಲೇ ದೊಡ್ಡ ಸಾಧನೆಯಾಗಿದೆ.

ಪರೀಕ್ಷೆ 1ರ ಫಲಿತಾಂಶದ ಬಳಿಕ ಒಟ್ಟಾರೆ ದ್ವಿತೀಯ ಪಿಸಿಯು ಫಲಿತಾಂಶವನ್ನು 86ರಷ್ಟು ಏರಿಕೆ ಆಗಿತ್ತು. ಇದೀಗ ಪರೀಕ್ಷೆ 2ರ ಬಳಿಕ ಶೇ.7ರಷ್ಟು ಹೆಚ್ಚಳದೊಂದಿಗೆ ಒಟ್ಟಾರೆ ಶೇ. 92.25ಕ್ಕೆ ಏರಿಕೆ ಕಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಎಲ್ಲ ವಿಭಾಗಗಳಲ್ಲೂ ಭರ್ಜರಿ ಸಾಧನೆ

ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ವಿಭಾಗಗಳಲ್ಲೂ ಗಮನಾರ್ಹ ಸಾಧನೆ ದಾಖಲಾಗಿದೆ. ಕಲಾ ವಿಭಾಗದ ಫಲಿತಾಂಶ ಕಳೆದ ವರ್ಷದ 69.47%ರಿಂದ 83.31%ಕ್ಕೆ, ವಾಣಿಜ್ಯ ವಿಭಾಗದ ಫಲಿತಾಂಶ 87.83%ರಿಂದ 92.84%ಕ್ಕೆ ಹಾಗೂ ವಿಜ್ಞಾನ ವಿಭಾಗದ ಫಲಿತಾಂಶ 91.88%ರಿಂದ 96.01%ಕ್ಕೆ ಏರಿಕೆಯಾಗಿದೆ.

ಗ್ರಾಮೀಣ, ನಗರ ವಿದ್ಯಾರ್ಥಿಗಳ ಸಾಧನೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶದ ಫಲಿತಾಂಶ 92.77% ದಾಖಲಾಗಿದ್ದು, ನಗರ ಪ್ರದೇಶದ ಫಲಿತಾಂಶ 92.01% ಆಗಿದೆ. ಕಳೆದ ವರ್ಷ ಗ್ರಾಮೀಣ ಭಾಗದ ಫಲಿತಾಂಶ 84.94% ಇತ್ತಾದರೆ, ಈ ಬಾರಿ ಅದು ಗಣನೀಯವಾಗಿ ಸುಧಾರಿಸಿರುವುದು ಹಳ್ಳಿ ಮಕ್ಕಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಫಲಿತಾಂಶ ವೀಕ್ಷಣೆ ಹೇಗೆ, ಲಿಂಕ್ ಇಲ್ಲಿದೆ

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಸಂಯೋಜನೆಯನ್ನು ವೆಬ್‌ಸೈಟ್ https://karresults.nic.in ಅಥವಾ https://dpue-exam.karnataka.gov.in/kseabdpue2025e1e2e3/WebForm1.aspx ಅಥವಾ ಕರ್ನಾಟಕ ಒನ್ ಅಪ್ಲಿಕೇಶನ್ ಮೂಲಕ 21-05-2026 ರಂದು ಮಧ್ಯಾಹ್ನ 01:00 ಗಂಟೆಗೆ 2026 II PUC ಪರೀಕ್ಷೆ -2 ರ ಫಲಿತಾಂಶವನ್ನು ವೀಕ್ಷಿಸುವಂತೆ ಕೋರಿದೆ.

ಪಿಯುಸಿ ಬಳಿಕ ಮುಂದೇನು ಎಂದು ಯೋಚಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಂದಿನ ವೃತ್ತಿಪರ ಪದವಿ ಕೋರ್ಸ್‌ಗಳು, ಪ್ರವೇಶ ಪರೀಕ್ಷೆ ತಯಾರಿಗೆ ಮಕ್ಕಳು ಸಜ್ಜಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+