ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್‌ ಕ್ರಿಕೆಟ್‌ಗೆ ಎಂಟ್ರಿ ಕೊಡುವ ಬಗ್ಗೆ ಬಾಲ್ಯದ ಕೋಚ್‌ ಅಚ್ಚರಿ ಹೇಳಿಕೆ

Virat Kohli: ಇದೀಗ ಸದ್ಯ ನಡೆಯುತ್ತಿರುವ ಐಪಿಎಲ್‌ 2026ರಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ನಡುವೆಯೇ ಅವರು ಮತ್ತೆ ಟೆಸ್ಟ್‌ ಕ್ರಿಕೆಟ್‌ಗೆ ಮರಳಬೇಕು ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಈ ಕುರಿತು ಮಾತಾನಡಿದ ವಿರಾಟ್ ಅವರ ಬಾಲ್ಯದ ಕೋಚ್ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದು, ಇದು ಕ್ರಿಕೆಟ್‌ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ ತಂಡವು 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಅವರು ಈ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯದ ಒಂದು ವರ್ಷದ ನಂತರ ಟೆಸ್ಟ್‌ಗೂ ನಿವೃತ್ತಿ ಘೋಷಣೆ ಮಾಡಿದರು. ಇದು ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದ ನಿರ್ಧಾರವಾಗಿತ್ತು.

Virat Kohli Test Comeback Childhood Coach Rajkumar Sharma s Statement Sparks Buzz in Social Media

ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ದಿಢೀರ್ ನಿವೃತ್ತಿ

ಟೆಸ್ಟ್ ಮೇಲೆ ಕೊಹ್ಲಿಗಿದ್ದ ಅಪಾರ ಪ್ರೀತಿ ಯಾರಿಗೂ ತಿಳಿದಿಲ್ಲದ ವಿಚಾರವೇನಲ್ಲ. ಅಷ್ಟೇ ಅಲ್ಲದೆ ಅವರ ಅದ್ಭುತ ಫಿಟ್‌ನೆಸ್ ಅನ್ನು ಗಮನಿಸಿದಾಗ ಅವರು ಇಷ್ಟು ಬೇಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವಿರಾಟ್ ಕೊಹ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗಿನಿಂದ ಅವರ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ಕ್ರಿಕೆಟ್ ತಜ್ಞರು ಮತ್ತು ಮಾಜಿ ಆಟಗಾರರು ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೊಹ್ಲಿ ಟೆಸ್ಟ್ ಮತ್ತು ಟಿ20 ಎರಡೂ ಮಾದರಿಗಳಿಂದ ದೂರ ಉಳಿದಿದ್ದಾರೆ.

ವಿರಾಟ್‌ ಕೊಹ್ಲಿ ಬಾಲ್ಯದ ಕೋಚ್ ಹೇಳಿದ್ದೇನು?

ಇತ್ತೀಚೆಗೆ ಕೊಹ್ಲಿಯ ಬಾಲ್ಯದ ತರಬೇತುದಾರರಾದ ರಾಜಕುಮಾರ್ ಶರ್ಮಾ ಅವರು ನೀಡಿರುವ ಒಂದು ಹೇಳಿಕೆಯು ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್‌ ಅಂಗಳಕ್ಕೆ ಇಳಿಯಬಹುದು ಎಂಬ ಆಸೆಗೆ ಇದು ರೆಕ್ಕೆಪುಕ್ಕ ನೀಡಿದೆ. ಎಕ್ಸ್‌ಪ್ರೆಸ್ ಕೆಫೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಾಜಕುಮಾರ್ ಶರ್ಮಾ, "ವಿರಾಟ್ ಕೊಹ್ಲಿಯ ಅನೇಕ ಅಭಿಮಾನಿಗಳು ನನ್ನ ಬಳಿ ಬಂದು ಸರ್ ದಯವಿಟ್ಟು ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳುವಂತೆ ಕೇಳಿಕೊಳ್ಳಿ. ಏಕೆಂದರೆ ಅವರು ನಿಮ್ಮ ಮಾತನ್ನು ಕೇಳುತ್ತಾರೆ ಎಂದು ಹೇಳಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

ರಾಜಕುಮಾರ್ ಶರ್ಮಾ ಅವರು ಕೊಹ್ಲಿಯ ಬಾಲ್ಯದ ಕೋಚ್ ಆಗಿರುವುದರಿಂದ ಅಭಿಮಾನಿಗಳು ಅವರ ಮೂಲಕ ಕೊಹ್ಲಿಯನ್ನು ಮತ್ತೆ ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ನೋಡಲು ಈ ರೀತಿ ಮನವಿ ಮಾಡುತ್ತಿದ್ದಾರೆ. ಇದು ಕೊಹ್ಲಿ ಮತ್ತು ಅವರ ಕೋಚ್ ನಡುವಿನ ಗಾಢವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಬಹುದು.

ಕೊಹ್ಲಿಯನ್ನು ಟೆಸ್ಟ್ ಕ್ರಿಕೆಟ್‌ಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದಿರಾ ಎಂಬ ಪ್ರಶ್ನೆಗೆ ರಾಜಕುಮಾರ್ ಶರ್ಮಾ ಅವರು ಉತ್ತರಿಸಿ, "ಅದರ ಬಗ್ಗೆ ಮಾತುಕತೆಯಂತೂ ನಡೆದಿದೆ, ಮುಂದೆ ಏನಾಗುತ್ತದೆ," ಎಂದು ಕಾದು ನೋಡೋಣ ಎಂದು ಹೇಳಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಿದಾಯ ಹೇಳುವ ಮೂಲಕ ತಲೆಮಾರುಗಳ ಕಾಲ ನೆನಪಿಡುವಂತಹ ಅದ್ಭುತ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಟೆಸ್ಟ್ ಪಂದ್ಯಗಳ ಬಗ್ಗೆ ಭಾರತೀಯ ಕ್ರಿಕೆಟ್‌ನ ದೃಷ್ಟಿಕೋನವನ್ನೇ ಬದಲಿಸಿದ ಈ ಆಧುನಿಕ ಯುಗದ ಮಾಂತ್ರಿಕ ಎಂಬ ಹೆಗ್ಗಳಿಕೆ ಕೊಹ್ಲಿ ಅವರದ್ದಾಗಿದೆ.

ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಸಾಧನೆ

ಟೆಸ್ಟ್ ಪಂದ್ಯಗಳ ಬಗ್ಗೆ ಭಾರತೀಯ ಕ್ರಿಕೆಟ್‌ನ ದೃಷ್ಟಿಕೋನವನ್ನೇ ಬದಲಿಸಿದ ಈ ಆಧುನಿಕ ಯುಗದ ಮಾಂತ್ರಿಕ ವಿರಾಟ್‌ ಕೊಹ್ಲು ಅವರು, 123 ಟೆಸ್ಟ್ ಪಂದ್ಯಗಳಿಂದ 9,230 ರನ್‌ಗಳನ್ನು ಗಳಿಸಿದ್ದಾರೆ. 2011ರಲ್ಲಿ ಪದಾರ್ಪಣೆ ಮಾಡಿದ ಒಬ್ಬ ಯುವ, ಆಕ್ರಮಣಕಾರಿ ಬ್ಯಾಟರ್‌ನಿಂದ ಹಿಡಿದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅಪ್ರತಿಮ ನಿರ್ಭಯದ ಸಂಕೇತವಾಗಿ ಬೆಳೆದ ವಿರಾಟ್ ಕೊಹ್ಲಿಯವರ ಈ ಪಯಣವು ನಿರಂತರ ಶ್ರೇಷ್ಠತೆಯಿಂದ ಕೂಡಿದೆ.

ಕೊಹ್ಲಿ ಅವರ ನಾಯಕತ್ವವು ಭಾರತೀಯ ಟೆಸ್ಟ್ ಕ್ರಿಕೆಟ್‌ನ ಸಂಸ್ಕೃತಿಯನ್ನೇ ಬದಲಿಸಿತು. ಅವರು ಒಟ್ಟು 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅದರಲ್ಲಿ 40 ಗೆಲುವು, 17 ಸೋಲು ಮತ್ತು 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. 58.82% ಗೆಲುವಿನ ಸರಾಸರಿಯನ್ನು ಹೊಂದಿರುವ ಇವರು ಭಾರತದ ಯಾವುದೇ ನಾಯಕನಿಗಿಂತ ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ.

2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಚೊಚ್ಚಲ ಟೆಸ್ಟ್ ಸರಣಿ ಗೆಲುವು ತಂದುಕೊಡುವ ಮೂಲಕ 71 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗಾಣಿಸಿದ್ದು ಅವರ ವೃತ್ತಿಜೀವನದ ದೊಡ್ಡ ಸಾಧನೆಯಾಗಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಸ್ವದೇಶದಲ್ಲಿ ಒಂದು ದೊಡ್ಡ ಶಕ್ತಿಯಾಗಿ ಬೆಳೆದಿದ್ದಲ್ಲದೆ, ವಿದೇಶಿ ನೆಲದಲ್ಲೂ ತೀವ್ರ ಪೈಪೋಟಿ ನೀಡುವ ತಂಡವಾಗಿ ಹೊರಹೊಮ್ಮಿತು. 2016ರಿಂದ 2021ರ ವರೆಗೆ ಭಾರತ ತಂಡವು ಐಸಿಸಿ ಟೆಸ್ಟ್‌ಬಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತ್ತು. ಅಲ್ಲದೆ 2021 ರ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೂ ಅವರ ನಾಯಕತ್ವದಲ್ಲೇ ತಂಡವು ತಲುಪಿದ್ದು ವಿಶೇ‍ವಾಗಿದೆ. ಒಟ್ಟಿನಲ್ಲಿ ಇದೀಗ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ಎಂಟ್ರಿ ಕೊಡಬೇಕು ಎನ್ನುವ ಹಲವು ಕ್ರಿಕೆಟ್ ದಿಗ್ಗಜರು, ಅಭಿಮಾನಿಗಳ ಆಸೆಗೆ ಅವರ ಬಾಲ್ಯದ ಕೋಚ್ ನೀಡಿದ ಹೇಳಿಕೆಯಿಂದ ರೆಕ್ಕೆಪುಕ್ಕ ಬಂದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+