ಈ 5 ವಸ್ತುಗಳನ್ನು ಯಾರಿಂದಲೂ ಸಾಲ ಪಡೆಯಲೂ ಬಾರದು ನೀಡಲೂ ಬಾರದು! ಬಿಡದೇ ಕಾಡುವ ಬಡತನಕ್ಕೆ ಇದು ಕಾರಣ
ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವೊಂದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಸಾಲ ಪಡೆಯಲೇ ಬಾರದು. ಒಂದೊಮ್ಮೆ ಈ ವಸ್ತುಗಳನ್ನು ಸಾಲ ಪಡೆದು ಬಳಸಿದರೆ ಜೀವನದಲ್ಲಿ ನಕಾರಾತ್ಮಕ ಶಕ್ತಿ ತುಂಬುವುದು. ಒಂದರ ಹಿಂದೆ ಒಂದು ಎಂಬಂತೆ ಸಮಸ್ಯೆಗಳು ಬೆನ್ನು ಹತ್ತುವುದು. ಇದು ಯಾಕೆ ಎಂದು ನೋಡುವುದಾದರೆ ಪ್ರತಿಯೊಬ್ಬ ತನ್ನದೇ ಆದ ಶಕ್ತಿ ಮತ್ತು ಅದೃಷ್ಟವನ್ನು ಹೊಂದಿರುತ್ತಾನೆ. ಹೀಗಿರುವಾಗ ನಾವು ಸಾಲ ಪಡೆದು ಈ ವಸ್ತುಗಳನ್ನು ನಮ್ಮದೇ ಎಂಬಂತೆ ಬಳಸಿದಾಗ, ಅವರ ದುರದೃಷ್ಟ ಮತ್ತು ನಕಾರಾತ್ಮಕತೆ ನಮ್ಮ ಜೀವನಕ್ಕೂ ಪ್ರವೇಶಿಸುತ್ತದೆ. ಇದು ನಾನಾ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇತರರಿಂದ ಈ 5 ವಸ್ತುಗಳನ್ನು ಸಾಲ ಪಡೆಯಲೇ ಬಾರದು:

ಬಟ್ಟೆಗಳು: ಇತ್ತೀಚಿನ ದಿನಗಳಲ್ಲಿ, ಫ್ಯಾಷನ್ ಹೆಸರಿನಲ್ಲಿ ಬೇರೆಯವರ ಬಟ್ಟೆಗಳನ್ನು ಪಡೆದು ಧರಿಸುವುದು ಬಹಳ ಸಾಮಾನ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತಾನೆ. ನಾವು ಬೇರೆಯವರ ಬಟ್ಟೆಗಳನ್ನು ಧರಿಸುವಾಗ ಆ ವ್ಯಕ್ತಿಯ ದೇಹದ ಶಕ್ತಿ ನಿಮ್ಮ ದೇಹಕ್ಕೆ ವರ್ಗಾವಣೆಯಾಗುತ್ತದೆ. ಬೇರೆಯವರ ಬಟ್ಟೆ ಕೇಳಿ ಧರಿಸುವುದು ಎಂದರೆ ಬಟ್ಟೆಯ ಜೊತೆ ಅವರ ನಕಾರಾತ್ಮಕ ಶಕ್ತಿಯನ್ನು ಕೂಡಾ ಸಾಲ ಪಡೆದಂತೆ. ಇದರಿಂದಾಗಿ ನಿಮ್ಮ ಅದೃಷ್ಟ ದುರದೃಷ್ಟವಾಗಿ ಬದಲಾಗಬಹುದು. ಇದು ನಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವುದಕ್ಕೆ ಕಾರಣವಾಗಬಹುದು. ಹಾಗಾಗಿ ಯಾರೇ ಆಗಲಿ ಬಟ್ಟೆಯನ್ನು ಕೇಳಿ ಧರಿಸಲೂ ಬೇಡಿ, ನಿಮ್ಮ ಬಟ್ಟೆಯನ್ನು ಬೇರೆಯವರಿಗೆ ನೀಡಲೂ ಬೇಡಿ.

ಗಡಿಯಾರ: ಗಡಿಯಾರ ವ್ಯಕ್ತಿಯ ಅದೃಷ್ಟ ಮತ್ತು ಜೀವನಕ್ಕೆ ಸಂಬಂಧಿಸಿದ ವಸ್ತುವಾಗಿದೆ. ಇದು ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಪ್ರತಿಬಿಂಬಿಸುತ್ತದೆ. ನೀವು ಬೇರೆಯವರ ಗಡಿಯಾರವನ್ನು ಸಾಲ ಪಡೆದಾಗ ಅವರ ಕೆಟ್ಟ ಸಮಯಗಳನ್ನು ಸಹ ಎರವಲು ಪಡೆಯುತ್ತೀರಿ ಎನ್ನುವುದು ನೆನಪಿರಲಿ. ಗಡಿಯಾರದ ಜೊತೆಗೆ, ಅವರ ದುರದೃಷ್ಟವೂ ನಿಮ್ಮ ಜೀವನವನ್ನು ಪ್ರವೇಶಿಸುತ್ತದೆ. ಒಂದು ವೇಳೆ ನಿಮ್ಮ ಗಡಿಯಾರವನ್ನು ಬೇರೆಯವರಿಗೆ ನೀಡಿದರೆ ನಿಮ್ಮ ಅದೃಷ್ಟವನ್ನು ಅವರಿಗೆ ನೀಡಿದಂತೆ. ಮತ್ತೆ ಆ ಗಡಿಯಾರ ನೀವು ಧರಿಸಿದರೆ ಅವರ ದುರಾದೃಷ್ಟ ನಿಮ್ಮ ಪಾಲಿಗೆ ಬರಬಹುದು.

ಪಾದರಕ್ಷೆ: ಫ್ಯಾಷನ್, ಮ್ಯಾಚಿಂಗ್ ಭರಾಟೆಯಲ್ಲಿ ಬೇರೆಯವರ ಚಪ್ಪಲಿಗಳನ್ನು ಧರಿಸುವುದು ಕೂಡಾ ಈಗ ಚಾಲ್ತಿಯಲ್ಲಿದೆ. ಆದರೆ ಪಾದರಕ್ಷೆಗಳನ್ನು ಬೇರೆಯವರಿಗೆ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಒಳ್ಳೆಯದಲ್ಲ. ಇದು ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮಾತ್ರವಲ್ಲ ಗಂಭೀರ ತೊಂದರೆಗೆ ಸಿಲುಕಿಸಬಹುದು ಎಂದು ಅವರಿಗೆ ತಿಳಿದಿರುವುದಿಲ್ಲ. ಧಾರ್ಮಿಕ ನಂಬಿಕೆಯ ಪ್ರಕಾರ, ಶನಿ ಗ್ರಹವು ಪಾದಗಳ ಅಧಿಪತಿ. ಆದ್ದರಿಂದ, ಇತರರ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಕೇಳಿ ಧರಿಸುವ ಮೂಲಕ, ನೀವು ತಿಳಿಯದೆಯೇ ಇತರರ ದುರಾದೃಷ್ಟವನ್ನು ನಿಮ್ಮ ಪಾಲಿಗೆ ಕೇಳಿ ತಂದುಕೊಳ್ಳುತ್ತೀರಿ. ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಉಂಗುರ: ಬೇರೆಯವರ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಹಾಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಉಂಗುರವು ಚಿನ್ನ, ಬೆಳ್ಳಿ ಅಥವಾ ಯಾವುದೇ ಇತರ ಲೋಹದಿಂದ ಮಾಡಲ್ಪಟ್ಟಿರಲಿ, ರತ್ನ ಅಥವಾ ಗ್ರಹದೊಂದಿಗೆ ಸಂಬಂಧ ಹೊಂದಿರಲಿ, ಫ್ಯಾಷನ್ ಉಂಗುರ ಅಥವಾ ಯಾವುದೇ ರೀತಿಯ ಉಂಗುರವಾಗಿರಲಿ, ಬೇರೆಯವರ ಉಂಗುರವನ್ನು ಧರಿಸಲೇಬಾರದು ಎನ್ನುವುದು ವಾಸ್ತು ನಿಯಮ.
ಪೆನ್ನು: ಪೆನ್ನು ಸಾಲ ಪಡೆಯುವುದು ಸಾಮಾನ್ಯ ಅಭ್ಯಾಸ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಹಾಗೆ ಮಾಡುವುದರಿಂದ ನಿಮಗೆ ತೊಂದರೆಯಾಗಬಹುದು. ಇದು ನಿಮ್ಮ ಅದೃಷ್ಟದಾಟವನ್ನೇ ಬದಲಿಸಿ ಬಿಡಬಹುದು. ಬೇರೆಯವರಿಂದ ಪೆನ್ನು ಎರವಲು ಪಡೆಯುವುದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಯಾವುದೋ ಅನಿವಾರ್ಯ ಕಾರಣಕ್ಕೆ ಬೇರೆಯವರಿಂದ ಪೆನ್ನು ಪಡೆಯಲೇಬೇಕಾದ ಸಂದರ್ಭ ಎದುರಾದರೆ ಆ ಕ್ಷಣಕ್ಕೆ ತೆಗೆದುಕೊಂಡು ನಿಮ್ಮ ಕೆಲಸ ಮುಗಿದ ತಕ್ಷಣ ಹಿಂದಿರುಗಿಸುವುದನ್ನು ಮರೆಯಬೇಡಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications