ಸಿಹಿಸುದ್ದಿ; ವಿದೇಶಿಯರ ಭೇಟಿಗೆ ಅನುಮತಿ ಕೊಟ್ಟ ಅಮೆರಿಕ
ನ್ಯೂಯಾರ್ಕ್, ಅಕ್ಟೋಬರ್ 15; ಅಮೆರಿಕ ಅಂತಿಮವಾಗಿ ವಿದೇಶಿ ಪ್ರವಾಸಿಗರಿಗೆ ತನ್ನ ನೆಲ ಮತ್ತು ವಾಯುಗಡಿಗಳನ್ನು ತೆರೆಯಲಿದೆ. ಸಂಪೂರ್ಣವಾಗಿ ಕೋವಿಡ್ 19 ಲಸಿಕೆ ಪಡೆದ ಜನರು ನವೆಂಬರ್ 8ರಿಂದ ಭೇಟಿ ನೀಡಲು ಒಪ್ಪಿಗೆ ಕೊಡಲಾಗಿದೆ.
ಸುಮಾರು 18 ತಿಂಗಳ ಬಳಿಕ ವಿದೇಶಿ ಪ್ರವಾಸಿಗರು ದೇಶದಕ್ಕೆ ಭೇಟಿ ನೀಡಲು ಅಮೆರಿಕ ಅವಕಾಶ ನೀಡಿದೆ. ಕೋವಿಡ್ ಪರಿಸ್ಥಿತಿಯ ಕಾರಣ ವಿದೇಶಿಯರಿಗೆ ದೇಶಕ್ಕೆ ಭೇಟಿ ನೀಡಲು ಅಮೆರಿಕ ಅನುಮತಿ ಕೊಟ್ಟಿರಲಿಲ್ಲ. ಇದರಿಂದಾಗಿ ಹಲವು ಜನರು ಕುಟುಂಬದಿಂದ ದೂರವಾಗಿದ್ದರು.
ಅಮೆರಿಕ ತನ್ನ ಭೂಮಿ ಮತ್ತು ವಾಯು ಗಡಿಗಳನ್ನು ನವೆಂಬರ್ 8 ರಂದು ಮತ್ತೆ ತೆರಯಲಿದೆ. ಕೋವಿಡ್ ವಿರುದ್ಧದ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ವಿದೇಶಿ ಪ್ರವಾಸಿಗರು ದೇಶಕ್ಕೆ ಭೇಟಿ ನೀಡಬಹುದಾಗಿದೆ. ಇದರಿಂದಾಗಿ ಅಮೆರಿಕಕ್ಕೆ ಭೇಟಿ ನೀಡಲು ಕಾಯುತ್ತಿದ್ದ ಜಗತ್ತಿನ ವಿವಿಧ ರಾಷ್ಟ್ರಗಳ ಜನರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.

ಕೋವಿಡ್ ನಿರ್ಬಂಧಗಳನ್ನು ಸರಳೀಕರಿಸುವ ಕುರಿತು ಶ್ವೇತಭವನದ ಸಹಾಯಕ ಮಾಧ್ಯಮ ಕಾರ್ಯದರ್ಶಿ ಕೆವಿನ್ ಮುನೋಜ್ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ರಕ್ಷಣಗಾಗಿ ಕೆಲವು ನಿಯಮಗಳನ್ನು ಮುಂದುವರೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈಗ ಘೋಷಣೆ ಮಾಡಿರುವ ಹೊಸ ನೀತಿಯು ಅಂತರಾಷ್ಟ್ರೀಯ ವಿಮಾನ ಪ್ರಯಾಣ ಮತ್ತು ಭೂ ಪ್ರಯಾಣ ಎರಡಕ್ಕೂ ಅನ್ವಯವಾಗುತ್ತದೆ. ನವೆಂಬರ್ 8ರಿಂದ ಇದು ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಅಮೆರಿಕ ಹೊಸ ನೀತಿಯನ್ನು ಘೋಷಣೆ ಮಾಡುತ್ತಿದ್ದಂತೆ ಅಮೆರಿಕದಲ್ಲಿರುವ ಯುರೋಪಿಯನ್ ಯೂನಿಯನ್ ರಾಯಭಾರಿ ಸ್ಟಾವ್ರೋಸ್ ಲ್ಯಾಂಬ್ರಿನಿಡಿಸ್ ಸಂತಸ ವ್ಯಕ್ತಪಡಿಸಿದ್ದಾರೆ. "ಮುಖ್ಯವಾದ ಮತ್ತು ಅತ್ಯಂತ ಸ್ವಾಗತಾರ್ಹ ಸುದ್ದಿ ಇದಾಗಿದೆ" ಎಂದು ಹೇಳಿದ್ದಾರೆ.
ಅಮೆರಿಕ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು 2020ರ ಮಾರ್ಚ್ನಲ್ಲಿ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ಗಡಿಯನ್ನು ಮುಚ್ಚಿತ್ತು. ಯುರೋಪಿಯನ್ ಯೂನಿಯನ್, ಬ್ರಿಟನ್, ಚೀನಾ, ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಜನರು ದೇಶಕ್ಕೆ ಭೇಟಿ ನೀಡುವಂತಿರಲಿಲ್ಲ. ಮೆಕ್ಸಿಕೋ ಮತ್ತು ಕೆನಡಾದ ಭೂಪ್ರದೇಶದ ಪ್ರವಾಸಿಗರಿಗೆ ಸಹ ನಿರ್ಬಂಧ ವಿಧಿಸಲಾಗಿತ್ತು.
ಕೋವಿಡ್ ಪರಿಸ್ಥಿತಿಯಲ್ಲಿ ಹೇರಿದ ನಿರ್ಬಂಧದ ನೂರಾರು ಮಿಲಿಯನ್ ಜನರ ಮೇಲೆ ಪರಿಣಾಮ ಉಂಟಾಗಿದೆ. ಆರ್ಥಿಕ ಸಂಕಷ್ಟ ಉಂಟು ಮಾಡಿದೆ. ವೈಯಕ್ತಿಕ ಪರಿಣಾಮವನ್ನು ಬೀರಿದೆ ಎಂದು ಅಮೆರಿಕ ಹೇಳಿದೆ. ನವೆಂಬರ್ 8ರಿಂದ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಹೊಸ ನೀತಿಯಲ್ಲಿನ ಎಲ್ಲಾ ತಾಂತ್ರಿಕ ವಿವರಗಳನ್ನು ಇನ್ನೂ ಘೋಷಣೆ ಮಾಡಿಲ್ಲ.
ಹೊಸ ನೀತಿ ಹೇಗಿರಲಿದೆ? ಎಂಬ ಬಗ್ಗೆ ಅಧಿಕಾರಿಗಳು ಈಗಾಗಲೇ ಸುಳಿವು ಕೊಟ್ಟಿದ್ದರು. ದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರು ಸಂಪೂರ್ಣ ಲಸಿಕೆಯನ್ನು ಪಡೆದಿದ್ದರೂ ಸಹ ಪ್ರಯಾಣಕ್ಕೆ ಮೂರು ದಿನ ಮೊದಲು ಕೋವಿಡ್ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳು ಕಾಂಟ್ಯಾಕ್ಟ್ ಲೆಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ವಾಯು ಮಾರ್ಗದ ಮೂಲಕ ಅಮೆರಿಕಕ್ಕೆ ಭೇಟಿ ನೀಡುವ ಜನರು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಲಸಿಕೆಗಳನ್ನು ಪಡೆದಿದ್ದರೆ ದೇಶಕ್ಕೆ ಪ್ರವೇಶ ನೀಡಲಾಗುತ್ತದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ ಬಯೋಎನ್ಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ಸಹ ಇದರಲ್ಲಿ ಸೇರಿವೆ.
ಅಮೆರಕ ಭೂ ಗಡಿಯನ್ನು ಎರಡು ಹಂತದಲ್ಲಿ ತೆರೆಯಲು ನಿರ್ಧರಿಸಲಾಗಿದೆ ಎಂದು ಶ್ವೇತ ಭವನ ಹೇಳಿದೆ. ಮೊದಲನೇ ಹಂತ ನವೆಂಬರ್ನಲ್ಲಿ ಆರಂಭವಾದರೆ 2ನೇ ಹಂತವು 2022ರ ಜನವರಿಯಲ್ಲಿ ಆರಂಭವಾಗಲಿದೆ. 2ನೇ ಹಂತದಲ್ಲಿ ಯಾರು ಬೇಕಾದರೂ ಭೂ ಮಾರ್ಗದ ಮೂಲಕ ದೇಶಕ್ಕೆ ಪ್ರವೇಶ ಪಡೆಯಬಹುದು. ಆದರೆ ಸಂಪೂರ್ಣ ಲಸಿಕೆಯನ್ನು ಪಡೆದಿರಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಭೂ ಮಾರ್ಗದ ಮೂಲಕ ದೇಶಕ್ಕೆ ಭೇಟಿ ನೀಡಲು ಇರುವ ನಿರ್ಬಂಧ ಅಕ್ಟೋಬರ್ 21ಕ್ಕೆ ಅಂತ್ಯಗೊಳ್ಳಲಿದೆ. ಹೊಸ ನೀತಿ ಜಾರಿಗೆ ಬರುವ ಮೊದಲು ಅದನ್ನು ಮತ್ತೊಂದು ಅವಧಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಶ್ವೇತ ಭವನ ಹೇಳಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications