ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ವ್ಯಾಪ್ತಿಯ ಆಲಮಟ್ಟಿ ಹಾಗೂ ಗದಗ ವಿಭಾಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿ (NI Work) ನಡೆಯುತ್ತಿದೆಲ ಈ ಹಿನ್ನೆಲೆಯಲ್ಲಿ, ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿವಿದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ಆಲಮಟ್ಟಿ ಮತ್ತು ಗದಗ ನಿಲ್ದಾಣಗಳ ಮಧ್ಯ ಹಳಿ ನಿರ್ವಹಣೆ ಹಾಗೂ ತಾಂತ್ರಿಕ ಕಾಮಗಾರಿ ಪ್ರಯುಕ್ತ ಮಾರ್ಚ್ 23 ರಿಂದ ಮಾರ್ಚ್ 25 ರವರೆಗೆ ಸಂಚರಿಸಬೇಕಿದ್ದ ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ಹಾಗೂ ಬಸವ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಬಾಗಲಕೋಟೆ ಮತ್ತು ವಿಜಯಪುರ ನಡುವೆ ರದ್ದು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ (16547) ರೈಲು ಮಾರ್ಚ್ 23 ಮತ್ತು 24 ರಂದು ಯಶವಂತಪುರದಿಂದ ಹೊರಡುತ್ತದೆ. ಈ ರೈಲು ಬಾಗಲಕೋಟೆಯಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಡುವೆ ಈ ರೈಲು ಸಂಚರಿಸುವುದಿಲ್ಲ.
ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ (16548) ರೈಲು ಮರಳಿ ಅದೇ ದಿಕ್ಕಿನಲ್ಲಿ ಮಾರ್ಚ್ 24 ಮತ್ತು 25 ರಂದು ಈ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದಲೇ ಸಂಚಾರ ಆರಂಭಿಸುತ್ತದೆ.
ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307) ರೈಲು ಮೈಸೂರಿನಿಂದ ಮಾರ್ಚ್ 23 ಮತ್ತು 24 ರಂದು ಸಂಚಾರ ಆರಂಭಿಸುತ್ತದೆ. ಈ ರೈಲು ವಿಜಯಪುರದಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸುತ್ತದೆ. ವಿಜಯಪುರ ಮತ್ತು ಬಾಗಲಕೋಟೆ ನಡುವೆ ಈ ರಲಿನ ಸೇವೆ ಭಾಗಶಃ ರದ್ದಾಗಿದೆ.
ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ (17308) ಮಾರ್ಚ್ 24 ಮತ್ತು 25 ರಂದು ಈ ರೈಲು ಬಾಗಲಕೋಟೆ ಬದಲಿಗೆ ವಿಜಯಪುರ ನಿಲ್ದಾಣದಿಂದಲೇ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಲಿದೆ.
ಮಂಗಳೂರು-ವಿಜಯಪುರ ರೈಲ ಸಂಚಾರ ರದ್ದು
ಹುಬ್ಬಳ್ಳಿ ವಿಭಾಗದಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ (17378/17377) ರೈಲು ಮಾರ್ಚ್ 19 ರಿಂದ 24 ರವರೆಗೆ ಬಾಗಲಕೋಟೆಯಲ್ಲಿ ನಿಲುಗಡೆ ನೀಡಲಿದೆ. ಅಲ್ಲಿಂದ ಮುಂದೆ ಸಾಗುವುದಿಲ್ಲ. ಮರಳಿ ಅದೇ ದಿಕ್ಕಿನಲ್ಲಿ ಬಾಗಲಕೋಟೆಯಿಂದ ಸಂಚಾರ ಆರಂಭಿಸಿ ಮಂಗಳೂರು ನಿಲ್ದಾಣ ತಲುಪುತ್ತದೆ.
ರೈಲು ನಿಯಂತ್ರಣ
ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ (16548) ರೈಲನ್ನು ಮಾರ್ಗಮಧ್ಯೆ 20 ನಿಮಿಷ ಹಾಗೂ ಮಾರ್ಚ್ 23 ರಂದು ಮಾರ್ಗಮಧ್ಯೆ 40 ನಿಮಿಷಗಳ ಕಾಲ ತಡೆಹಿಡಿಯಲಾಗುವುದು. ಪ್ರಯಾಣಿಕರಿಗೆ ಕೊಂಚ ಅಡಚಣೆ ಉಂಟಾಗಲಿದ್ದು, ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.
ಕಾಮಗಾರಿ ಪರಿಶೀಲನೆ
ರೈಲ್ವೆ ಅಧಿಕಾರಿ ಬೆಲಾ ಮೀನಾ ಅವರು ಗದಗ-ಆಲಮಟ್ಟಿ ವಿಭಾಗದಲ್ಲಿ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿದರು, ಆಲಮಟ್ಟಿ-ವಂಡಾಲ ನಡುವಿನ ಡಬ್ಲಿಂಗ್ ಕಾಮಗಾರಿಗಳ ಪ್ರಗತಿ ಅವಲೋಕಿಸಿದರು. ಬಳಿಕ ಆಲಮಟ್ಟಿ ನಿಲ್ದಾಣದಲ್ಲಿ ಸವಿಸ್ತಾರ ಪರಿಶೀಲನೆ ನಡೆಸಿ, ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯಗಳು ಹಾಗೂ ಸುರಕ್ಷತಾ ಕ್ರಮಗಳನ್ನು ವೀಕ್ಷಿಸಿದರು. ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
-
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications