'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್
Bellandur Life: ಬೆಂಗಳೂರಿನ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಚಾರವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರದ ನಂತರ ಅವರ ದೈನಂದಿನ ಜೀವನ ಮತ್ತು ಪರಿಸರದೊಂದಿಗಿನ ಸಂಬಂಧ ಹೇಗೆ ಬದಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಕೆಲಸದ ಸ್ಥಳಕ್ಕೆ ಹತ್ತಿರವಿರಲಿ ಎಂಬ ಕಾರಣಕ್ಕೆ ಐದು ವರ್ಷಗಳ ಹಿಂದೆ ಬೆಳ್ಳಂದೂರಿಗೆ ವಾಸ್ತವ್ಯ ಬದಲಿಸಿದ ಕನ್ನಡಿಗ ಮನೆಮಾಲೀಕರೊಬ್ಬರು, ಇಂದು ಆ ನಿರ್ಧಾರವನ್ನು ತಮ್ಮ ಜೀವನದ ಅತಿ ದೊಡ್ಡ ತಪ್ಪು ಎಂದು ಕರೆದಿದ್ದಾರೆ. ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಮತ್ತು ಜೀವಂತಿಕೆಯಿಂದ ಕೂಡಿರುವ ಬಸವನಗುಡಿಯಂತಹ ಪ್ರದೇಶಗಳಿಗೆ ಹೋಲಿಸಿದರೆ, ಬೆಳ್ಳಂದೂರಿನಂತಹ ಟೆಕ್ ಹಬ್‌ಗಳಲ್ಲಿ ಅತಿಯಾದ ಏಕಾಂಗಿತನ ಕಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳ್ಳಂದೂರಿನ ಪ್ರದೇಶದಲ್ಲಿ ನೆರೆಹೊರೆಯವರ ನಡುವೆ ಯಾವುದೇ ಆತ್ಮೀಯತೆ ಇಲ್ಲದಿರುವುದು ಮತ್ತು ನಮ್ಮವರ ನಡುವೆ ಇದ್ದೇವೆ ಎಂಬ ಬಾಂಧವ್ಯದ ಭಾವನೆ ಸಂಪೂರ್ಣವಾಗಿ ಮಾಯವಾಗಿದೆ ಅವರು ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.

'ಬೇರೆ ರಾಜ್ಯದಲ್ಲಿ ವಾಸಿವಿದ್ದೇನೆಂಬ ಅನುಭವವಾಗುತ್ತಿದೆ'
ಅವರು ರೆಡಿಟ್‌ನಲ್ಲಿ ಸರಳ ಬೆಂಗಳೂರಿನ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. "ಕಳೆದ 5 ವರ್ಷಗಳಿಂದ ನಾನು ಬೆಳ್ಳಂದೂರು ಭಾಗದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿ ವಾಸಿಸುತ್ತಿದ್ದೇನೆ. ನನ್ನ ಜೀವನದ ಬಹುಪಾಲು ಸಮಯವನ್ನು ಬಸವನಗುಡಿಯ ಸಮೀಪ ಕಳೆದವನಿಗೆ, ಈ ಬದಲಾವಣೆ ಅಷ್ಟೊಂದು ನೆಮ್ಮದಿ ಎನಿಸುತ್ತಿಲ್ಲ. ಇಲ್ಲಿನ ಏಕೈಕ ಸಕಾರಾತ್ಮಕ ಅಂಶವೆಂದರೆ ಆಫೀಸ್‌ಗೆ ಹೋಗುವ ಸಮಯ ಉಳಿಯುತ್ತದೆ ಅಷ್ಟೆ. ಆದರೆ, ವಾರಾಂತ್ಯ ಬಂದಾಗ ಯಾವುದೋ ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ ಎಂಬ ಅನುಭವವಾಗುತ್ತದೆ," ಎಂದು ಬರೆದುಕೊಂಡಿದ್ದಾರೆ.
ಬೆಳ್ಳಂದೂರಿಗೆ ಸ್ಥಳಾಂತರದ ಬಗ್ಗೆ ಕನ್ನಡಿಗನ ಮಹತ್ವದ ಸಲಹೆ
"ಇಲ್ಲಿ ನಮ್ಮವರು ಎಂಬ ಬಾಂಧವ್ಯದ ಭಾವನೆಯೇ ಇಲ್ಲ. ನಿಜ ಹೇಳಬೇಕೆಂದರೆ, ಇಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದು ನನ್ನ ಜೀವನದ ಅತಿದೊಡ್ಡ ತಪ್ಪು ಎಂದು ನನಗನ್ನಿಸುತ್ತಿದೆ. ಇಲ್ಲಿ ಒಂದೇ ಒಂದು ಸ್ಥಳೀಯ ಹಬ್ಬದ ಆಚರಣೆಯನ್ನೂ ನಾನು ನೋಡಿಲ್ಲ, ನನಗಿದು ಉತ್ತರ ಭಾರತದ ವಾತಾವರಣದಂತೆ ಭಾಸವಾಗುತ್ತಿದೆ," ಎಂದು ಹೇಳಿಕೊಂಡಿದ್ದಾರೆ.
"ಒಬ್ಬ ಕನ್ನಡಿಗನಾಗಿ ನನ್ನ ಸಲಹೆಯೆಂದರೆ, ದಯವಿಟ್ಟು ಇಂತಹ ಪ್ರದೇಶಗಳಿಗೆ ಯಾರೂ ಬರಬೇಡಿ. ಹಳೆಯ ಬೆಂಗಳೂರಿನ ಉತ್ತಮ ಪ್ರದೇಶಗಳಲ್ಲೇ ವಾಸಿಸಿ, ಬೇಕಿದ್ದರೆ ಪ್ರಯಾಣದ ವಿಷಯದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ. ಈ ಕಡೆಗೆ ವಾಸ್ತವ್ಯ ಬದಲಿಸುವ ಸಾಹಸ ಮಾಡಬೇಡಿ, ಇಲ್ಲಿನ ಸಾಮಾಜಿಕ ಜೀವನ ತೀರಾ ಬೇಸರ ತರಿಸುತ್ತದೆ," ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ಹೀಗಿವೆ
ರೆಡ್ಡಿಟ್ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, "ಬಸವನಗುಡಿಯಿಂದ ಬೆಳ್ಳಂದೂರಿಗೆ ವಾಸ್ತವ್ಯ ಬದಲಿಸುವುದು ಆರೋಗ್ಯದ ದೃಷ್ಟಿಯಿಂದ ದೊಡ್ಡ ಸಮಸ್ಯೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಏಕೆಂದರೆ ಪ್ರಯಾಣದ ಸಮಯವೂ ಮುಖ್ಯವೇ. ಬಹುಶಃ ನೀವು ನಿಮ್ಮ ವಾರಾಂತ್ಯಗಳನ್ನು ಮತ್ತೆ ಗಾಂಧಿ ಬಜಾರ್, ಬ್ಯೂಗಲ್ ರಾಕ್ ಮುಂತಾದ ಭಾಗಗಳಲ್ಲಿ ಕಳೆಯಬಹುದು, ಆಗಲಾದರೂ ಬದುಕುತ್ತಿದ್ದೇವೆ ಎಂಬ ಭಾವನೆ ಮೂಡುತ್ತದೆ," ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, "ನನ್ನ ಪರಿಸ್ಥಿತಿಯೂ ಅಷ್ಟೇ, ನಾನು ಮಲ್ಲೇಶ್ವರಂ ಮತ್ತು ಕೆಂಗೇರಿಯಲ್ಲಿ ಬೆಳೆದವನು, ಈಗ ಯಾವುದೇ ದೊಡ್ಡ ಕೆರೆಯ ಸಮೀಪವಿದ್ದೇನೆ. ಕನ್ನಡದಲ್ಲಿ ಮಾತನಾಡುವುದನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕೆಲಸಗಳನ್ನು ಮಾಡಿಸಿಕೊಳ್ಳಲು ಹಿಂದಿಯಲ್ಲಿ ಸೂಚನೆಗಳನ್ನು ನೀಡಬೇಕಾದ ಪರಿಸ್ಥಿತಿ ನಿಜಕ್ಕೂ ಬೇಸರ ತರಿಸುತ್ತದೆ. ಆದರೆ, ವಾರಾಂತ್ಯದಲ್ಲಿ ನಾನು ಇದನ್ನು ಸರಿದೂಗಿಸಿಕೊಳ್ಳುತ್ತೇನೆ," ಎಂದು ಬರೆದುಕೊಂಡಿದ್ದಾರೆ. ಇದು ಹೇಗೆ ಅಂತಲೂ ತಿಳಿಸಿದ್ದಾರೆ.
"'ಚೆಲುವೆ ಎಲ್ಲಿದ್ದೀಯೆ' ಹಾಡಿನಿಂದ ಶುರುಮಾಡಿ, ಎಲ್ಲಾ ಕಾಲದ ಕನ್ನಡ ಹಾಡುಗಳನ್ನು ಹಾಕಿಕೊಂಡು ಅಮ್ಮನ ಜೊತೆ ಮನಸಾರೆ ಕುಣಿಯುತ್ತೇನೆ. ಇದು ಮನಸಿಗೆ ಸ್ವಲ್ಪ ನೆಮ್ಮದಿ ನೀಡುತ್ತದೆ. ಇಲ್ಲವಾದರೆ, ಗೆಳೆಯರನ್ನು ಭೇಟಿ ಮಾಡಲು ವಾರಾಂತ್ಯದಲ್ಲಿ ಜಯನಗರ ಅಥವಾ ಮಲ್ಲೇಶ್ವರಂಗೆ ಹೋಗುತ್ತೇನೆ. ನಾನು ಬೆಳೆದ ನೆನಪುಗಳನ್ನು ಅಲ್ಲಿ ಮೆಲುಕು ಹಾಕುತ್ತೇನೆ," ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬರು, "ನನಗೆ ಖಂಡಿತವಾಗಿಯೂ ಇದು ಅರ್ಥವಾಗುತ್ತದೆ. ನಾನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಾಗಿನಿಂದ ಬಸವನಗುಡಿ ಮತ್ತು ಅದರ ಸುತ್ತಮುತ್ತಲೇ ವಾಸವಾಗಿದ್ದೆ. ಕಳೆದ 4 ವರ್ಷಗಳಿಂದ ಹೊರಮಾವುವಿನಲ್ಲಿದ್ದೇನೆ. ಆರಂಭದಲ್ಲಿ ಇದು ನನಗೆ ದೊಡ್ಡ ಆಘಾತದಂತೆ ಇತ್ತು. ಈಗ ಸ್ವಲ್ಪ ಮಟ್ಟಿಗೆ ಅದಕ್ಕೆ ಹೊಂದಿಕೊಂಡಿದ್ದೇನೆ. ಆದರೆ ಇಲ್ಲಿ ಸಾಮಾಜಿಕ ಜೀವನವೇ ಇಲ್ಲದಂತಾಗಿದೆ. ಎಷ್ಟರ ಮಟ್ಟಿಗೆ ಎಂದರೆ, ನಾನು ಈಗ ಸಂಪೂರ್ಣವಾಗಿ ಅಂತರ್ಮುಖಿಯಾಗಿದ್ದೇನೆ," ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, "ನಾನು ಬಸವನಗುಡಿಯಲ್ಲೇ ಹುಟ್ಟಿ ಬೆಳೆದವನು. ಪ್ರತೀ ದಿನ ಕೆಲಸಕ್ಕಾಗಿ ಬೆಳಿಗ್ಗೆ ಬೆಳ್ಳಂದೂರಿಗೆ ಹೋಗುವುದೇ ಒಂದು ದೊಡ್ಡ ಕಿರಿಕಿರಿ. ಆ ಭಾಗಕ್ಕೆ ಹೋಗುವುದೇ ಅಷ್ಟು ಕಿರಿಕಿರಿ ಉಂಟುಮಾಡುವಾಗ, ಇನ್ನು ಅಲ್ಲಿ ವಾಸ ಮಾಡುವುದನ್ನು ಊಹಿಸಿಕೊಳ್ಳಿ. ನಾನು ನಿಮ್ಮ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ," ಎಂದು ಬರೆದುಕೊಂಡಿದ್ದಾರೆ. ಹೀಗೆ ಬೆಳ್ಳಂದೂರಿನ ಕಡೆ ವಾಸ್ತವ್ಯಕ್ಕೆಂದು ಪ್ರಯಾಣ ಮಾಡಿದವರು ಅಲ್ಲಿ ತಾವು ಅನುಭವಿಸುತ್ತಿರುವ ಏಕಾಂತದ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications