ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ, ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಮನವಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 02: ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ 'ಒಮಿಕ್ರೋನ್' ಅಮೆರಿಕಾದಲ್ಲೂ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ ಎಂದು ಅಮೆರಿಕಾ ದೃಢಪಡಿಸಿದೆ.

ಓಮಿಕ್ರಾನ್ ಅಪಾಯದಲ್ಲಿರುವ ದೇಶಗಳಿಂದ ಆಗಮಿಸಿದ ಆರು ಮಂದಿಗೆ ಕೊರೊನಾವೈರಸ್ ಓಮಿಕ್ರಾನ್ ಅಪಾಯದಲ್ಲಿರುವ ದೇಶಗಳಿಂದ ಆಗಮಿಸಿದ ಆರು ಮಂದಿಗೆ ಕೊರೊನಾವೈರಸ್

ಅಮೆರಿಕಾದಲ್ಲಿ ಒಮಿಕ್ರೋನ್ ಕಂಡುಬಂದ ಬೆನ್ನಲ್ಲೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ದೇಶವಾಸಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ.
ಒಮಿಕ್ರೋನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಈ ಸೋಂಕು ಹರಡುವುದನ್ನು ತಡೆಯಲು ಎಲ್ಲ ದೇಶಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ.

US Reports First Confirmed Case Of Omicron Variant

ಕ್ಯಾಲಿಫೋರ್ನಿಯಾದಲ್ಲಿರುವ ವ್ಯಕ್ತಿಯಲ್ಲಿ ಹೊಸ ರೂಪಾಂತರಿ ಕಂಡುಬಂದಿದೆ. ಸೋಂಕಿತ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಯುಎಸ್ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಪೌಸಿ ಮಾಹಿತಿ ನೀಡಿದ್ದಾರೆ. ಈ ಸೋಂಕಿತ ನ.22 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನ.19 ರಂದು ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಸೋಂಕಿತ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಇವರ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ ಎಂದು ಇವರು ತಿಳಿಸಿದ್ದಾರೆ.

ಕೊರೊನಾ ಹೊಸ ರೂಪಾಂತರವಾದ ಒಮಿಕ್ರೋನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ.

ಒಮಿಕ್ರೋನ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ದೇಶಗಳು ಪ್ರಯಾಣ ನಿರ್ಬಂಧವನ್ನು ಜಾರಿಗೆ ತಂದಿವೆ. ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡೆರ್ನಾ, ಒಮಿಕ್ರೋನ್ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.

ಒಮಿಕ್ರೋನ್ ರೂಪಾಂತರದ ವಿಶೇಷ ಲಸಿಕೆ 2 ರಿಂದ 3 ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಮಾಡೆರ್ನಾ ವ್ಯಾಕ್ಸಿನ್ ಕಂಪನಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾದ ಹೊಸ ರೂಪಾಂತರದಿಂದಾಗಿ ಜಗತ್ತು ಮತ್ತೆ ಸಮಸ್ಯೆಗೆ ಸಿಲುಕಿದೆ. ಈ ಹೊಸ ರೂಪಾಂತರವನ್ನು ನಿಯಂತ್ರಿಸುವಲ್ಲಿ ಅಸ್ತಿತ್ವದಲ್ಲಿರುವ ಲಸಿಕೆ ಪರಿಣಾಮಕಾರಿವಾಗಲಿದೆ ಅನ್ನೋದು ಇನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ.

ಮಾಡೆರ್ನಾ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಪಾಲ್ ಬರ್ಟನ್ ನೀಡಿರುವ ಹೇಳಿಕೆ ಪ್ರಕಾರ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರೋನ್‌ಗೆ ಪ್ರತ್ಯೇಕ ಲಸಿಕೆ ಅಗತ್ಯಬಿದ್ದರೆ, ಅದು ಕೆಲವೇ ವಾರಗಳಲ್ಲಿ ಸಿದ್ಧವಾಗಲಿದ್ದು, ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ರೂಪಾಂತರ ಮತ್ತು ಲಸಿಕೆ ದಕ್ಷತೆಯ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಲಸಿಕೆ ಹಾಕಿದ್ದರೂ, ಈ ರೂಪಾಂತರಿ ಸೋಂಕಿತರಿಂದ ಮಾದರಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಅಂತಾ ತಿಳಿಸಿದರು.

ಒಮಿಕ್ರೋನ್​ ರೂಪಾಂತರಿಯು ಕೊರೊನಾದ ಈ ಹಿಂದಿನ ಪ್ರಭೇದಗಳಿಗಿಂತಲೂ ಹೆಚ್ಚು ಅಪಾಯಕಾರಿ. ಮತ್ತಷ್ಟು ಪರೀಕ್ಷಾ ಫಲಿತಾಂಶಗಳು ಇಲ್ಲದೆ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕಳೆದ ಮಂಗಳವಾರದಿಂದ ಅಮೆರಿಕದ ರೋಗ ನಿಯಂತ್ರಣ ವಿಭಾಗವು ಇತರ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲು ಆದೇಶಿಸಿತು. ಪ್ರಯಾಣ ಆರಂಭಿಸುವ 24 ತಾಸು ಮೊದಲು ಕೊರೊನಾ ತಪಾಸಣೆ ಮಾಡಿಸಿಕೊಂಡಿರಬೇಕು, ಅದರ ನೆಗೆಟಿವ್ ವರದಿಯನ್ನು ತೋರಿಸಬೇಕು ಎಂದು ಸೂಚಿಸಿದ್ದಾರೆ.

60 ವರ್ಷ ಮೇಲ್ಪಟ್ಟ, ಲಸಿಕೆ ಹಾಕಿಸಿಕೊಳ್ಳದವರಿಗೆ ಒಮಿಕ್ರೋನ್ ಆತಂಕ ಹೆಚ್ಚು ಎಂದು ಹೇಳಲಾಗಿದೆ. ಇಂಥವರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ಯೂರೋಪ್​ನ ಬಹುತೇಕ ದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಜನವರಿ 16ರ ಒಳಗೆ ಲಸಿಕೆಯ ಒಂದೂ ಡೋಸ್ ಪಡೆದುಕೊಳ್ಳದವರಿಗೆ ದಂಡ ವಿಧಿಸಲಾಗುವುದು ಎಂದು ಗ್ರೀಸ್ ದೇಶ ಘೋಷಿಸಿದೆ.

Recommended Video

Omicron ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ? | Oneindia Kannada

English summary
The United States has reported its first confirmed case of the Omicron variant of the coronavirus, the US Centers for Disease Control and Prevention (CDC) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X