ಸತ್ತವನ ಹೇಳಿಕೆ ಪಡೆಯಲು ಹೊರಟ ಪತ್ರಕರ್ತೆ, ವಿಡಿಯೋ ವೈರಲ್
ವಾಷಿಂಗ್ಟನ್, ಸೆಪ್ಟೆಂಬರ್ 20: ಅವರಸರದ ಪತ್ರಿಕೋದ್ಯಮದ ಕುರಿತು ಸಾಕಷ್ಟು ಚರ್ಚೆ, ವಿರೊಧ ವ್ಯಕ್ತವಾಗುತ್ತಿರುವ ಹೊತ್ತಲ್ಲೇ, ಅಮೆರಿಕದ ವರದಿಗಾರ್ತಿಯೊಬ್ಬಳು ಮಾಡಿದ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
"ಸತ್ತ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಹೇಳಿಕೆ ನೀಡಲು ಅವರು ಸಿಕ್ಕಿಲ್ಲ" ಎಂದು ವರದಿಗಾರ್ತಿಯೊಬ್ಬರು ವರದಿ ನೀಡುವ ಸಂದರ್ಭದಲ್ಲಿ ಹೇಳಿದ ವಿಡಿಯೋ ವೈರಲ್ ಆಗಿದ್ದು, ಕೆಲವರು ಈ ವಿಡಿಯೋವನ್ನು ಹಾಸ್ಯ ಎಂಬಂತೆ ನೋಡಿದ್ದರೆ, ಮತ್ತೆ ಕೆಲವರು ಪತ್ರಕರ್ತರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನಿಸಿದ್ದಾರೆ.
When I say I nearly passed out from laughing... pic.twitter.com/TJgpLocqrL
— Yashar Ali 🐘 (@yashar) September 16, 2019
ಅಮೆರಿಕದ ಕೆಟಿಎಲ್ ಎ ನ್ಯೂಸ್ ಸ್ಟೇಶನ್ನಿನ ಸಾರಾ ವೆಲ್ಕ್ಎಂಬ ಪತ್ರಕರ್ತೆ, "ಒಪೊಲೀಸರು ಚೇಸ್ ಮಾಡುತ್ತಿದ್ದ ಸಂದರ್ಭದಲ್ಲಿ ಮೃತನಾದ ವ್ಯಕ್ತಿಯನ್ನು ಸಂಪರ್ಕಿಸಲು ನಾನು ಪ್ರಯತ್ನಿಸಿದೆ. ಆದರೆ ಅವರು ಲಭ್ಯವಾಗಲಿಲ್ಲ" ಎಂದು ಹೇಳಿದ್ದರು.
ಆಕೆಯ ಈ ವಿಡಿಯೋಕ್ಕೆ ಸಾಕಷ್ಟು ಹಾಸ್ಯಾತ್ಮಕ, ವಿಡಂಬನೆಯ ಪ್ರತಿಕ್ರಿಯೆಗಳು ಬಂದಿವೆ.

"ಅಕಸ್ಮಾತ್ ನಿಮಗೆ ಆತ ಹೇಳಿಕೆ ನೀಡಿದ್ದರೆ ಅದು ಭಾರೀ ಸುದ್ದಿಯಾಗಿರುತ್ತಿತ್ತು" ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರೆ, ಇನ್ನೊಬ್ಬರು, "ಆಕೆಯ ಮಾತು ಕೇಳಲಿ ನೀವೇನಾದರೂ ನಕ್ಕು ನಕ್ಕು ಸತ್ತರೆ, ನಿಮ್ಮನ್ನು ಸಂದರ್ಶನ ಮಾಡಲು ಆಕೆಯೇ ಬರುತ್ತಾಳೆ" ಎಂದು ಕಾಲೆಳೆದಿದ್ದಾರೆ.
"ಈ ಪತ್ರಕರ್ತರು ಸ್ವಲ್ಪವೂ ತಲೆಗೆ ವಿವೇಚನಾ ಶಕ್ತಿಯನ್ನೇ ನೀಡದೆ, ಕಣ್ಮುಂದೆ ಏನನ್ನು ಬರೆದಿರುತ್ತಾರೋ, ಅದನ್ನಷ್ಟೇ ಓದುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಮತ್ತಷ್ಟು ಜನ ಲೇವಡಿ ಮಾಡಿದ್ದಾರೆ.












Click it and Unblock the Notifications