ಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರ

ವಾಷಿಂಗ್ಟನ್, ಆಗಸ್ಟ್ 13: ಎಚ್‌-1ಬಿ ವೀಸಾ ಹೊಂದಿರುವ ವಿದೇಶಿಗರು ವೀಸಾ ನಿಷೇಧಕ್ಕೂ ಮುನ್ನ ಹೊಂದಿದ್ದ ಅದೇ ಉದ್ಯೋಗಕ್ಕೆ ಮರಳುವವರಿಗೆ ಕೆಲವು ನಿಯಮಾವಳಿಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸಡಿಲಗೊಳಿಸಿದೆ.

ಪ್ರಾಥಮಿಕ ವೀಸಾ ಬಳಕೆದಾರರ ಜತೆಗೆ ಅಮೆರಿಕಕ್ಕೆ ಪ್ರಯಾಣಿಸಲು ಅವರ ಅವಲಂಬಿತರಿಗೂ (ಹೆಂಡತಿ, ಮಕ್ಕಳು) ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

'ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಅದೇ ಕಂಪೆನಿಯ ಅದೇ ಸ್ಥಾನಕ್ಕೆ ಹಾಗೂ ವೀಸಾ ವರ್ಗೀಕರಣದಂತೆ ಹಳೆಯ ಉದ್ಯೋಗಕ್ಕೆ ವಾಪಸಾಗಲು ಬಯಸಿದ್ದರೆ ಅರ್ಜಿದಾರರ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ' ಎಂದು ಇಲಾಖೆ ತಿಳಿಸಿದೆ.

 US Relaxes Some Rules For H-1B Visa Holders

ಎಚ್‌-1ಬಿ ವೀಸಾ ಹೊಂದಿರುವ ತಾಂತ್ರಿಕ ಪರಿಣತರು, ಉನ್ನತ ಮಟ್ಟದ ಮ್ಯಾನೇಜರ್‌ಗಳು ಮತ್ತು ಇತರೆ ಕೆಲಸಗಾರರು ಸಹ, ಅವರ ಪ್ರಯಾಣ ಅವಶ್ಯಕವಾಗಿದ್ದರೆ ಕೂಡಲೇ ಪ್ರಯಾಣಿಸಬಹುದು ಎಂದು ಹೇಳಿದೆ. ಅಮೆರಿಕದ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗುತ್ತಿದೆ.

ಸಾರ್ವಜನಿಕ ಆರೋಗ್ಯ ಅಥವಾ ಆರೋಗ್ಯ ಕಾರ್ಯಕರ್ತರಾಗಿ, ಕೊರೊನಾ ವೈರಸ್ ಸಂಬಂಧಿತ ಸಂಶೋಧನೆಗಳಲ್ಲಿ ಇರುವವರು, ಸಾರ್ವಜನಿಕ ಆರೋಗ್ಯ ಪ್ರಯೋಜನಕ್ಕೆ ಪೂರಕವಾದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವೀಸಾ ಬಳಕೆದಾರರ ಪ್ರಯಾಣಕ್ಕೂ ಟ್ರಂಪ್ ಆಡಳಿತ ಅನುಮತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+