ಕೊರೊನಾ ಸೋಂಕಿಗೆ ಸಂಸದ ಬಲಿ, ಒಂದೇ ದಿನ 3,880 ಜನ ಸಾವು

ನಾನು ಸೂಪರ್ ಪವರ್, ನಾನು ಸೂಪರ್ ಪವರ್ ಅಂತಾ ವಿಶ್ವದ ಎದುರು ಎದೆಯುಬ್ಬಿಸಿ ನಿಲ್ಲುತ್ತಿದ್ದ ಅಮೆರಿಕದ ಪರಿಸ್ಥಿತಿ ಕೊರೊನಾ ಕಾಲಘಟ್ಟದಲ್ಲಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಅಲ್ಲಿ ಯಾರದ್ದೇ ಜೀವಕ್ಕೆ ಗ್ಯಾರಂಟಿ ಇಲ್ಲ. ಅದು ಸಂಸದನೇ ಆಗಿರಲಿ, ಅತ್ಯಂತ ಶ್ರೀಮಂತ ಉದ್ಯಮಿಯೇ ಆಗಿರಲ್ಲಿ. ಅಲ್ಲಿನ ಪರಿಸ್ಥಿತಿಯ ಭಯಾನಕತೆ ವಿವರಿಸಲು ಸಾಧ್ಯವಿಲ್ಲ.

ಏಕೆಂದರೆ ಈಗಾಗಲೇ ಸುಮಾರು 3 ಲಕ್ಷ 50 ಸಾವಿರ ಅಮೆರಿಕನ್ನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಧ್ಯೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಅಮೆರಿಕನ್ ಕಾಂಗ್ರೆಸ್‌ಗೆ ಲೂಸಿಯಾನಾ ಕ್ಷೇತ್ರದಿಂದ ಆರಿಸಿ ಬಂದಿದ್ದ ಲ್ಯೂಕ್ ಲೆಟ್‌ಲೋವ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 41ರ ಹರೆಯದ ಲ್ಯೂಕ್ ಲೆಟ್‌ಲೋವ್ ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದರು.

ಸಮಾಜ ಸೇವೆಯ ಉದ್ದೇಶದಿಂದ ಚುನಾವಣೆಗೆ ನಿಂತು ಗೆಲುವು ಕಂಡಿದ್ದ ಲ್ಯೂಕ್ ಲೆಟ್‌ಲೋವ್ ಬದುಕಿನಲ್ಲಿ ವಿಧಿ ಬೇರೆಯದ್ದೇ ಕಥೆ ಬರೆದಿತ್ತು. ಕೊರೊನಾ ಸೋಂಕಿನಿಂದ ಅವರು ಚೇತರಿಸಿಕೊಳ್ಳದೆ ಬದುಕಿನ ಪಯಣ ಮುಗಿಸಿದ್ದಾರೆ. 'ಕಾಂಗ್ರೆಸ್ ಮ್ಯಾನ್' ಲ್ಯೂಕ್ ಲೆಟ್‌ಲೋವ್ ಸಾವು ಅಮೆರಿಕನ್ನರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಒಂದೇ ದಿನ 3,880 ಜನ ಬಲಿ

ಒಂದೇ ದಿನ 3,880 ಜನ ಬಲಿ

ಅಮೆರಿಕ ಪರಿಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಮತ್ತೊಂದು ದಾಖಲೆಯನ್ನ ಬರೆದಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 3,880 ಜನ ಮೃತಪಟ್ಟಿದ್ದಾರೆ. ಅಲ್ಲದೆ ಇದರ ಜೊತೆಗೆ 2 ಲಕ್ಷ 34 ಸಾವಿರದಷ್ಟು ಹೊಸ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿರುವುದು ಆತಂಕವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ.

ಕೊರೊನಾ ಬಂದಪ್ಪಳಿಸಿದ ಬಳಿಕ ವಿಶ್ವದ ದೊಡ್ಡಣ್ಣನ ಬುಡ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ. ಈ ಹೊತ್ತಲ್ಲಿಯೇ ಅಮೆರಿಕ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ನಿನ್ನೆ ಒಂದೇ ದಿನ ಮತ್ತೆ ದಾಖಲೆ ಪ್ರಮಾಣದಲ್ಲಿ ‘ಕೊರೊನಾ' ಕೇಸ್‌ಗಳು ಪತ್ತೆಯಾಗಿವೆ. ಅಲ್ಲದೆ ಕೊರೊನಾ ಸೋಂಕಿನಿಂದ ಒಂದೇ ದಿನ 3,880 ಜನರು ಮೃತಪಟ್ಟಿದ್ದಾರೆ.

2 ಕೋಟಿ ಸೋಂಕಿತರು ಪತ್ತೆ..!

2 ಕೋಟಿ ಸೋಂಕಿತರು ಪತ್ತೆ..!

ಅಮೆರಿಕದಲ್ಲಿ ಈವರೆಗೂ ಸುಮಾರು 2 ಕೋಟಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 3 ಲಕ್ಷ 50 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಅಮೆರಿಕನ್ನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ ‘ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ.

ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಇಷ್ಟೆಲ್ಲಾ ನಡೆದರೂ ಅಮೆರಿಕ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ, ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇಲ್ಲ. ಬದಲಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದು ಅಮೆರಿಕನ್ನರ ಆತಂಕಕ್ಕೆ ಕಾರಣವಾಗಿದೆ.

ಮುಂದಿನ ಕೆಲ ವಾರಗಳು ಹಾರಿಬಲ್..!

ಮುಂದಿನ ಕೆಲ ವಾರಗಳು ಹಾರಿಬಲ್..!

ಅಮೆರಿಕದ ನಾಯಕರಿಗೆ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ ಕೆಲ ವಾರಗಳು ಭಾರಿ ಗಂಡಾಂತರ ಎದುರಾಗಲಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂ ಮಧ್ಯೆ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ಜನವರಿ ಅಥವಾ ಫೆಬ್ರವರಿ ತಿಂಗಳವರೆಗೂ ಪರಿಸ್ಥಿತಿ ಇದೇ ರೀತಿ ಇರುವ ಸಾಧ್ಯತೆ ಇದೆ. ಸಾಮೂಹಿಕವಾಗಿ ವ್ಯಾಕ್ಸಿನ್ ನೀಡಿದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಬಂದರೆ ಬಚಾವ್, ಇಲ್ಲವಾದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+