ಫೈಜರ್ ಲಸಿಕೆ ಪಡೆದುಕೊಂಡ ನರ್ಸ್‌ಗೆ ಕೊರೊನಾ ಪಾಸಿಟಿವ್

ವಾಷಿಂಗ್ಟನ್, ಡಿಸೆಂಬರ್ 30: ಕಳೆದ ವಾರವಷ್ಟೇ ಫೈಜರ್ ಲಸಿಕೆಯನ್ನು ಪಡೆದುಕೊಂಡಿದ್ದ ಕ್ಯಾಲಿಫೋರ್ನಿಯಾದ 45 ವರ್ಷದ ಪುರುಷ ನರ್ಸ್‌ನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಎಬಿಸಿ ನ್ಯೂಸ್ ಮಂಗಳವಾರ ವರದಿ ಮಾಡಿದೆ.

ಎರಡು ಬೇರೆ ಬೇರೆ ಆಸ್ಪತ್ರೆಗಳಲ್ಲಿ ನರ್ಸ್ ಕೆಲಸ ಮಾಡುತ್ತಿರುವ ಮ್ಯಾಥ್ಯೂ ಡಬ್ಲ್ಯೂ. ಎಂಬ ವ್ಯಕ್ತಿ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿ ನೀಡಿದ ಆರಂಭದಲ್ಲಿ ಡಿ. 18ರಂದು ಲಸಿಕೆಯನ್ನು ಪಡೆದುಕೊಂಡಿದ್ದರು. ಲಸಿಕೆ ಪಡೆದುಕೊಂಡ ಒಂದು ದಿನದವರೆಗೆ ತೋಳುಗಳಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಬಳಿಕ ಯಾವುದೇ ಅಡ್ಡಪರಿಣಾಮಗಳು ಉಂಟಾಗಿರಲಿಲ್ಲ.

ಆರು ದಿನಗಳ ನಂತರ, ಕ್ರಿಸ್ ಮಸ್ ಹಿಂದಿನ ದಿನ ಮ್ಯಾಥ್ಯೂ ಅವರು ಕೋವಿಡ್ 19 ಘಟಕದಲ್ಲಿ ತಮ್ಮ ಪಾಳಿ ಕೆಲಸ ಮುಗಿಸಿದ ಬಳಿಕ ಅಸ್ವಸ್ಥರಾದರು. ಶೀತ ಪ್ರಾರಂಭವಾಯಿತು. ಜತೆಗೆ ಸ್ನಾಯು ನೋವು ಮತ್ತು ಬಳಲಿಕೆ ಉಂಟಾಯಿತು.

US Nurse Tests Positive For Coronavirus After Recieving Pfizer Vaccine A Week Back

ಅವರು ಆಸ್ಪತ್ರೆಯ ಪರೀಕ್ಷಾ ವಿಭಾಗಕ್ಕೆ ತೆರಳಿ ತಪಾಸಣೆ ಮಾಡಿಕೊಂಡರು, ಕ್ರಿಸ್ ಮಸ್ ಮರುದಿನ ಬಂದ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ದಾಖಲಾಗಿದೆ. ಈ ಘಟನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಸ್ಯಾನ್ ಡಿಯಾಗೊದ ಕುಟುಂಬ ಆರೋಗ್ಯ ಕೇಂದ್ರದ ಸಾಂಕ್ರಾಮಿಕ ರೋಗ ತಜ್ಞ ಕ್ರಿಸ್ಟಿಯನ್ ರೇಮರ್ಸ್ ಹೇಳಿದ್ದಾರೆ.

ಲಸಿಕೆಯಿಂದ ರಕ್ಷಣೆಯ ಸಾಮರ್ಥ್ಯ ಬೆಳೆಯಲು 10-14 ದಿನಗಳು ಬೇಕಾಗುತ್ತದೆ ಎಂದು ಫೈಜರ್ ಲಸಿಕೆಯ ಪ್ರಾಯೋಗಿಕ ಹಂತದ ಅವಧಿಯಲ್ಲಿ ಗೊತ್ತಾಗಿತ್ತು. ಲಸಿಕೆಯ ಮೊದಲ ಡೋಸ್ ಶೇ 50ರಷ್ಟು ಮತ್ತು ಪ್ರಭಾವ ಬೀರಿದರೆ, ಎರಡನೆಯ ಲಸಿಕೆಯು ಶೇ 95ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+