ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ವಿಳಂಬ

ವಾಷಿಂಗ್ಟನ್, ನವೆಂಬರ್ 4: ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶದ ಸ್ಪಷ್ಟ ಚಿತ್ರಣ ತಿಳಿಯುವುದು ಇನ್ನೂ ತಡವಾಗಲಿದೆ. ಅದು ಈ ವಾರದ ಅಂತ್ಯದವರೆಗೂ ನಡೆಯಲಿದೆ. ಅನೇಕ ಪ್ರಮುಖ ಚುನಾವಣಾ ಸಮರ ರಾಜ್ಯಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಮೇಲ್ ಮೂಲಕ ಬಂದ ಮತಪತ್ರಗಳನ್ನು ಎಣಿಸಲು ಸಾಕಷ್ಟು ಸಮಯದ ಅಗತ್ಯವಿರುವುದರಿಂದ ಅಂತಿಮ ಫಲಿತಾಂಶಕ್ಕೆ ಮತ್ತಷ್ಟು ಸಮಯ ಬೇಕಾಗಲಿದೆ.

ಅತ್ತ ಡೊನಾಲ್ಡ್ ಟ್ರಂಪ್, ಜಯ ತಮ್ಮದೇ. ಹಾಗೆಂದು ಘೋಷಣೆಯಾಗದೆ ಇದ್ದರೆ ಸುಪ್ರೀಂಕೋರ್ಟ್‌ಗೆ ಹೋಗುವುದಾಗಿ ಬೆದರಿಸಿದ್ದಾರೆ. ಇದರಿಂದ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಸಂಘರ್ಷಕ್ಕೆ ಸಾಕ್ಷಿಯಾಗುವ ಸೂಚನೆ ದೊರಕಿದೆ. ವಿಸ್ಕನ್ಸಿನ್, ಪೆನ್ಸಿಲ್ವೇನಿಯಾ ಮತ್ತು ಮಿಚಿಗನ್‌ನ ಅಧಿಕಾರಿಗಳು ಮಂಗಳವಾರ ರಾತ್ರಿ ಚುನಾವಣಾ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಹೇಳಿಕೆ ನೀಡಿರುವುದರಿಂದ ಈ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ವಿಸ್ಕನ್ಸಿನ್ ಮತ್ತು ಮಿಚಿಗನ್‌ನಲ್ಲಿ ಬುಧವಾರ ಬೆಳಿಗ್ಗೆ (ಅಮೆರಿಕದ ಕಾಲಮಾನದಲ್ಲಿ) ಅಂತಿಮ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಆದರೆ ಪೆನ್ಸಿಲ್ವೇನಿಯಾದ ಫಲಿತಾಂಶಕ್ಕೆ ಶುಕ್ರವಾರವದರೆಗೂ ಕಾಯಬೇಕಾಗಬಹುದು.

US Elections: Results May Not Be Known Until Friday

ವಿವಾದಾತ್ಮಕ ಮತಪತ್ರಗಳ ವಿರುದ್ಧ ಕಾನೂನು ಹೋರಾಟಗಳು ಶುರುವಾಗುವ ನಿರೀಕ್ಷೆಯಿದೆ. ಇದರಿಂದ ಹಿಂದೆಂದೂ ನಡೆಯದಷ್ಟು ದಿನಗಳವರೆಗೆ ಫಲಿತಾಂಶ ಪ್ರಕಟ ವಿಳಂಬವಾಗುವ ಸಾಧ್ಯತೆ ಇದೆ. ಅಗತ್ಯಬಿದ್ದಲ್ಲೆಲ್ಲ ಕಡೆ ಕಾನೂನು ಹೋರಾಟ ನಡೆಸುವುದಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ.

ಚುನಾವಣೆಯ ದಿನದವರೆಗೂ ಮೇಲ್ ಮೂಲಕ ಬಂದ ಮತಗಳನ್ನು ಎಣಿಕೆ ಮಾಡದಂತೆ ಪೆನ್ಸಿಲ್ವೇನಿಯಾದಲ್ಲಿನ ಕಾನೂನು ಅಧಿಕಾರಿಗಳನ್ನು ನಿರ್ಬಂಧಿಸಿತ್ತು. ನವೆಂಬರ್ 3ರ ಚುನಾವಣಾ ದಿನದ ನಂತರ ಮೂರು ದಿನಗಳಲ್ಲಿ ಮತಪತ್ರಗಳ ಎಣಿಕೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

ಎಲ್ಲ ಮೂರು ರಾಜ್ಯಗಳಲ್ಲಿಯೂ ರಿಪಬ್ಲಿಕನ್ ನೇತೃತ್ವದ ಸಂಸದರು ಚುನಾವಣಾ ದಿನಕ್ಕೂ ಮುನ್ನ ನಡೆಯುವ ಮತಗಳ ಎಣಿಕೆಗೆ ಅವಕಾಶ ನೀಡುವ ಕಾನೂನಿನ ಬದಲಾವಣೆಗೆ ಯಶಸ್ವಿಯಾಗಿ ತಡೆ ತಂದಿದ್ದರು. ಇದರಿಂದ ಫಲಿತಾಂಶ ವಿಳಂಬವಾಗುತ್ತಿದೆ. ಈ ಮೂರು ರಾಜ್ಯಗಳಲ್ಲಿ ಕಳೆದ 20 ವರ್ಷಗಳಲ್ಲಿಯೇ ಮೊದಲ ಬಾರಿ ರಿಪಬ್ಲಿಕ್ ಪಕ್ಷಗಳು ಗೆಲುವು ಕಾಣುವಂತೆ ಟ್ರಂಪ್ ಮಾಡಿದ್ದರು. ಹೀಗಾಗಿ ಇವುಗಳಲ್ಲಿನ ಫಲಿತಾಂಶ ಬಹಳ ಮುಖ್ಯವಾಗಿದೆ.

ಮಿಚಿಗನ್‌ನಿಂದ 16, ಪೆನ್ಸಿಲ್ವೇನಿಯಾದಿಂದ 20 ಮತ್ತು ವಿಸ್ಕನ್ಸಿನ್‌ನಿಂದ 10 ಸೇರಿದಂತೆ ಮೂರು ರಾಜ್ಯಗಳಿಂದ ಒಟ್ಟು 46 ಎಲೆಕ್ಟೊರೆಲ್ ಮತಗಳಿವೆ. ಅಧ್ಯಕ್ಷ ಸ್ಥಾನಕ್ಕೆ ಬೇಕಿರುವ 270 ಎಲೆಕ್ಟೊರಲ್ ಮತಗಳ ಪೈಕಿ ಶೇ 5ನೇ ಭಾಗದಷ್ಟನ್ನು ಇದು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+