• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯ ಜೀವನಕ್ಕೆ ನೆರವಾಗಲು ವೃತ್ತಿ ತ್ಯಜಿಸಿದ ಕಮಲಾ ಹ್ಯಾರಿಸ್ ಪತಿ

|

ವಾಷಿಂಗ್ಟನ್, ನವೆಂಬರ್ 11: ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ಲಾಸ್ ಎಮ್ಹಾಫ್, ಪತ್ನಿಯ ರಾಜಕೀಯ ಜೀವನಕ್ಕೆ ಬೆಂಬಲ ನೀಡುವ ಸಲುವಾಗಿ ತಮ್ಮ ಉದ್ಯೋಗವನ್ನು ತ್ಯಜಿಸುತ್ತಿದ್ದಾರೆ.

ದೇಶದ ಅತಿದೊಡ್ಡ ಕಾನೂನು ಸಂಸ್ಥೆಗಳಲ್ಲಿ ಒಂದಾದ ದಕ್ಷಿಣ ಕ್ಯಾಲಿಫೋರ್ನಿಯಾದ ಡಿಎಲ್‌ಎ ಪೈಪರ್‌ನಲ್ಲಿ ವಕೀಲರಾಗಿರುವ ಅವರು, ಶ್ವೇತಭವನದಲ್ಲಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸುವ ದಿನದಂದೇ ವೃತ್ತಿಗೆ ವಿದಾಯ ಹೇಳಲಿದ್ದಾರೆ.

ಕಮಲಾ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಅಂಕಲ್ ಗೋಪಾಲನ್

ಅಧ್ಯಕ್ಷೀಯ ಚುನಾವಣೆಯ ಚಟುವಟಿಕೆಗಳು ಆರಂಭವಾದಾಗ ಆಗಸ್ಟ್‌ನಲ್ಲಿ ಕಮಲಾ ಪರ ಪ್ರಚಾರ ನಡೆಸಲು ರಜೆ ತೆಗೆದುಕೊಂಡಿದ್ದ ಎಮ್ಹಾಫ್, 2021ರ ಜನವರಿ 20ರಿಂದ ಸಂಸ್ಥೆಯೊಡೆಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲಿದ್ದಾರೆ.

ಶ್ವೇತ ಭವನಕ್ಕೆ ನಾನು ಮೊದಲ ಮಹಿಳೆ, ಕೊನೆಯಲ್ಲ; ಕಮಲಾ ಹ್ಯಾರೀಸ್

ವೆನೇಬಲ್ ಎಲ್‌ಎಲ್‌ಪಿ ಕಾನೂನು ಸಂಸ್ಥೆಯಿಂದ ಡಿಎಲ್‌ಎ ಪೈಪರ್ ಸಂಸ್ಥೆಗೆ 2017ರಲ್ಲಿ ಸೇರಿಕೊಂಡಿದ್ದ ಎಮ್ಹಾಫ್ ಅವರು, 'ಅಮೆರಿಕನ್ ಮೇಡ್' ಚಿತ್ರದ ನಿರ್ಮಾಪಕರು ಮತ್ತು ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ ವಿಲ್ಲೀ ಗೌಲ್ಟ್, ಮೆರ್ಕ್ ಆಂಡ್ ವಾಲ್ಮಾರ್ಟ್‌ನಂತಹ ವಾಣಿಜ್ಯ ಸಂಸ್ಥೆಗಳ ಕಾನೂನು ಸಲಹೆಗಾರರಾಗಿದ್ದರು.

ಅಮೆರಿಕಾದಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾದರೆ ಭಾರತದಲ್ಲಿ ಸಂಭ್ರಮ!

ನೂತನ ಅಧ್ಯಕ್ಷ ಜೋ ಬೈಡನ್ ಅವರೊಂದಿಗೂ ಆಪ್ತ ಸಂಬಂಧ ಹೊಂದಿದ್ದಾರೆ. ಚುನಾವಣೆಯಲ್ಲಿ ಬೈಡನ್ ಮತ್ತು ಕಮಲಾ ಪರ ಅವರು ನಿರಂತರ ಪ್ರಚಾರ ನಡೆಸಿದ್ದರು. ಕಮಲಾ ಮತ್ತು ಎಮ್ಹಾಫ್ 2013ರಲ್ಲಿ ಮೊದಲು ಭೇಟಿಯಾಗಿದ್ದರು. 2014ರಲ್ಲಿ ಮದುವೆಯಾಗಿದ್ದರು. ಆಗ ಕಮಲಾ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು. ಕಮಲಾ ಅವರಿಗೆ ಮೊದಲ ಮದುವೆಯಾದರೆ, ಎಮ್ಹಾಫ್ ಅವರಿಗೆ ಇದು ಎರಡನೆಯ ಮದುವೆ. 2017ರಲ್ಲಿ ಕಮಲಾ ಕ್ಯಾಲಿಫೋರ್ನಿಯಾ ಸೆನೆಟರ್ ಆಗಿ ಆಯ್ಕೆಯಾಗಿದ್ದರು.

English summary
US Elections: Vice Preseident-Elect Kamala Harris's husband Douglas Emhoff will leave his job at law firm to support her political life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X