ಟ್ರಂಪ್‌ಗೆ ಕೋರ್ಟ್‌ನಲ್ಲಿ ಎದಿರೇಟು ನೀಡಲು ಬೈಡೆನ್ ಸಜ್ಜು
ವಾಷಿಂಗ್ಟನ್, ನವೆಂಬರ್ 4: ಮತಪತ್ರಗಳ ಚಲಾವಣೆಯಲ್ಲಿ ಮತ್ತು ಎಣಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಈ ಮೋಸದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಅವರ ಪ್ರಚಾರ ತಂಡ ಖಂಡಿಸಿದೆ.
ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುವ ಎಲ್ಲ ಕಾನೂನು ಹೋರಾಟಗಳಿಗೆ ಪ್ರತಿಯಾಗಿ ಹೋರಾಟ ನಡೆಸಲು ಸಿದ್ಧ ಇರಲು ತಮ್ಮ ಕಾನೂನು ತಂಡಗಳು ಸಹ ಸಿದ್ಧವಾಗಿವೆ. ಚುನಾವಣಾ ಫಲಿತಾಂಶಕ್ಕೆ ತಡೆಯೊಡ್ಡಲು ಟ್ರಂಪ್ ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದೆ.
'ಮತಗಳ ಸೂಕ್ತ ಎಣಿಕೆಯ ಪ್ರಕ್ರಿಯೆಗೆ ತಡೆ ನೀಡುವ ಪ್ರಯತ್ನವಾಗಿ ತಮ್ಮ ಬೆದರಿಕೆಯಂತೆಯೇ ಅಧ್ಯಕ್ಷ ಟ್ರಂಪ್ ನ್ಯಾಯಾಲಯಕ್ಕೆ ಹೋದರೆ, ಆ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತಪಡಿಸಲು ನಮ್ಮ ಕಾನೂನು ತಂಡಗಳು ಸಹ ಸಿದ್ಧವಾಗಿವೆ' ಎಂದು ಬೈಡೆನ್ ಅವರ ಪ್ರಚಾರ ವ್ಯವಸ್ಥಾಪಕಿ ಜೆನ್ ಓ ಮ್ಯಾಲ್ಲಿ ಡಿಲ್ಲೋನ್ ಹೇಳಿಕೆ ನೀಡಿದ್ದಾರೆ.

ಎಲ್ಲ ಮತದಾನಗಳನ್ನೂ ಸ್ಥಗಿತಗೊಳಿಸಬೇಕು. ಇವುಗಳಲ್ಲಿ ಭಾರಿ ವಂಚನೆ ನಡೆಸಲಾಗಿದೆ. ಜನರನ್ನು ದಾರಿತಪ್ಪಿಸುವ ಮೋಸಗಾರರ ಗುಂಪು ಕೆಲಸ ಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದರು. ಇದರಿಂದ ಟ್ರಂಪ್ ಮತ್ತು ಬೈಡೆನ್ ಸಂಪೂರ್ಣ ಫಲಿತಾಂಶದ ಬಳಿಕ ಕಾನೂನು ಸಮರದ ಮತ್ತೊಂದು ಹಂತ ನಡೆಸುವ ಸೂಚನೆ ಸಿಕ್ಕಿದೆ. ಚುನಾವಣಾ ರಾತ್ರಿಯಂದು ಟ್ರಂಪ್ ಅವರು ಯಾವುದೇ ಸನ್ನಿವೇಶದಲ್ಲಿಯೂ ವಿಜಯ ಘೋಷಣೆ ಮಾಡಲಾಗುವುದಿಲ್ಲ ಎಂದು ಎರಡು ದಿನಗಳ ಹಿಂದೆ ಡಿಲ್ಲೋನ್ ಹೇಳಿಕೆ ನೀಡಿದ್ದರು.












Click it and Unblock the Notifications