ಅರಿಝೋನಾ: ತಗ್ಗಿದ ಬೈಡೆನ್-ಟ್ರಂಪ್ ಮತಗಳ ಅಂತರ

ವಾಷಿಂಗ್ಟನ್, ನವೆಂಬರ್ 5: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಎಲೆಕ್ಟೋರಲ್ ಮತಗಳ ಗಳಿಕೆಯನ್ನು ಜಯದ ಸಮೀಪ ಬಂದಿದ್ದರೂ, ಚುನಾವಣೆಯ ನಿಖರ ಫಲಿತಾಂಶ ಸ್ಪಷ್ಟವಾಗಿ ಸಿಗುತ್ತಿಲ್ಲ. ಇದಕ್ಕೆ ಇನ್ನೂ ಒಂದೆರಡು ದಿನ ಬೇಕಾಗಬಹುದು. ಈ ನಡುವೆ ಅರಿಜೋನಾ ಸಮರ ಕ್ಷೇತ್ರದಲ್ಲಿ ಇತ್ತೀಚಿನ ಮತ ಎಣಿಕೆಗಳಂತೆ ಜೋ ಬೈಡೆನ್ ಅವರ ಮುನ್ನಡೆಯ ಪ್ರಮಾಣ ಕಡಿಮೆಯಾಗಿದೆ.

ಒಂದು ಹಂತದಲ್ಲಿ ನಾಗಾಲೋಟದಲ್ಲಿದ್ದ ಬೈಡೆನ್, ಕೊಂಚ ಹಿನ್ನಡೆ ಅನುಭವಿಸಿದ್ದಾರೆ. ಇದರಿಂದ ಅವರ ಮುನ್ನಡೆ 10,000ದಷ್ಟು ಮತಗಳಿಗೆ ತಗ್ಗಿದೆ. ಅತಿ ದೊಡ್ಡ ಕೌಂಟಿಯಾದ ಅರಿಜೋನಾ ಇತ್ತೀಚೆಗೆ ಹೊಸ ಮತಗಳ ಹೊಸ ಸೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಬೈಡೆನ್ ಅವರು ಎದುರಾಳಿ ಡೊನಾಲ್ಡ್ ಟ್ರಂಪ್ ಅವರ ಎದುರು ಹೊಂದಿದ್ದ ಮುನ್ನಡೆಯ ಅಂತರ ಕಡಿಮೆಯಾಗಿದೆ.

ಜಾರ್ಜಿಯಾ, ಅರಿಜೋನಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿನ ಗೆಲುವು ಬಹಳ ನಿರ್ಣಾಯಕವಾಗಿವೆ. ಆದರೆ ಇಲ್ಲಿ ಇಬ್ಬರೂ ನಾಯಕರ ನಡುವೆ ತೀರಾ ನಿಕಟ ಹಣಾಹಣಿ ಇದೆ. ಡೆಮಾಕ್ರಟಿಕ್ ಪಕ್ಷವು ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಕಪ್ಪು ವರ್ಣೀಯ ಪುರುಷರ ಬೆಂಬಲವನ್ನು ಭಾರಿ ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ ಎಂದು ಎನ್‌ಬಿಸಿ ವರದಿ ಮಾಡಿದೆ.

US Elections: Joe Biden Lost Support Of Black Male Voters To Trump

2016ರಲ್ಲಿ ಡೊನಾಲ್ಡ್ ಟ್ರಂಪ್ ಎದುರು ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪಡೆದ ಕಪ್ಪು ವರ್ಣೀಯರ ಮತಗಳಿಗೆ ಸಮೀಪದಲ್ಲಿ ಬೈಡೆನ್ ಗಳಿಸಿದ ಮತಗಳ ಪ್ರಮಾಣವಿದೆ. ಬರಾಕ್ ಒಬಾಮ ಅವರು ಪಡೆದಿದ್ದ ಮತಗಳನ್ನು ಬೈಡೆನ್ ಕಳೆದುಕೊಂಡಿದ್ದಾರೆ. ಹಿಲರಿ ಕ್ಲಿಂಟನ್ ಅವರು ಶೇ 82ರಷ್ಟು ಕಪ್ಪು ವರ್ಣೀಯರ ಬೆಂಬ ಪಡೆದಿದ್ದರೆ, ಬೈಡೆನ್ ಅವರು ಶೇ 80ರಷ್ಟು ಬೆಂಬಲ ಪಡೆದಿದ್ದಾರೆ. ಇದು ಒಬಾಮಾ ಅವರು 2008 ಮತ್ತು 2012ರಲ್ಲಿ ಪಡೆದಿದ್ದ ಮತಗಳ ಹೋಲಿಕೆಯಲ್ಲಿ ತೀರಾ ಕಡಿಮೆ ಎಂದು ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+