ಎಪಿ ಎಕ್ಸಿಟ್ ಪೋಲ್: ಟ್ರಂಪ್ ಆಡಳಿತದ ಬಗ್ಗೆ ಮತದಾರ ಗರಂ
ವಾಷಿಂಗ್ಟನ್, ನ. 4: ಅಮೆರಿಕ ಚುನಾವಣೆಯ ಅಂತಿಮ ಹಂತದ ಮತದಾನ ಮುಕ್ತಾಯ ಹಂತ ತಲುಪಿದೆ. ಮತದಾನದ ದಿನಕ್ಕೂ ಮುನ್ನವೇ 10 ಕೋಟಿಗೂ ಅಧಿಕ ಮತದಾನ ಕಂಡ ಅಮೆರಿಕದಲ್ಲಿ ಈಗ ಮತದಾನೋತ್ತರ ಸಮೀಕ್ಷೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ. ಸಂಪೂರ್ಣ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸಮೀಕ್ಷೆಗಳನ್ನು ಪ್ರಸಾರ ಮಾಡಲಾಗುತ್ತದೆ. ಸದ್ಯಕ್ಕೆ ಅಸೋಸಿಯೇಟ್ ಪ್ರೆಸ್ ಸಂಸ್ಥೆಯ ವೋಟ್ ಕಾಸ್ಟ್ ಡೇಟಾ ಸಮೀಕ್ಷೆಯ ಸ್ಯಾಂಪಲ್ ಇಲ್ಲಿದೆ. ಪೂರ್ಣ ವರದಿ ನಂತರ ಸಿಗಲಿದೆ.
ವೋಟ್ ಕಾಸ್ಟ್ ಡೇಟಾ ಸಮೀಕ್ಷೆ ಪ್ರಕಾರ 2020ರ ಮತದಾರರು ಸರ್ಕಾರದ ಆಡಳಿತ, ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ವ್ಯಕ್ತಪಡಿಸಿದ್ದಾರೆ ಹಾಗೂ ಡೊನಾಲ್ಡ್ ಟ್ರಂಪ್ ಆಡಳಿತವನ್ನು ತಿರಸ್ಕರಿಸಿದ್ದಾರೆ. 10 ರಲ್ಲಿ 6 ಮಂದಿ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ವೈಫಲ್ಯ ಕಂಡಿದೆ ಎಂದಿದ್ದಾರೆ.
ಸುಮಾರು 106,000 ಮತದಾರರನ್ನು ಕಳೆದ 8 ದಿನಗಳಲ್ಲಿ(ಮತದಾನದ ದಿನ ಸೇರಿದಂತೆ) ಸಂದರ್ಶಿಸಿ ಸಂಗ್ರಹಿಸಿದ ಅಂಕಿ ಅಂಶ ಇದಾಗಿದೆ. ಅಮೆರಿಕದ ಎಲೆಕ್ಟೋರೇಟ್ ಕುರಿತಂತೆ ನಿಖರ ಸಮೀಕ್ಷೆಯನ್ನು ಶಿಕಾಗೋವಿವಿಯ ಎನ್ ಒ ಆರ್ ಸಿ ತಯಾರಿಸಿ ಎಪಿ ಸಂಸ್ಥೆಗಾಗಿ ನೀಡಿದೆ.

ಈ ಸಮಯಕ್ಕೆ( 6.03 IST) ಲಭ್ಯ ಮಾಹಿತಿಯಂತೆ ಟ್ರಂಪ್ ಆಡಳಿತ ಕುರಿತಂತೆ AP ವೋಟ್ ಕಾಸ್ಟ್ ಡೇಟಾ ಕೇಳಿದ ಪ್ರಶ್ನೆಗಳಿಗೆ ಸಿಕ್ಕ ಉತ್ತರ:
* ರಾಷ್ಟ್ರೀಯ ಆರ್ಥಿಕತೆ ಅಭಿವೃದ್ಧಿ
ಸಮರ್ಪಕವಾಗಿಲ್ಲ/ ಕಳಪೆ: 59%
ಅತ್ಯುತ್ತಮ/ಚೆನ್ನಾಗಿದೆ: 41%
***
* ಕೊರೊನಾ ಸಾಂಕ್ರಾಮಿಕ ನಿಯಂತ್ರಣ
ಸಂಪೂರ್ಣ ನಿಯಂತ್ರಣ/ ಬಹುತೇಕ ಹಿಡಿತದಲ್ಲಿದೆ: 18%
ಪರ್ವಾಗಿಲ್ಲ ನಿಯಂತ್ರಣದಲ್ಲಿದೆ: 29%
ಯಾವುದೇ ರೀತಿ ನಿಯಂತ್ರಣ ಸಾಧ್ಯವಾಗಿಲ್ಲ: 53%
****
* ಚುನಾವಣೆಯಲ್ಲಿ ಮತ ಎಣಿಕೆ, ನಿಖರ ಫಲಿತಾಂಶದ ಬಗ್ಗೆ
ತುಂಬಾ ವಿಶ್ವಾಸವಿದೆ: 24%
ಅಲ್ಪ ಸ್ವಲ್ಪ ವಿಶ್ವಾಸವಿದೆ: 44%
ಹೆಚ್ಚು ವಿಶ್ವಾಸವಿಲ್ಲ: 24%
ಯಾವುದೇ ರೀತಿ ವಿಶ್ವಾಸ ಹೊಂದಿಲ್ಲ: 7%
***
ಸಿಎನ್ಎನ್ ಸಂಸ್ಥೆ ಸಮೀಕ್ಷೆ: 115 ಮತಗಟ್ಟೆಗಳಲ್ಲಿ ಇಂದು 7,774 ಮಂದಿ ಸಂದರ್ಶಿಸಿ ಸಂಗ್ರಹಿಸಿದ ಅಭಿಪ್ರಾಯ ಇದಾಗಿದೆ.
ಕೊರೊನಾ ಸಾಂಕ್ರಾಮಿಕ ನಿಯಂತ್ರಣ
ಶೇ 51ರಷ್ಟು ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ
ಶೇ 48 ರಷ್ಟು ಮಂದಿ ಸರ್ಕಾರದ ಪರ ಇದ್ದಾರೆ.
***
ಆರ್ಥಿಕ ಪರಿಸ್ಥಿತಿ:
ಶೇ 52ರಷ್ಟು ಮಂದಿ ಕೊರೊನಾ ನಿಯಂತ್ರಣವೇ ಮುಖ್ಯ ಎಂದಿದ್ದಾರೆ. ಶೇ 40ರಷ್ಟು ಮಂದಿ ಆರ್ಥಿಕ ಪ್ರಗತಿ ತಕ್ಷಣದ ಅಗತ್ಯ ಎಂದಿದ್ದಾರೆ.
****
ಚುನಾವಣೆಯಲ್ಲಿ ಮತ ಎಣಿಕೆ, ನಿಖರ ಫಲಿತಾಂಶ
ಶೇ 12ರಷ್ಟು ಮಂದಿ ಮತ ಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶೇ 46ರಷ್ಟು ಮಂದಿ ನಿಖರವಾಗಿರುತ್ತದೆ ಎಂದು ವಿಶ್ವಾಸ ಹೊಂದಿದ್ದಾರೆ.












Click it and Unblock the Notifications