ಜೋ ಬಿಡೆನ್ ಗೆದ್ದರೆ ಅಮೆರಿಕ ತೊರೆಯುತ್ತೇನೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 17: ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸೋಲು ಅನುಭವಿಸಿದರೆ ದೇಶವನ್ನೇ ತೊರೆಯಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

'ನಾನು ಸೋತರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ನನಗೆ ಬಹಳ ಬೇಸರವಾಗುತ್ತದೆ. ಬಹುಶಃ ನಾನು ದೇಶವನ್ನು ತೊರೆಯಬೇಕಾಗಬಹುದು, ನನಗೆ ಗೊತ್ತಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

ಜೋ ಬಿಡೆನ್ ಅವರಿಗೆ ಹೋಲಿಸಿದರೆ ಅಪಾರ ನಗದು ಕೊರತೆ ಎದುರಿಸುತ್ತಿರುವ ಟ್ರಂಪ್, ಚುನಾವಣೆಯ ಅಂತಿಮ ಹಂತಕ್ಕೆ ಬಂದಾಗ ಹೆಚ್ಚಿನ ಹಣ ಸಂಗ್ರಹಿಸಲು ಆದ್ಯತೆ ನೀಡಲಾಗುವುದು ಎಂದಿದ್ದಾರೆ. 'ನಾನು ಇನ್ನಷ್ಟು ಹಣ ಸಂಗ್ರಹಿಸಬಹುದು. ಜಗತ್ತಿನ ಮಹಾನ್ ದೇಣಿಗೆ ಸಂಗ್ರಾಹಕನಾಗಬಹುದು. ಆದರೆ ನಾನು ಹಾಗೆ ಮಾಡಲು ಬಯಸುತ್ತಿಲ್ಲವಷ್ಟೇ' ಎಂದು ಹೇಳಿದ್ದಾರೆ.

US Elections: Donald Trump Says Maybe I Will Have To Leave The Country If Biden Wins

ಕೊರೊನಾ ವೈರಸ್ ಪಿಡುಗು ನಿಗ್ರಹದ ಪ್ರಯತ್ನದಲ್ಲಿ ತಾವು ಎದುರಿಸಿದ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿರುವ ಟ್ರಂಪ್, ಮರು ಆಯ್ಕೆಗಾಗಿ ತಮ್ಮ ಶಕ್ತಿಯನ್ನು ಹೆಚ್ಚಿಕೊಳ್ಳಲು ಹೋರಾಟ ನಡೆಸಿರುವುದಾಗಿ ತಿಳಿಸಿದ್ದಾರೆ.

ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ ಇಳಿದಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಟೀಕಿಸಿರುವ ಟ್ರಂಪ್, 'ಇಂದು ನನಗೆ ತುರ್ತು ಕರೆಯೊಂದು ಬಂದಿತ್ತು. ನಿದ್ದೆಗಣ್ಣಲ್ಲಿ ಇರುವ ಜೋ ಅವರ ಪರವಾಗಿ ಬರಾಕ್ ಒಬಾಮ ಪ್ರಚಾರ ಆರಂಭಿಸುತ್ತಿದ್ದಾರೆ. ಅದರಿಂದೇನು ಸಮಸ್ಯೆಯಿದೆ? ನಿಮಗೆ ಗೊತ್ತೇ? ಕಳೆದ ಬಾರಿ ಅವರು ಹಿಲರಿ ಕ್ಲಿಂಟನ್ ಅವರಿಗಿಂತಲೂ ಕಠಿಣವಾಗಿ ಪ್ರಚಾರ ನಡೆಸಿದ್ದರು, ಹೀಗಾಗಿ ನಾವೇಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು?' ಎಂದು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+