ಬಿಡೆನ್‌ಗೆ ಮತ ಹಾಕಿದರೆ ಕ್ರಿಸ್‌ಮಸ್ ಹಬ್ಬವೇ ಇರುವುದಿಲ್ಲ: ಟ್ರಂಪ್
ಮಿಯಾಮಿ, ಅಕ್ಟೋಬರ್ 29: 'ನೀವು ಜೋ ಬಿಡೆನ್ ಅವರಿಗೆ ಮತ ಹಾಕಿದರೆ ಶಾಲೆಗಳಲ್ಲಿ ಮಕ್ಕಳು ಇರುವುದಿಲ್ಲ, ಪದವಿಗಳಿರುವುದಿಲ್ಲ, ಕ್ರಿಸ್‌ಮಸ್‌ಗಳು ಇರುವುದಿಲ್ಲ ಮತ್ತು ಜುಲೈ ನಾಲ್ಕರ ಜೊತೆ ಸೇರುವ ಅವಕಾಶವಿರುವುದಿಲ್ಲ. ಅದರ ಹೊರತಾಗಿ ನಿಮ್ಮೆಲ್ಲರದೂ ಅದ್ಭುತ ಜೀವನವಾಗಿರಲಿದೆ' ಎಂದು ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಆರೋಗ್ಯ ಸುರಕ್ಷತೆ ವಿಚಾರದಲ್ಲಿ ಬಿಡೆನ್ ಅವರ ಉದ್ದೇಶಗಳ ವಿರುದ್ಧ ಹರಿಹಾಯ್ದಿರುವ ಟ್ರಂಪ್, ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತಷ್ಟು ಲಾಕ್‌ಡೌನ್‌ಗಳನ್ನು ಹೇರುವ ಮೂಲಕ ದೇಶವನ್ನು ಹಾಳುಗೆಡವಲಿದ್ದಾರೆ ಎಂದು ಹೇಳಿದ್ದಾರೆ.
ಟ್ರಂಪ್ ಮತ್ತು ಜೋ ಬಿಡೆನ್ ಅವರು ಫ್ಲೋರಿಡಾ ನಗರದಲ್ಲಿ ಕೆಲವು ಗಂಟೆಗಳ ಅಂತರದಲ್ಲಿ ಮತದಾರರೊಂದಿಗೆ ಸಮಾವೇಶ ನಡೆಸಲಿದ್ದಾರೆ. ಅಮೆರಿಕದ ಮೂರನೇ ಅತಿ ದೊಡ್ಡ ರಾಜ್ಯವಾದ ಫ್ಲೋರಿಡಾದ ಗೆಲುವು ಇಬ್ಬರೂ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ್ದಾಗಿದೆ. 1964ರಿಂದ ಇಲ್ಲಿಯವರೆಗೂ ಒಂದು ಚುನಾವಣೆಯಲ್ಲಿ ಹೊರತುಪಡಿಸಿ ಫ್ಲೋರಿಡಾ ಗೆಲುವು ಕಂಡ ಅಭ್ಯರ್ಥಿಗಳ ಪರವಾಗಿಯೇ ಇದೆ.

'ಒಂದು ನಿರ್ಧಾರದ ಮೂಲಕ ಈ ಪಿಡುಗನ್ನು ಅಂತ್ಯಗೊಳಿಸಲು ಸಾಧ್ಯ ಎಂದು ನಾನು ಸುಳ್ಳು ಭರವಸೆಯನ್ನೇನೋ ನೀಡುತ್ತಿಲ್ಲ. ಆದರೆ ಮೊದಲ ದಿನದಿಂದಲೇ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ವಿಜ್ಞಾನವು ನಮಗೆ ಮಾರ್ಗದರ್ಶನ ಮಾಡಲಿದೆ' ಎಂದು ಜೋ ಬಿಡೆನ್ ಹೇಳಿದ್ದರು.












Click it and Unblock the Notifications