ನನಗೆ ಗೆಲ್ಲಲು ಪ್ರಬಲ ಅವಕಾಶವಿದೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ನವೆಂಬರ್ 3: ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಒರೆಗೆ ಹಚ್ಚಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ಮರು ಆಯ್ಕೆಯಾಗಲು ಬಯಸಿದ್ದು, ಗೆಲ್ಲಲು ಪ್ರಬಲ ಸದವಕಾಶಗಳಿವೆ ಎಂದು ಹೇಳಿದ್ದಾರೆ.
ಅಮೆರಿಕಕ್ಕೆ ನಿಭಾಯಿಸಲು ಅತ್ಯಂತ ಕಷ್ಟಕರವಾದ ದೇಶ ಯಾವುದು? ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾ? ಎಂಬ ಪ್ರಶ್ನೆಗೆ ಟ್ರಂಪ್, ನಿಭಾಯಿಸಲು ಅತ್ಯಂತ ಕಷ್ಟಕರ ದೇಶವೆಂದರೆ ಅಮರಿಕ. ಉಳಿದ ಈ ಯಾವ ದೇಶಗಳೂ ಅದರ ಸಮೀಪವೂ ಬರುವುದಿಲ್ಲ ಎಂದಿದ್ದಾರೆ.
ಚುನಾವಣೆ ಆರಂಭವಾದ ಬಳಿಕ ಫಾಕ್ಸ್ ನ್ಯೂಸ್‌ಗೆ 45 ನಿಮಿಷಗಳ ಕಾಲ ದೂರವಾಣಿ ಸಂದರ್ಶನ ನೀಡಿದ ಟ್ರಂಪ್, ತಮಗೆ ಗೆಲ್ಲಲು ಅತಿ ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿಕೊಂಡರು.

ಅಮೆರಿಕ ಆಡಳಿತದ ಆಂತರಿಕ ಕೆಲಸಗಳು ಬಹಳ ಕಷ್ಟಕರ. ನೀವು ಅಲ್ಲಿ ಕುಳಿತುಕೊಳ್ಳದೆ ಹೋದರೆ ಮತ್ತು ಏನೂ ಮಾಡದೆ ಇದ್ದರೆ, ಅಥವಾ ಅವರು ಬಯಸಿದ್ದನ್ನೆಲ್ಲವನ್ನೂ ನೀವು ಮಾಡಲು ಬಯಸದೆ ಹೋದರೆ ಮತ್ತು ನೀವು ಮಾಡುವುದನ್ನು ಬಯಸದಿದ್ದರೆ ಆಡಳಿತ ಬಹಳ ಕಷ್ಟ ಎಂದರು.
ಸಂದರ್ಶನದ ವೇಲೆ ಟ್ರಂಪ್, ತಮ್ಮನ್ನು ಮತ್ತೊಂದು ಅವಧಿಗೆ ಏಕೆ ಆಯ್ಕೆ ಮಾಡಬೇಕೆಂದು ಬಯಸಿದ್ದಾರೆ ಎಂಬುದನ್ನು ವಿವರಿಸಲು ಹೆಣಗಾಡಿದರು. ನಾಲ್ಕು ವರ್ಷಗಳ ಆಡಳಿತದಲ್ಲಿನ ತಮ್ಮ ಕಾರ್ಯಸೂಚಿಗಳ ಬಗ್ಗೆ ಕೇಳಿದಾಗ ತೆಳುವಾದ ಉತ್ತರಗಳನ್ನಷ್ಟೇ ನೀಡಿದರು.












Click it and Unblock the Notifications