ಪ್ರತಿ ಮತವೂ ಪವಿತ್ರ, ತಾಳ್ಮೆಯಿಂದಿರಿ: ಬೈಡೆನ್
ವಾಷಿಂಗ್ಟನ್, ನವೆಂಬರ್ 6: ಜನರು ತಾಳ್ಮೆಯಿಂದ ಇದ್ದು, ಅಧ್ಯಕ್ಷೀಯ ಚುನಾವಣೆಯ ಪ್ರತಿ ಮತಗಳೂ ಎಣಿಕೆಯಾಗಲು ಸಂಯಮದಿಂದ ಅವಕಾಶ ನೀಡಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಹೇಳಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರೂ ಅವರು ಸಂಪೂರ್ಣ ಫಲಿತಾಂಶ ಘೋಷಣೆಯಾಗುವವರೆಗೂ ಕಾದು ನೋಡಲು ತೀರ್ಮಾನಿಸಿದ್ದಾರೆ.
ಪ್ರಮುಖ ರಾಜ್ಯಗಳಾದ ಜಾರ್ಜಿಯಾ, ನೆವಾಡ, ಪೆನ್ಸಿಲ್ವೇನಿಯಾ ಮತ್ತು ಅರಿಝೋನಾಗಳಿಂದ ಇನ್ನೂ ಅಂತಿಮ ಫಲಿತಾಂಶಗಳು ಹೊರಬರಬೇಕಿದೆ. ಈ ನಾಲ್ಕು ರಾಜ್ಯಗಳಲ್ಲಿನ ಫಲಿತಾಂಶ ಮುಂದಿನ ಅಧ್ಯಕ್ಷ ಸ್ಥಾನವನ್ನು ನಿರ್ಧರಿಸಲಿದೆ.
'ಅಮೆರಿಕದಲ್ಲಿ ಪ್ರತಿ ಮತಗಳೂ ಪವಿತ್ರ. ಇದು ಈ ದೇಶದ ಜನರು ತಮ್ಮ ಇಚ್ಛೆಯನ್ನು ಅಭಿವ್ಯಕ್ತಗೊಳಿಸುವ ರೀತಿ ಇದು. ಇದು ಮತದಾರರ ಇಚ್ಛೆ. ಬೇರೇನೂ ಅಲ್ಲ, ಅಮೆರಿಕದ ಅಧ್ಯಕ್ಷರನ್ನು ಅವರ ಮತಗಳು ಆಯ್ಕೆ ಮಾಡುತ್ತವೆ' ಎಂದು ಬೈಡೆನ್ ಹೇಳಿದ್ದಾರೆ.

'ಹೀಗಾಗಿ ಪ್ರತಿ ಮತಪತ್ರವನ್ನೂ ಎಣಿಕೆ ಮಾಡಬೇಕು. ನಾವು ಪ್ರಸ್ತುತ ಅದನ್ನೇ ನೋಡುತ್ತಿದ್ದೇವೆ. ಹಾಗೆಯೇ ಈ ಪ್ರಕ್ರಿಯೆ ಇದೇ ರೀತಿ ನಡೆಯಬೇಕು. ಪ್ರಜಾಪ್ರಭುತ್ವ ಕೆಲವೊಮ್ಮೆ ಗೊಂದಲಮಯವಾಗಬಹುದು. ಆದರೆ ಆ ತಾಳ್ಮೆಗೆ 240 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಪ್ರತಿಫಲ ಸಿಗುತ್ತಿದೆ. ಈ ಆಡಳಿತ ವ್ಯವಸ್ಥೆ ಜಗತ್ತಿನ ಶಕ್ತಿ' ಎಂದಿದ್ದಾರೆ.












Click it and Unblock the Notifications