ಅಮೆರಿಕದಲ್ಲಿ ಚುನಾವಣೆಯ ಬೆನ್ನಲ್ಲೇ ಕೊರೊನಾಘಾತ

ವಾಷಿಂಗ್ಟನ್, ನವೆಂಬರ್ 5: ಅಧ್ಯಕ್ಷೀಯ ಚುನಾವಣೆಯ ಬೆನ್ನಲ್ಲಿಯೇ ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಭಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಒಂದೇ ದಿನ ಒಂದು ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಬುಧವಾರ ಒಂದೇ ದಿನ ಕನಿಷ್ಠ 1,02,591 ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದ ಅನೇಕ ರಾಜ್ಯಗಳಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿಕೊಂಡಿವೆ. ಕೊಲರಾಡೊ, ಇಡಾಹೊ, ಇಂಡಿಯಾನಾ, ಮಾಯಿನೆ, ಮಿಚಿಗನ್, ಮಿನ್ನೆಸೊಟಾ, ರೋಡ್ ಐಲ್ಯಾಂಡ್, ವಾಷಿಂಗ್ಟನ್ ಮತ್ತು ವಿಸ್ಕೊನ್‌ಸಿನ್‌ನಲ್ಲಿ ಬುಧವಾರ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ.

ಚುನಾವಣೆಯ ದಿನವಾದ ಮಂಗಳವಾರವೂ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಅಂದು ಸುಮಾರು 99,660 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿತ್ತು. 1,112 ಮಂದಿ ಕೋವಿಡ್‌ಗೆ ಬಲಿಯಾಗಿದ್ದರು.

US Elections: Coronavirus Cases Surges In America Amid Elections

ಮಂಗಳವಾರ ನಡೆದ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮಗಳನ್ನು ಮತಗಟ್ಟೆಗಳಲ್ಲಿ ತೆಗೆದುಕೊಂಡಿದ್ದರೂ ಚುನಾವನೆಯ ಪರಿಣಾಮವಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಒಂದೇ ದಿನ 50,000ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಕಳೆದ ಮೂರು ತಿಂಗಳಲ್ಲಿಯೇ ಅತ್ಯಧಿಕವಾಗಿದೆ.

ಅಮೆರಿಕದಲ್ಲಿ ಕೋವಿಡ್‌ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ 14 ರಾಜ್ಯಗಳಲ್ಲಿ ಒಂದಾದ ನಾರ್ತ್ ಡಕೋಟಾದಲ್ಲಿ ಕೇವಲ ಆರು ತೀವ್ರ ನಿಗಾ ಘಟಕದ ಹಾಸಿಗೆಗಳು ಖಾಲಿ ಉಳಿದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆ ತಪಾಸಣೆಯ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ. ಸೌತ್ ಡಕೋಟಾದಲ್ಲಿ ನಡೆದ ತಪಾಸಣೆಗಳಲ್ಲಿ ಶೇ 50ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಲೋವಾಡ ಮತ್ತು ವ್ಯೋಮಿಂಗ್‌ಗಳಲ್ಲಿ ಶೇ 40ರಷ್ಟು ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+