ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರನ್ನು ಹಿಂದಿಕ್ಕಿದ ಜೋ ಬಿಡೆನ್

ವಾಶಿಂಗ್ಟನ್, ನವೆಂಬರ್.06: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಪೆನ್ಸಿಲ್ವೇನಿಯಾದ ಬಹುತೇಕ ಕಡೆಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗಿನ ಅಂಕಿ-ಅಂಶಗಳ ಪ್ರಕಾರ, ಟ್ರಂಪ್ ಗಿಂತ ಬಿಡೆನ್ 5594 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇದರ ನಡುವೆ ಮತಎಣಿಕೆ ಕಾರ್ಯವನ್ನು ಮುಂದುವರಿಸಲಾಗಿದ್ದು, ಜೋ ಬಿಡೆನ್ ಗೆಲುವು ಸಾಧಿಸಿರುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ. ಆದರೆ ಬಿಡೆನ್ ಪರವಾಗಿ ಹೆಚ್ಚಿನ ಬೆಂಬಲ ಮತ್ತು ಮತಗಳು ಚಲಾವಣೆ ಆಗಿರುವ ಬಗ್ಗೆ ಮುನ್ಸೂಚನೆಗಳು ಸಿಗುತ್ತಿವೆ.

ಪೆನ್ಸಿಲ್ವೇನಿಯಾದಲ್ಲಿ 20 ಎಲೆಕ್ಟೋರಲ್ ಮತಗಳಿದ್ದು, 2016ರವರೆಗೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಗಳನ್ನು ಶ್ವೇತಭವನಕ್ಕೆ ಕಳುಹಿಸುವ ನೀಲಿ ಗೋಡೆ ಎಂದೇ ಕರೆಯಲ್ಪಡುತ್ತಿತ್ತು. ಇನ್ನೊಂದು ಕಡೆಯಲ್ಲಿ ಮಿಚಿಗಾನ್ ಮತ್ತು ವಿಸ್ಕೊಂಸಿನ್ ನಲ್ಲಿ ಬಿಡೆನ್ ಗೆಲುವು ಸಾಧಿಸಿದ್ದಾರೆ. ಕಳೆದ 2016ರಲ್ಲಿ ಡೊನಾಲ್ಡ್ ಟ್ರಂಪ್ ಇದೇ ಪೆನ್ಸಿಲ್ವೇನಿಯಾದಲ್ಲಿ 44,300 ಮತಗಳಿಂದ ಗೆಲುವು ಸಾಧಿಸಿದ್ದರು.

US Election Updates: Joe Biden Takes Lead In Pennsylvania

ಅಂಚೆ ಮತಗಳಿಂದ ಬಿಡೆನ್ ಮುನ್ನಡೆ:

ಪೆನ್ಸಿಲ್ವೇನಿಯಾದಲ್ಲಿ ಪ್ರಾರಂಭಿದ ಹಂತದ ಮತಎಣಿಕೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದರು. ತದನಂತರದಲ್ಲಿ ಅಂಚೆ ಮತಗಳ ಎಣಿಕೆ ಆರಂಭವಾಗುತ್ತಿದ್ದಂತೆ ಜೋ ಬಿಡೆನ್ ಅವರು ಟ್ರಂಪ್ ರನ್ನು ಹಿಂದಿಕ್ಕಿ ಮುನ್ನಡೆ ಗಳಿಸಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಬಹುತೇಕ ಡೆಮಾಕ್ರೆಟಿಕ್ ಮತಗಳು ಅಂಚೆ ಮೂಲಕವೇ ಚಲಾವಣೆ ಆಗಿರಲಿವೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದಲ್ಲಿ ಚುನಾವಣೆ ಆರಂಭಿಕ ಹಂತದಿಂದಲೂ ಡೊನಾಲ್ಡ್ ಟ್ರಂಪ್ ಅಂಚೆ ಮತಗಳು ಮತ್ತು ಅದರ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಂಚೆ ಮತಗಳಿಂದ ಬಿಡೆನ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ, ಈ ಅಂಚೆ ಮತಗಳ ವ್ಯವಸ್ಥೆಯಲ್ಲೇ ದೋಷವಿದೆ ಎಂದು ದೂಷಿಸಿದ್ದರು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 264 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+