Video: ಶ್ವೇತಭವನದಿಂದ ಜಾಗ ಖಾಲಿ ಮಾಡಿದರೇ ಡೊನಾಲ್ಡ್ ಟ್ರಂಪ್?
ವಾಶಿಂಗ್ಟನ್, ನವೆಂಬರ್.06: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಚುನಾವಣಾ ಮತಎಣಿಕೆ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಸಾಕಷ್ಟು ಟ್ರೋಲ್ ಮತ್ತು ನಗು ಹುಟ್ಟಿಸುವಂತಾ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಮೆರಿಕಾದಲ್ಲಿ ಚುನಾವಣೆ ಆರಂಭಿಕ ಹಂತದಿಂದಲೂ ಡೊನಾಲ್ಡ್ ಟ್ರಂಪ್ ಅಂಚೆ ಮತಗಳು ಮತ್ತು ಅದರ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಂಚೆ ಮತಗಳಿಂದ ಬಿಡೆನ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ, ಈ ಅಂಚೆ ಮತಗಳ ವ್ಯವಸ್ಥೆಯಲ್ಲೇ ದೋಷವಿದೆ ಎಂದು ದೂಷಿಸಿದ್ದರು. ಅಮೆರಿಕಾ ಚುನಾವಣಾ ಫಲಿತಾಂಶದ ಕುರಿತು ಸ್ವತಃ ಅಧ್ಯಕ್ಷ ಟ್ರಂಪ್ ತಪ್ಪು ಮಾಹಿತಿಯನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
I’m taking this live shot of the White House, with a moving truck outside, as a good omen. pic.twitter.com/Uz4SuoU94N
— straightouttacontext (@happywithmeok) November 4, 2020
ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಬಹುತೇಕ ಕಡೆಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈಗಾಗಲೇ ಶ್ವೇತಭವನದಿಂದ ಜಾಗ ಖಾಲಿ ಮಾಡುತ್ತಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಈ ವಿಡಿಯೋದಲ್ಲಿರುವ ಟ್ರಕ್ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.

ಶ್ವೇತಭವನದ ಎದುರಿಗೆ ನಿಂತ ಟ್ರಕ್:
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷರ ಚುನಾವಣೆ ಫಲಿತಾಂಶದ ಮುನ್ಸೂಚನೆ ಸಿಗುತ್ತದ್ದಂತೆ ಆರೋಪ ಮಾಡುತ್ತಿದ್ದ ಟ್ರಂಪ್ ಶ್ವೇತಭವನದಿಂದ ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದಾರೆ. ಹಳದಿ ಟ್ರಕ್ ವಾಷಿಂಗ್ಟನ್‌ನ ಅಧ್ಯಕ್ಷೀಯ ನಿವಾಸದ ಪ್ರವೇಶ ದ್ವಾರದ ಎದುರು ಅಡ್ಡಲಾಗಿ ನಿಂತಿದೆ. ಇದೊಂದು ವಿಡಿಯೋ ಸಾಕಷ್ಟು ಊಹಾಪೋಹಗಳನ್ನು ಹುಟ್ಟು ಹಾಕುತ್ತಿದೆ. ಟ್ರಂಪ್ ಅಮೆರಿಕಾದ ವೈಟ್ ಹೌಸ್ ತೊರೆದು ಹೋಗುವುದಕ್ಕೆ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿರಬೇಕು ಎನ್ನುವ ಧಾಟಿಯಲ್ಲಿ ಕಾಮೆಂಟ್ಸ್ ಗಳು ಬರುತ್ತಿವೆ. ಟ್ರಂಪ್ ಕುರಿತು ಹಲವು ರೀತಿಯ ಟ್ರೋಲ್ ಗಳ ಸೃಷ್ಟಿಗೆ ಇದೊಂದು ವಿಡಿಯೋ ಕಾರಣವಾಗಿದೆ.
ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 264 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.












Click it and Unblock the Notifications