ಭಾರತದ ಗಡಿಯಲ್ಲಿ ಚೀನಾ ಸೇನಾ ಆಕ್ರಮಣ ವಿರೋಧಿಸುವ ಕಾಯ್ದೆ ಅಂಗೀಕರಿಸಿದ ಅಮೆರಿಕ

ವಾಷಿಂಗ್ಟನ್, ಜನವರಿ 2: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಭಾರತದಲ್ಲಿನ ಚೀನಾ ಸೇನೆಯ ಆಕ್ರಮಣವನ್ನು ವಿರೋಧಿಸುವ ಮಸೂದೆಯನ್ನು ಅಮೆರಿಕದ ಸಂಸತ್ತು ಕಾಯ್ದೆಯಾಗಿ ಅಂಗೀಕರಿಸಿದೆ. ಈ ಮೂಲಕ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಪಡೆಗಳಿಗೆ ಸವಾಲೊಡ್ಡಿ ನಿಂತಿರುವ ಭಾರತಕ್ಕೆ ಬಲ ದೊರೆತಂತಾಗಿದೆ.

ರಾಷ್ಟ್ರೀಯ ರಕ್ಷಣಾ ದೃಢೀಕರಣ (ಎನ್‌ಡಿಡಿಎ) 2021 ಮಸೂದೆಯನ್ನು ಇತ್ತೀಚೆಗೆ ಅಮೆರಿಕ ಸೆನೆಟ್‌ನಲ್ಲಿ ಅನುಮೋದಿಸಲಾಗಿತ್ತು. ಈ ಮಸೂದೆಯನ್ನು ಶುಕ್ರವಾರ ಅಮೆರಿಕದ ಉಭಯಪಕ್ಷೀಯ ಸಂಸತ್ತು ಕಾಯ್ದೆಯಾಗಿ ಜಾಅರಿಗೆ ತಂದಿದೆ. ಸುಮಾರು 740 ಬಿಲಿಯನ್ ಡಾಲರ್‌ಗಳ ರಕ್ಷಣಾ ನೀತಿ ಮಸೂದೆಯು ಎಲ್‌ಎಸಿಯಲ್ಲಿನ ಚೀನಾ ಸೇನೆಯ ಆಕ್ರಮಣದ ಅಂಶವನ್ನು ಒಳಗೊಂಡಿತ್ತು. ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪರಮಾಧಿಕಾರ ಬಳಸಿ ವಿರೋಧ ವ್ಯಕ್ತಪಡಿಸಿದ್ದರೂ ಸಂಸತ್ತಿನ ಅನುಮೋದನೆ ದೊರಕಿದೆ.

ಎಲ್‌ಎಸಿಯಲ್ಲಿ ಭಾರತದ ವಿರುದ್ಧದ ಸೇನಾ ಆಕ್ರಮಣವನ್ನು ಚೀನಾ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಈ ಕಾಯ್ದೆ ಒಳಗೊಂಡಿದೆ. ಎನ್‌ಡಿಎಎಗೆ ಉಭಯಪಕ್ಷೀಯ ಬೆಂಬಲ ದೊರೆತಿದ್ದರೂ ಡಿ. 23ರಂದು ಡೊನಾಲ್ಡ್ ಟ್ರಂಪ್ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಕಾಯ್ದೆಯು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದರು. ಮುಂದೆ ಓದಿ.

ಕಾನೂನಿನ ಪರ ಮತ ಚಲಾವಣೆ

ಕಾನೂನಿನ ಪರ ಮತ ಚಲಾವಣೆ

ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರ ವಿರೋಧವನ್ನು ನಿರಾಕರಿಸಿದ ಉಭಯ ಪಕ್ಷಗಳ ಸಂಸದರು ಈ ರಕ್ಷಣಾ ಮಸೂದೆಯನ್ನು ಕಾನೂನನ್ನಾಗಿ ಪರಿವರ್ತಿಸುವುದರ ಪರವಾಗಿ ಮತ ಚಲಾಯಿಸಿದರು. ಇದರಿಂದ ಅಧ್ಯಕ್ಷೀಯ ಕಚೇರಿಯಲ್ಲಿ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿರುವ ಟ್ರಂಪ್ ಅವರಿಗೆ ಭಾರಿ ಮುಖಭಂಗವಾದಂತಾಗಿದೆ.

ಆಕ್ರಮಣ ವಿರೋಧಿಸಿ ನಿರ್ಣಯ

ಆಕ್ರಮಣ ವಿರೋಧಿಸಿ ನಿರ್ಣಯ

ಭಾರತ ಮೂಲದ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಅವರು ಎನ್‌ಡಿಎಎ ಮಸೂದೆಯಲ್ಲಿ, ಎಲ್‌ಎಸಿಯಲ್ಲಿನ ಚೀನಾದ ಸೇನಾ ಆಕ್ರಮಣವನ್ನು ಅಂತ್ಯಗೊಳಿಸುವಂತೆ ಚೀನಾ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಕೈಗೊಳ್ಳುವಂತೆ ಪ್ರಸ್ತಾಪಿಸಿದ್ದರು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಇತರೆ ದೇಶಗಳ ಮೆಲೆ ಚೀನಾ ಸೇನೆಯ ಆಕ್ರಮಣವನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ.

ಇಂಡೋ-ಪೆಸಿಫಿಕ್ ಪ್ರದೇಶ

ಇಂಡೋ-ಪೆಸಿಫಿಕ್ ಪ್ರದೇಶ

ಭಾರತದಲ್ಲಿನ ಎಲ್‌ಎಸಿ ಭಾಗದಲ್ಲಿ ಹಾಗೂ ಇತರ ಕಡೆ ಚೀನಾ ಸೇನೆಯ ಹಿಂಸಾತ್ಮಕ ಆಕ್ರಮಣವು ಒಪ್ಪುವಂತಹದ್ದಲ್ಲ. ಈ ಕಾನೂನಿನ ಅಂಗೀಕಾರವು ನಾವು ಹೊಸ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಭಾರತ ಮತ್ತು ಜಗತ್ತಿನ ಇತರೆ ಸಹಭಾಗಿಗಳೆಡೆಗೆ ಬೆಂಬಲ ಹಾಗೂ ಸಹಾನುಭೂತಿಯ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತದಂತಹ ಪಾಲುದಾರ ಮತ್ತು ಮಿತ್ರ ದೇಶಗಳಿಗೆ ತನ್ನ ಬೆಂಬಲದ ಬಲವನ್ನು ನೀಡಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಬಲ ಪ್ರಯೋಗ ನಿಲ್ಲಿಸಲಿ

ಬಲ ಪ್ರಯೋಗ ನಿಲ್ಲಿಸಲಿ

ಭಾರತದ ಗಡಿಯಲ್ಲಿ ಚೀನಾದ ಆಕ್ರಮಣ ಮುಂದುವರಿದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಎನ್‌ಡಿಎಎ, ಹಾಲಿ ಇರುವ ರಾಜತಾಂತ್ರಿಕ ವ್ಯವಸ್ಥೆ ಬಳಸಿ ಹಾಗೂ ಬಲ ಪ್ರಯೋಗದ ಮೂಲಕ ವಿವಾದಗಳನ್ನು ಬಗೆಹರಿಸುವ ಪ್ರಯತ್ನಗಳಿಂದ ದೂರವಿದ್ದು, ಎಲ್‌ಎಸಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ಚೀನಾ ಕೆಲಸ ಮಾಡಬೇಕು ಎಂದು ಆಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+