Get Updates
Get notified of breaking news, exclusive insights, and must-see stories!

H-1B ಆಕಾಂಕ್ಷಿಗಳು ನಿರಾಳ, ವೀಸಾ ಕಡಿತದ ಸುದ್ದಿ ಸುಳ್ಳು

ವಾಷಿಂಗ್ಟನ್, ಜೂನ್ 21: ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಅನ್ಯದೇಶಿಯರಿಗೆ ನೀಡುವ H-1B ವೀಸಾ ಕಡಿತಕ್ಕೆ ಅಮೆರಿಕ ಮುಂದಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಆ ದೇಶದ ಸರ್ಕಾರ ಅಲ್ಲಗಳೆದಿದೆ.

"ವಿದೇಶಿ ಕಂಪೆನಿಗಳು ತಮ್ಮ ದತ್ತಾಂಶವನ್ನು ಸ್ಥಳೀಯವಾಗಿ ಸಂಗ್ರಹಿಸಬೇಕು" ಎಂಬ ಭಾರತದ ಒತ್ತಾಯಕ್ಕೆ ಪ್ರತಿಯಾಗಿ ಅಮೆರಿಕ ವೀಸಾ ಕಡಿತದ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗಿತ್ತು.

ಆದರೆ ಈ ಸುದ್ದಿಯನ್ನು ಸುಳ್ಳು ಎಂದಿರುವ ಅಮೆರಿಕ, H-1B ವೀಸಾ ಕಡಿತಗೊಳಿಸುತ್ತಿಲ್ಲ. ಇದು ಯಾವುದೇ ದೇಶವನ್ನು ಗುರಿಯಾಗಿಸಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಅದು ಹೇಳಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

US clarifies, it has no plans to place caps on H-1B work visas

ಅಮೆರಿಕದ H-1B ವೀಸಾ ಪಡೆಯುವವರಲ್ಲಿ ಶೇ 70 ರಷ್ಟು ಭಾರತೀಯರೇ ಇದ್ದು, ಪ್ರತಿ ವರ್ಷ ಭಾರತದಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಜನ ಅಮೆರಿಕಕ್ಕೆ ತೆರಳುತ್ತಾರೆ. ಇದೀಗ H-1B ವೀಸಾ ವಿತರಣೆ ಪ್ರಮಾಣವನ್ನು ಶೇ. 15 ಕ್ಕೆ ಇಳಿಸಲು ಅಮೆರಿಕ ಚಿಂತಿಸಿದೆ ಎನ್ನಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+