ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ಗೆ ವಿಶ್ವ ಬ್ಯಾಂಕ್‌ನಿಂದ 3 ಬಿಲಿಯನ್ ಡಾಲರ್ ನೆರವು

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 02: ರಷ್ಯಾ ದಾಳಿಗೆ ಸಿಲುಕಿ ನಲುಗುತ್ತಿರುವ ಉಕ್ರೇನ್‌ಗೆ ವಿಶ್ವಸಂಸ್ಥೆ 3 ಬಿಲಿಯನ್ ಡಾಲರ್ ನೆರವು ಘೋಷಿಸಿದೆ.

ಅಷ್ಟೇ ಅಲ್ಲದೆ ಇದನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮನವಿ ಪುರಸ್ಕರಿಸಲಿದೆ.

ಪುಟಿನ್‌ ಒಡ್ಡಿದ ಸವಾಲನ್ನು ನಾವು ನಿಭಾಯಿಸಲು ಸಿದ್ದ: ಜೋ ಬೈಡೆನ್‌ಪುಟಿನ್‌ ಒಡ್ಡಿದ ಸವಾಲನ್ನು ನಾವು ನಿಭಾಯಿಸಲು ಸಿದ್ದ: ಜೋ ಬೈಡೆನ್‌

ಆರ್ಥಿಕ ಸಹಾಯ ಕೋರಿದ್ದ ಉಕ್ರೇನ್​ಗೆ ನೆರವು ನೀಡುವ ಕುರಿತು ಮುಂದಿನ ವಾರದಲ್ಲಿ ಮಂಡಳಿಯ ಸಭೆ ನಡೆಸಲಾಗುವುದು. ಸ್ಟ್ಯಾಂಡ್​ ಬೈ ಅರೇಂಜ್​ಮೆಂಟ್​ ಆಧಾರದ ಮೇಲೆ ಆ ದೇಶಕ್ಕೆ 2.2 ಬಿಲಿಯನ್​ ಹಣಕಾಸು ನೆರವನ್ನು ಶೀಘ್ರವೇ ನೀಡಲಾಗುವುದು. ಜೂನ್ ಅಂತ್ಯದ ವೇಳೆಗೆ ಎಲ್ಲ ನೆರವು ದೇಶಕ್ಕೆ ಸಿಗಲಿದೆ ಎಂದು ಉಭಯ ಸಂಸ್ಥೆಗಳು ತಿಳಿಸಿವೆ.

Ukraine Conflict: World Bank To Provide $3 Billion Support Package To Kyiv

ಹಲವರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿ ಪಲಾಯನ ಮಾಡುತ್ತಿದ್ದಾರೆ. ಉಕ್ರೇನ್​ ದಾಳಿಯಿಂದ ಜರ್ಝರಿತವಾಗಿದೆ. ಹೀಗಾಗಿ ವಿಶ್ವಬ್ಯಾಂಕ್​ ಮತ್ತು ಐಎಂಎಫ್​ ಉಕ್ರೇನ್​ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್​ನ ಅಧ್ಯಕ್ಷ ಡೇವಿಡ್​ ಮಾಲ್ಪಾಸ್​ ಮತ್ತು ಐಎಂಎಫ್​ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಉಕ್ರೇನ್​ಗೆ ಹಣಕಾಸು ಇಷ್ಟು ದೊಡ್ಡ ಪ್ಯಾಕೇಜ್​ ಘೋಷಣೆಯ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಉಂಟಾದ ಮಾನವ ಪ್ರಾಣ ಹಾನಿ ಮತ್ತು ಭೀಕರತೆ ಆತಂಕ ಮೂಡಿಸಿದೆ. ಸಾವಿರಾರು ಪ್ರಾಣಗಳು ಆಹುತಿಯಾಗಿವೆ.

ಉಕ್ರೇನ್‌ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖೆರ್ಸನ್ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ.

ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ.

ಕೀವ್, ಖಾರ್ಕಿವ್, ಖೇರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ. ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.

English summary
Amid the deteriorating situation and humanitarian crisis in Ukraine, the World Bank is preparing a USD 3 billion support package for the country in the coming months and the International Monetary Fund (IMF) is soon considering requests for emergency financing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X