ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವ ಟ್ವೀಟ್ ರಹಸ್ಯ ಸಂಜೆ ಬಯಲು
ವಾಷಿಂಗ್ಟನ್, ಅಕ್ಟೋಬರ್ 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಅವರು ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್ ಸಂಚಲನ ಮೂಡಿಸಿದೆ. ಈ ಟ್ವೀಟ್ ಬಗ್ಗೆ ಅನೇಕ ಊಹಾಪೋಹ ಸುದ್ದಿಗಳು ಹಬ್ಬುವುದನ್ನು ಮನಗಂಡ ಶ್ವೇತ ಭವನ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಭಾನುವಾರ ಸಂಜೆ 6.30(ಭಾರತೀಯ ಕಾಲಮಾನ ಪ್ರಕಾರ) ಸುಮಾರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಮಹತ್ವದ ಹೇಳಿಕೆ' ನೀಡಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನದ ವಕ್ತಾರ ಹೊಗನ್ ಗಿಡ್ಲೆ ಹೇಳಿದ್ದಾರೆ.
'Something very big has just happened' ಎಂದು ಟ್ರಂ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆದಿದೆ. ಈ ಸಮಯಕ್ಕೆ 57.7K ಕಾಮೆಂಟ್, 39.9K ರೀಟ್ವೀಟ್ ಹಾಗೂ 143K ಬಾರಿ ಲೈಕ್ಸ್ ಪಡೆದುಕೊಂಡು ಸಕತ್ತಾಗಿ ವೈರಲ್ ಆಗಿದೆ.

ಟ್ರಂಪ್ ಟ್ವೀಟ್ ಅರ್ಥ ಏನಿರಬಹುದು ಎಂದು ಟ್ವಿಟ್ಟಿಗರು ತಲೆಕೆಡಿಸಿಕೊಂಡಿದ್ದು, ಹಾಸ್ಯಮಯವಾಗಿ ಟ್ವೀಟ್ ಮಾಡಿ ಗೇಲಿ ಮಾಡಿದ್ದಾರೆ.
Something very big has just happened!
— Donald J. Trump (@realDonaldTrump) October 27, 2019
ಈ ನಡುವೆ ಸಿರಿಯಾದಲ್ಲಿ ಯುಎಸ್ ಪಡೆ ಕಾರ್ಯಾಚರಣೆ ನಡೆಸಿ ಐಎಸ್ಐಎಸ್ ಉಗ್ರ ಅಬು ಬಾಕರ್ ಅಲ್ ಬಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಟ್ರಂಪ್ ಘೋಷಿಸಲಿದ್ದಾರೆ ಎಂದು ಎನ್ ಬಿಸಿ ನ್ಯೂಸ್ ವರದಿ ಮಾಡಿದೆ.












Click it and Unblock the Notifications