ಚೀನಾದ ಜೊತೆ ವ್ಯಾಪಾರ ಒಪ್ಪಂದ ಅಂತ್ಯ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ , ಏಪ್ರಿಲ್ 22: ಚೀನಾದ ಜೊತೆ ವ್ಯಾಪಾರ ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Recommended Video

      ಹೋಮ್ ಕ್ವಾರಂಟೇನ್ ಇರೋರೆಲ್ಲಾ ಮನೆ ಕೆಲಸದಲ್ಲಿ ಹೆಂಗಸರಿಗೆ ಸಹಾಯ ಮಾಡಬೇಕು | Home Quarantine | Oneindia Kannada

      ಒಂದೊಮ್ಮೆ ಕೊರೊನಾವನ್ನು ಉದ್ದೇಶಪೂರ್ವಕವಾಗಿಯೇ ವಿಶ್ವದಾದ್ಯಂತ ಚೀನಾ ಹರಡಿರುವುದು ಖಚಿತವಾದರೆ ಭಾರಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

      ಚೀನಾದಲ್ಲಿ 84,788 ಮಂದಿಗೆ ಕೊರೊನಾ ಸೋಂಕು ತಗುಲಿದೆ.4632 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 62,4600 ಮಂದಿಗೆ ಕೊರೊನಾ ಹರಡಿದ್ದು, 45,290 ಮಂದಿ ಮೃತಪಟ್ಟಿದ್ದಾರೆ.

      ಮಾರಣಾಂತಿಕ ಕೋವಿಡ್ 19 ವೈರಸ್ ಜಗತ್ತಿನ 180ಕ್ಕೂ ಅಧಿಕ ದೇಶಗಳನ್ನು ಕಂಗೆಡಿಸಿದೆ. ಈ ಸೋಂಕು ಹರಡಲು ಚೀನಾ ಕಾರಣ ಎಂದು ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುವ ಮೂಲಕ ವಾಕ್ಸಮರ ನಡೆಯುತ್ತಿದೆ ಏತನ್ಮಧ್ಯೆ ಕೋವಿಡ್ 19 ವೈರಸ್ ಹರಡಲು ಕಾರಣವಾದ ಚೀನಾದ ವಿರುದ್ಧ ಅಮೆರಿಕದ ಮಿಸೌರಿ ರಾಜ್ಯ ಮೊಕದ್ದಮೆ ದಾಖಲಿಸಿದೆ. ಕೋವಿಡ್ 19 ವೈರಸ್ ತಡೆಗಟ್ಟಲು ಅಸಮರ್ಪಕ ಕಾರ್ಯತಂತ್ರ ಹಾಗೂ ಉದ್ದೇಶ ಪೂರ್ವಕವಾದ ವಂಚನೆ ಎಸಗಿದ್ದರಿಂದ ನಷ್ಟ ಭರಿಸಬೇಕೆಂದು ಮಿಸೌರಿ ರಾಜ್ಯ ಹೇಳಿದೆ.

      ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು

      ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು

      ಚೀನಾ ಹಾಗೂ ಅಮೆರಿಕ ಜನವರಿಯಲ್ಲಿ ವ್ಯಾಪಾರ ಒಪ್ಪಂದದ ಮೊದಲನೇ ಹಂತಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಚೀನಾ ಅಮೆರಿಕದಿಂದ 200 ಶತಕೋಟಿ ಅಮೆರಿಕ ಡಾಲರ್ ಮೊತ್ತದ ಉತ್ಪನ್ನಗಳನ್ನು ಖರೀದಿಸಬೇಕಿದೆ ಎಂದು ತಿಳಿಸಿದ್ದಾರೆ.

      ಒಪ್ಪಂದದಲ್ಲಿ ತಿದ್ದುಪಡಿ

      ಒಪ್ಪಂದದಲ್ಲಿ ತಿದ್ದುಪಡಿ

      ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್ ಪರಿಶೀಲನಾ ಆಯೋಗವು ಈ ಒಪ್ಪಂದದಲ್ಲಿ ಚೀನಾ ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿತ್ತು. ಇದರ ನೈಸರ್ಗಿಕ ವಿಕೋಪ ಅಥವಾ ಇನ್ಯಾವುದೇ ವಿಕೋಪದ ವೇಳೆ ಎರಡೂ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಮಾಡಬಹುದಾಗಿದೆ.

      ಖರ್ಚು ಕಡಿಮೆ ಮಾಡುವಂತೆ ಒತ್ತಾಯ

      ಖರ್ಚು ಕಡಿಮೆ ಮಾಡುವಂತೆ ಒತ್ತಾಯ

      ಒಂದು ವರ್ಷದಲ್ಲಿ 200,300,400,500 ಶತಕೋಟಿ ಅಮೆರಿಕನ್ ಡಾಲರ್, ಅವರು ಈ ರೀತಿ ಮಾಡಿದ್ದಾದರೂ ಏಕೆ, ಕಳೆದ ವರ್ಷವನ್ನೇ ನೋಡಿ ಖರ್ಚು ಕಡಿಮೆಯಾಗಿತ್ತು. ಚೀನಾ ವ್ಯಾಪಾರದಲ್ಲಿನ ಖರ್ಚು ಕಡಿಮೆ ಮಾಡುವಂತೆ ಟ್ರಂಪ್ ವ್ಯಾಪಾರ ಯುದ್ಧ ಆರಂಭಿಸಿದ್ದರು.

      ಚೀನಾ ಲ್ಯಾಬ್‌ನಿಂದಲೇ ಕೊರೊನಾ ಉತ್ಪತ್ತಿ

      ಚೀನಾ ಲ್ಯಾಬ್‌ನಿಂದಲೇ ಕೊರೊನಾ ಉತ್ಪತ್ತಿ

      ಚೀನಾ ಲ್ಯಾಬ್‌ನಿಂದಲೇ ಕೊರನಾ ಉತ್ಪತ್ತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದ ವಿರುದ್ಧ ಮೃದು ಧೋರಣೆ ಅನುಸರಿಸುತ್ತಿದೆ. ಎಂದು ಟ್ರಂಪ್ ಮೊದಲು ಆರೋಪಿಸುತ್ತಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+