ಕೊರೊನಾ ಲಸಿಕೆ: ಚೀನಾದೊಂದಿಗೆ ಕೆಲಸ ಮಾಡಲು ಸಿದ್ಧ ಎಂದ ಟ್ರಂಪ್

ವಾಷಿಂಗ್ಟನ್, ಜುಲೈ 22: ಒಂದೊಮ್ಮೆ ಮೊದಲ ಕೊರೊನಾ ಲಸಿಕೆಯನ್ನು ಚೀನಾ ಕಂಡು ಹಿಡಿದರೆ ಚೀನಾದ ಜೊತೆ ಕೆಲಸ ಮಾಡಲು ಅಮೆರಿಕ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕವು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಯಾವ ದೇಶದ ಜೊತೆಗಾದರೂ ಕೆಲಸ ಮಾಡಲು ಸಿದ್ಧವಿದೆ. ಚೀನಾ ಒಂದೊಮ್ಮೆ ಕೊವಿಡ್ 19ಗೆ ಲಸಿಕೆಯನ್ನು ಕಂಡು ಹಿಡಿಯುತ್ತದೆ ಎಂದಾದರೆ ಅದರ ಜೊತೆಗೂ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ನಾವು ಯಾರ ಜೊತೆಗೆ ಬೇಕಾದರೂ ಕೆಲಸ ಮಾಡುತ್ತೇವೆ, ಅಂತ್ಯದಲ್ಲಿ ಉತ್ತಮ ಫಲಿತಾಂಶ ಬಂದರಾಯಿತು. ಎಂದಾಗ ಒಂದೊಮ್ಮೆ ಚೀನಾವೇ ಲಸಿಕೆ ಕಂಡು ಹಿಡಿದರೆ ಏನು ಮಾಡುತ್ತೀರಿ ಎಂದು ಟ್ರಂಪ್ ಗೆ ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ನೀಡಿದರು.

Trump Says Will US Work With China If It Develops Vaccine First

ಅಮೆರಿಕದಲ್ಲಿಯೂ ಲಸಿಕೆ ಸಂಶೋಧನೆ ಉತ್ತಮವಾಗಿಯೇ ನಡೆದಿದೆ. ಶೀಘ್ರದಲ್ಲೇ ಲಸಿಕೆಯು ಅಂತಿಮ ಹಂತವನ್ನು ತಲುಪಲಿದೆ. ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ಹರಡಲು ಆರಂಭವಾಗಿತ್ತು.

ಕೊರೊನಾ ವೈರಸ್ ಕುರಿತ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದ್ದಕ್ಕೆ ಅಮೆರಿಕ ಚೀನಾದ ವಿರುದ್ಧ ಕಿಡಿ ಕಾರಿತ್ತು. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ, ಅನುದಾನವನ್ನು ಕೂಡ ತಡೆ ಹಿಡಿದಿತ್ತು. ಬಳಿಕ ಸದಸ್ಯತ್ವದಿಂದಲೂ ಹೊರಗೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+