• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಷಿಂಗ್ಟನ್ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ಭಾರತೀಯನ ನೇಮಿಸಿದ ಟ್ರಂಪ್

|

ವಾಷಿಂಗ್ಟನ್ ಜೂನ್ 26: ವಾಷಿಂಗ್ಟನ್‌ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಕೋರ್ಟ್ ಆಫ್ ಅಪೀಲ್ಸ್‌ಗೆ ಭಾರತ ಮೂಲದವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ನ್ಯಾಯಾಧೀಶರ ಸ್ಥಾನಕ್ಕೆ ಭಾರತದ ಮೂಲಕ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?

ಅಪರಾಧ ಕೃತ್ಯಗಳ ಕುರಿತಂತೆ ಸುಪ್ರೀಂಕೋರ್ಟ್‌ ಹಾಗೂ ಫೆಡರಲ್‌ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ 30 ಮಂದಿ ವಕೀಲರಿಗೆ ಇವರು ಮಾರ್ಗದರ್ಶನ ನೀಡಿದ್ದಾರೆ.

ಶಂಕರ್ ಅವರು ಅಟಾರ್ನಿ ಜನರಲ್‌ ಜಾನ್ ಮಾರ್ಷಲ್ ಪ್ರಶಸ್ತಿ ಮತ್ತು ಅಪೂರ್ವ ಸೇವೆಗಾಗಿ ಸಹಾಯಕ ಅಟಾರ್ನಿ ಜನರಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಮೆರಿಕನ್ ವಿಶ್ವವಿದ್ಯಾಲಯದ ವಾಷಿಂಗ್ಟನ್ ಕಾಲೇಜ್ ಆಫ್ ಲಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

15 ವರ್ಷಗಳ ಅವಧಿಗೆ ಈ ನೇಮಕಾತಿಯಾಗಿದ್ದು, ಇದನ್ನು ಸೆನೆಟ್ ಅನುಮೋದಿಸಬೇಕಾಗಿದೆ. ನ್ಯಾಯಾಂಗ ಇಲಾಖೆಯಲ್ಲಿನ ಅಪರಾಧ ವಿಭಾಗದ ಮೇಲ್ಮನವಿ ಪ್ರಾಧಿಕಾರದ ಉಪ ಮುಖ್ಯಸ್ಥರಾಗಿರುವ ಶಂಕರ್ ಅವರ ನಾಮನಿರ್ದೇಶನವನ್ನು ಶ್ವೇತಭವನವು ಗುರುವಾರ ಪ್ರಕಟಿಸಿದೆ.

ವಿದೇಶಿ ಭ್ರಷ್ಟಾಚಾರ ಕಾಯ್ದೆ ಮತ್ತು ಸಂಬಂಧಿತ ಅಪರಾಧಗಳ ಕಾಯ್ದೆಗಳ ಅಡಿಯಲ್ಲಿರುವ ಅಪರಾಧ ಪ್ರಕರಣಗಳ ಬಗ್ಗೆ ನ್ಯಾಯಾಂಗ ಇಲಾಖೆಯಲ್ಲಿ ವಿಜಯ್‌ ಶಂಕರ್‌ ಅವರು ಅನೇಕ ತನಿಖೆಗಳನ್ನು ನಡೆಸಿದ್ದಾರೆ.

9/11ರಲ್ಲಿ ಅಮೆರಿಕದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಅವರ ರೂವಾರಿಯಾದ ಖಲೀದ್ ಶೇಖ್ ಮೊಹಮ್ಮದ್ ಹಾಗೂ ಇತರರ ವಿರುದ್ಧ ತನಿಖೆ ನಡೆಸಲು ನಿಯೋಜನೆಗೊಂಡಿರುವ ತಂಡದಲ್ಲಿ ಇವರದ್ದು ಅಪಾರ ಕೊಡುಗೆ ಇರುವುದಾಗಿ ಶ್ಲಾಘನೆ ವ್ಯಕ್ತವಾಗಿದೆ.

ಇವರು ಈ ಹುದ್ದೆಗೆ ಅರ್ಹ ವ್ಯಕ್ತಿ ಎಂದು ವಾಷಿಂಗ್ಟನ್‌ನ ಸೌತ್‌ ಏಷ್ಯನ್ ಬಾರ್ ಅಸೋಸಿಯೇಷನ್ ಶ್ಲಾಘನೆ ವ್ಯಕ್ತಪಡಿಸಿದೆ.

English summary
US President Donald Trump has nominated Indian-American Justice Department official, Vijay Shanker, to be a judge at the District of Columbia Court of Appeals in Washington.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X